ADVERTISEMENT

ಇದೇನು ಅಕ್ಕಿ ಉಸ್ಲಿ - ನೋಡಿ ಕಲಿಯಿರಿ

​ಪ್ರಜಾವಾಣಿ ವಾರ್ತೆ
Published 15 ಮೇ 2021, 1:27 IST
Last Updated 15 ಮೇ 2021, 1:27 IST

ಬೇಕಾಗುವ ಸಾಮಗ್ರಿಗಳು: ಅಕ್ಕಿ 1 ಕಪ್, ಎಣ್ಣೆ ಮೂರರಿಂದ ನಾಲ್ಕು ಚಮಚ, ಸಾಸಿವೆ ಅರ್ಧ ಚಮಚ, ಕಡಲೆ ಬೇಳೆ 1ಚಮಚ, ಹಸಿಮೆಣಸಿನಕಾಯಿ 6, ಈರುಳ್ಳಿ 1, ಟೊಮೊಟೊ 1, ಹುರುಳಿಕಾಯಿ, ಕ್ಯಾರೆಟ್, ನವಿಲುಕೋಸು ಎಲ್ಲಾ ಸೇರಿ1 ಕಪ್, ಬಟಾಣಿ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಹುರಿಗಡಲೆ 1 ಟೇಬಲ್ ಚಮಚ, ತೆಂಗಿನತುರಿ ಸ್ವಲ್ಪ , ಕೊತ್ತಂಬರಿ ಸೊಪ್ಪು ಸ್ವಲ್ಪ.

ಮಾಡುವ ವಿಧಾನ: ಮೊದಲು ಅಕ್ಕಿಯನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಬೇಕು, ನಂತರ ಒಂದು ಕುಕ್ಕರ್ ಗೆ ಎಣ್ಣೆಯನ್ನು ಹಾಕಿ ಅದಕ್ಕೆ ಸಾಸಿವೆ, ಕಡಲೆಬೇಳೆ ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ, ಇದಕ್ಕೆ ಹೆಚ್ಚಿದ ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಹಾಕಿ ಹುರಿಯಿರಿ. ನಂತರ ತರಕಾರಿ ಬಟಾಣಿ ಎಲ್ಲಾ ಸೇರಿಸಿ ಮತ್ತೆ ಸ್ವಲ್ಪಹುರಿಯಿರಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಎರಡು ಲೋಟ ನೀರು ಹಾಕಿ ಕುಡದಿಸಬೇಕು. ಕುದಿ ಬಂದ ನಂತರ ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ ಕುಕ್ಕರ್ ಮುಚ್ಚಿ 2 ಕೂಗು ಕೂಗಿಸಿ ಕೊಳ್ಳಿ. ಕುಕ್ಕರ್ ಆರಿದ ನಂತರ ಇದಕ್ಕೆ ಪುಡಿಮಾಡಿದ ಹುರಿಗಡಲೆ ತೆಂಗಿನತುರಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಯಾದ ಅಕ್ಕಿ ಉಸ್ಲಿ ಸವಿಯಲು ಸಿದ್ಧ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ..
https://bit.ly/PrajavaniApp

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT