ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಪ್ರತಿ ಮದುವೆ ಸಮಾರಂಭದಲ್ಲಿ ಮಾಡುವ ಮನೊಲಿ ಕಡಲೆ ಸುಕ್ಕಾ ಮಸಾಲ. ಚಪಾತಿ, ಅನ್ನದ ಜೊತೆ ಪಲ್ಯದ ರೀತಿಯಲ್ಲಿ ತಿನ್ನಬಹುದಾದ ಈ ಖಾದ್ಯವನ್ನು ಸ್ನ್ಯಾಕ್ಸ್ ರೀತಿಯಲ್ಲಿಯೂ ಸೇವಿಸಬಹುದು. ನೀರ್ ದೋಸೆಗಂತೂ ಇದು ಬೆಸ್ಟ್ ಕಾಂಬಿನೇಷನ್. ಇದರ ಮಸಾಲೆ ಘಮವೇ ನಿಮ್ಮ ಬಾಯಲ್ಲಿ ನೀರೂರಿಸುತ್ತದೆ. ಈ ಮಂಗಳೂರು ಶೈಲಿಯ ಮನೊಲಿ (ತೊಂಡೆಕಾಯಿ) ಕಡಲೆ ಸುಕ್ಕಾ ಮಸಾಲಾ ರೆಸಿಪಿಯನ್ನು ನಿಮಗಾಗಿ ಮಾಡಿ ತೋರಿಸಿದ್ದಾರೆ ಆದರ್ಶ ತತ್ಪತಿ. ನಿಮ್ಮ ಹಬ್ಬದ ಸಡಗರವನ್ನು ಹೆಚ್ಚಿಸಲು, ಆದರ್ಶ ಅವರಿಗೆ ಸಾಥ್ ನೀಡಿ, ಈ ಖಾದ್ಯ ಮಾಡಿದ್ದಾರೆ ನಟಿ ರೂಪಿಕಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.