ADVERTISEMENT

Malnad Recipe| ಕೆಸುವಿನ ರುಚಿಕರ ಈ ಪಲ್ಯ ಮಾಡಲು ಹೆಚ್ಚು ಹೊತ್ತು ಬೇಕಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2025, 13:10 IST
Last Updated 22 ಡಿಸೆಂಬರ್ 2025, 13:10 IST
   

ಮಲೆನಾಡು, ಕರಾವಳಿ ಭಾಗದ ಜನರು ಹಿತ್ತಲಲ್ಲಿ ಬೆಳೆದ ತರಕಾರಿ, ಸೊಪ್ಪುಗಳನ್ನು ಬಳಸಿಕೊಂಡು ಅಡುಗೆ ಮಾಡುತ್ತಾರೆ. ಅದರಲ್ಲೂ ಕೆಸುವಿನ ಪಲ್ಯ  ಮಲೆನಾಡಿನ ಅನೇಕರ ನೆಚ್ಚಿನ ಆಹಾರವಾಗಿದೆ. ಇದನ್ನು ಕೇವಲ 7 ವಸ್ತುಗಳಿಂದ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ  ಸಾಮಗ್ರಿಗಳು
ಕತ್ತರಿಸಿ, ತೊಳೆದುಕೊಂಡ ಕೆಸುವಿನ ಎಲೆ
ಬೆಳ್ಳುಳ್ಳಿ – 4ರಿಂದ5 ಎಸಳು
ಜೀರಿಗೆ ಮೆಣಸು ಅಥವಾ ಹಸಿರುಮೆಣಸಿನಕಾಯಿ – ಅಗತ್ಯಕ್ಕೆ ತಕ್ಕಷ್ಟು
ನಿಂಬೆ ಹುಳಿ– ಅಗತ್ಯಕ್ಕೆ ತಕ್ಕಷ್ಟು

ಸಾಸಿವೆ–ಕಾಲು ಚಮಚ
ಅಡುಗೆ ಎಣ್ಣೆ–2ರಿಂದ3 ಚಮಚ

ಉಪ್ಪು– ರುಚಿಗೆ ತಕ್ಕಷ್ಟು

ADVERTISEMENT

ಒಣ ಮೆಣಸು– 1ರಿಂದ 2

ಮಾಡುವ ವಿಧಾನ: ಮಣ್ಣಿನ ಮಡಿಕೆ ಅಥವಾ ಪಾತ್ರೆಗೆ ಕತ್ತರಿಸಿಕೊಂಡ ಕೆಸುವಿನ ಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಬೇಯಿಸಿಕೊಳ್ಳಿ. ಬೆಂದ ಬಳಿಕ, ಹದಕ್ಕೆ ಬರುವಂತೆ ತಿರುಗಿಸಿಕೊಳ್ಳಿ. ಅಥವಾ ಬೇಯಸಿಕೊಂಡ ಸೊ‌ಪ್ಪನ್ನು ರುಬ್ಬಿಕೊಳ್ಳಿ. ನಂತರ ಅದಕ್ಕೆ ನಿಂಬೆ ಹುಳಿ, ಒಂದೆರಡು  ಜಜ್ಜಿಕೊಂಡ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 10 ನಿಮಿಷ ಬೇಯಿಸಿಕೊಳ್ಳಿ.

ಕಾದ ಎಣ್ಣೆಗೆ ಜಜ್ಜಿಕೊಂಡ ಬೆಳ್ಳುಳ್ಳಿ, ಸಾಸಿವೆ, ಒಣ ಮೆಣಸು ಹಾಕಿ ಒಗ್ಗರಣೆ ತಯಾರಿಸಿ ಬೇಯಿಸಿಕೊಂಡ ಕೆಸುವಿಗೆ ಹಾಕಿ. ಘಮ ಘಮ ಕೆಸುವಿನ ಪಲ್ಯ ಸವಿಯಲು ಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.