ADVERTISEMENT

ರೆಸಿಪಿ | ಬೆಳ್ಳುಳ್ಳಿ ಎಗ್‌ರೈಸ್‌: ಮನೆಯಲ್ಲಿಯೆ ಸುಲಭವಾಗಿ ಹೀಗೆ ತಯಾರಿಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2025, 6:42 IST
Last Updated 19 ನವೆಂಬರ್ 2025, 6:42 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

ಮನೆಯಲ್ಲಿ ರಾತ್ರಿ ಉಳಿದ ಅನ್ನವನ್ನು ಏನು ಮಾಡಬೇಕು ಎಂದು ಯೋಚಿಸುವ ಬದಲು, ಅದರಿಂದ ರುಚಿಕರವಾದ ಬೆಳ್ಳುಳ್ಳಿ ಎಗ್‌ ರೈಸ್‌ ತಯಾರಿಸಿದರೆ, ಮಕ್ಕಳು ಸೇರಿದಂತೆ ದೊಡ್ಡವರು ಕೂಡ ಬಾಯಿ ಚಪ್ಪರಿಸಿಕೊಂಡು ಸೇವಿಸುತ್ತಾರೆ.

ಬೆಳ್ಳುಳ್ಳಿ ಎಗ್‌ರೈಸ್ ಮಾಡಲು ಬೇಕಾಗುವ ಸಾಮಗ್ರಿಗಳು:

ADVERTISEMENT
  • ಅನ್ನ

  • ಮೊಟ್ಟೆ

  • ಬೆಳ್ಳುಳ್ಳಿ

  • ಈರುಳ್ಳಿ 

  • ಹಸಿಮೆಣಸಿನಕಾಯಿ

  • ಉಪ್ಪು

  • ಕರಿ ಮೆಣಸಿನ ಪುಡಿ

  • ಸಾಸುವೆ ಎಣ್ಣೆ 

  • ಸೋಯಾ ಸಾಸ್

ಮೊದಲು ಒಂದು ಬಾಣೆಲೆಗೆ ಎಣ್ಣೆ ಹಾಕಿಕೊಂಡು, ಸುಲಿದ ಬೆಳ್ಳುಳ್ಳಿಯನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.

ಬಳಿಕ ಉರಿಯನ್ನು ಕಡಿಮೆ ಮಾಡಿ ಮೊಟ್ಟೆಯನ್ನು ಒಡೆದು ಬಾಣೆಲೆಗೆ ಹಾಕಿ. ಅದಕ್ಕೆ ಉಪ್ಪು, ಕರಿ ಮೆಣಸಿನ ಪುಡಿ ಹಾಗೂ ಅನ್ನವನ್ನು ಸೇರಿಸಿ 2 ರಿಂದ 3 ನಿಮಿಷಗಳ ಸಮಯ ಚೆನ್ನಾಗಿ ಬೇಯಿಸಿಕೊಂಡು ಮಿಶ್ರಣ ಮಾಡಿದರೆ, ಬೆಳ್ಳುಳ್ಳಿ ಎಗ್‌ರೈಸ್ ಸವಿಯಲು ಸಿದ್ಧವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.