ADVERTISEMENT

ಮಹಾ ಶಿವರಾತ್ರಿಯಂದು ವಿಶೇಷವಾದ ಸಬ್ಬಕ್ಕಿ ಪಾಯಸ ಹೀಗೆ ಮಾಡಿಕೊಳ್ಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಫೆಬ್ರುವರಿ 2026, 6:25 IST
Last Updated 13 ಫೆಬ್ರುವರಿ 2026, 6:25 IST
<div class="paragraphs"><p>ಸಬ್ಬಕ್ಕಿ ಪಾಯಸ </p></div>

ಸಬ್ಬಕ್ಕಿ ಪಾಯಸ

   

ಎಐ ಚಿತ್ರ

ಹಬ್ಬ ಹರಿದಿನಗಳು ಬಂತೆಂದರೆ ಸಾಕು ಗೃಹಿಣಿಯರು ಮನೆಯಲ್ಲಿ ಬಗೆ ಬಗೆಯ ಸಿಹಿ ತಿನಿಸುಗಳು, ಪಾಯಸಗಳು ಮಾಡುತ್ತಾರೆ. ಅದರಲ್ಲೂ ಮಹಾ ಶಿವರಾತ್ರಿ ಲಕ್ಷಾಂತರ ಭಕ್ತರಿಗೆ ಬಹಳ ವಿಶೇಷವಾದ ಹಬ್ಬವಾಗಿದೆ. ಈ ವರ್ಷ ಫೆಬ್ರುವರಿ 15ರಂದು ಮಹಾ ಶಿವರಾತ್ರಿ ಹಬ್ಬ ಬಂದಿದೆ. ಶಿವನನ್ನು ನಂಬುವ ಲಕ್ಷಾಂತರ ಜನರು ಈ ಹಬ್ಬವನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ಮಾತ್ರವಲ್ಲ, ಈ ದಿನ ಅನೇಕರು ಉಪವಾಸ ಕೂಡ ಇರುತ್ತಾರೆ. ಅಂತಹವರು ಶಿವರಾತ್ರಿ ಹಬ್ಬಕ್ಕೆ ಮನೆಯಲ್ಲೇ ವಿಶೇಷವಾದ ಸಬ್ಬಕ್ಕಿ ಪಾಯಸವನ್ನು ಮಾಡಬಹುದು.

ADVERTISEMENT

ಸಬ್ಬಕ್ಕಿ ಪಾಯಸ

ಸಾಬುದಾನ ಅಥವಾ ಸಬ್ಬಕ್ಕಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಬ್ಬಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣದ ಅಂಶವಿರುತ್ತದೆ. ಇದು ಮೂಳೆಗಳನ್ನು ಬಲಪಡಿಸುವುದಲ್ಲದೇ, ನರಮಂಡಲವನ್ನು ಚುರುಕುಗೊಳಿಸುತ್ತದೆ. ಜೊತೆಗೆ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಸಾಮಾನ್ಯವಾಗಿ ಮನೆಯಲ್ಲಿ ಸಬ್ಬಕ್ಕಿ ವಡೆ, ಉಪ್ಪಿಟ್ಟು ಮೊದಲಾದ ಆಹಾರ ತಯಾರಿಸಿ ಸವಿಯುತ್ತಾರೆ. ಆದರೆ ಉಪವಾಸದ ಸಂದರ್ಭದಲ್ಲಿ ಕೇವಲ 15ರಿಂದ 20 ನಿಮಿಷಗಳಲ್ಲಿ ಸಬ್ಬಕ್ಕಿ (ಸಾಬುದಾನ) ಪಾಯಸವನ್ನು ತಯಾರಿಸಬಹುದು. ಇದನ್ನು ಸೇವಿಸಿದರೆ ದೇಹಕ್ಕೆ ಶಕ್ತಿ ದೊರಕುತ್ತದೆ.

ಸಬ್ಬಕ್ಕಿ ಪಾಯಸ ಮಾಡಲು ಬೇಕಾಗಿರುವ ಸಾಮಾಗ್ರಿಗಳು:

ಸಬ್ಬಕ್ಕಿ, ಹಾಲು, ಸಕ್ಕರೆ, ಏಲಕ್ಕಿ ಪುಡಿ, ತುಪ್ಪ, ಗೋಡಂಬಿ, ದ್ರಾಕ್ಷಿ

ಮಾಡುವ ವಿಧಾನ:

ಮೊದಲು ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು, 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಪಾತ್ರೆಯಲ್ಲಿ ನೆನೆಸಿದ ಸಬ್ಬಕ್ಕಿ ಮತ್ತು ನೀರು ಅಥವಾ ಹಾಲನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ. ಬಳಿಕ ಸಬ್ಬಕ್ಕಿ ಸಂಪೂರ್ಣವಾಗಿ ಬೆಂದ ಬಳಿಕ ಸಕ್ಕರೆ ಸೇರಿಸಿ, 4-5 ನಿಮಿಷಗಳ ಕಾಲ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ. ಬಳಿಕ ತುಪ್ಪದಲ್ಲಿ ಗೋಡಂಬಿ, ಬಾದಾಮಿ ಮತ್ತು ದ್ರಾಕ್ಷಿಯನ್ನು ಕಂದು ಬಣ್ಣಕ್ಕೆ ಬರುವವರೆಗೆ ಹುರಿದು ಪಾಯಸಕ್ಕೆ ಸೇರಿಸಿ ಮಿಶ್ರಣ ಮಾಡಿ. ಈಗ ರುಚಿಕರವಾದ ಸಬ್ಬಕ್ಕಿ ಪಾಯಸ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.