ADVERTISEMENT

ಹೀಗೆ ಮಾಡಿ ಕಡಲೆಕಾಳು ಉಸ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 13:03 IST
Last Updated 27 ಜನವರಿ 2026, 13:03 IST
   

ಸಂಜೆ ಕಾಫಿ ಜೊತೆ ಏನಾದರು ಸ್ನ್ಯಾಕ್ಸ್‌  ಮಾಡುವ ಯೋಚನೆ ಇದ್ದರೆ ಕಡಲೆಕಾಳು ಉಸ್ಲಿ ಟ್ರೈ ಮಾಡಬಹುದು. ಕಡಲೆಕಾಳಿನಲ್ಲಿ ಪೋಷಕಾಂಶ ಹೇರಳವಾಗಿದೆ. ಆದರಿಂದ ಇದನ್ನು ಹಾಗೆ ಸೇವಿಸಲು ಆಗದಿದ್ದರೆ ಮೊಳಕೆಕಟ್ಟಿ ಸೇವಿಸಬಹುದು. ಕಡಲೆಕಾಳು ಉಸ್ಲಿ ರೆಸಿಪಿ ಬಗ್ಗೆ ಇಲ್ಲಿದೆ ಮಾಹಿತಿ.

ಕಡಲೆಕಾಳು ಉಸ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು

ನೆನೆಸಿಟ್ಟ ಕಡಲೆಕಾಳು– 1ರಿಂದ2 ಕಪ್
ತೆಂಗಿನಕಾಯಿ ತುರಿ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ– ಅರ್ಧ ಚಮಚ
ಅಡುಗೆ ಎಣ್ಣೆ
ಒಗ್ಗರಣೆಗೆ(ಸಾಸಿವೆ, ಒಣ ಮೆಣಸು, ಕರಿಬೇವು)
ಅರಿಶಿಣ– ಅರ್ಧ ಚಮಚ
ಒಣ ಮೆಣಸಿನಕಾಯಿ

ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ  ನೆನೆಸಿಟ್ಟ  ಕಡಲೆಕಾಳಿಗೆ 1ರಿಂದ2 ಲೋಟ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿಕೊಳ್ಳಿ.
ಬಳಿಕ ಒಂದು ಬಾಣಲೆಯನ್ನು ಕಾಯಲು ಇಟ್ಟುಕೊಳ್ಳಿ.

ಅದಕ್ಕೆ 1ರಿಂದ2 ಚಮಚ ಅಡುಗೆ ಎಣ್ಣೆ, ಸಾಸಿವೆ, ತುಂಡು ಮಾಡಿಕೊಂಡ ಒಣ ಮೆಣಸಿನಕಾಯಿ, ಕರಿಬೇವು ಹಾಗೂ ಅರಿಶಿಣ ಪುಡಿ ಹಾಕಿ ಒಗ್ಗರಣೆ ತಯಾರಿಸಿಕೊಳ್ಳಿ. 

ಬಳಿಕ ಬೇಯಿಸಿದ ಕಡಲೆಕಾಳಿನ ನೀರು ಬೇರ್ಪಡಿಸಿಕೊಳ್ಳಿ.

ADVERTISEMENT

ನಂತರ ಬೆಂದ ಕಡೆಲೆಕಾಳನ್ನು ಒಗ್ಗರಣೆಗೆ ಹಾಕಿಕೊಳ್ಳಿ ಅದಕ್ಕೆ ತೆಂಗಿನ ಕಾಯಿ ತುರಿ, ನಿಂಬೆ ರಸ  ಸೇರಿಸಿ ಮಿಶ್ರಣ ಮಾಡಿಕೊಳ್ಳಿ.

ಸವಿಯಲು ಸಿದ್ಧ ಕಡಲೆಕಾಳು ಉಸ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.