ADVERTISEMENT

ಮಾವಿನ ಹಣ್ಣಿನ ಕ್ಯಾಪಚಿನೊ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 11:25 IST
Last Updated 9 ಜೂನ್ 2020, 11:25 IST
   

ಬೇಸಿಗೆಕಾಲ ಬಂತೆಂದರೆ ಮಾವಿನಹಣ್ಣಿನ ಸುಗ್ಗಿ ಆರಂಭವಾಗುತ್ತದೆ. ಈ ಸಮಯದಲ್ಲಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನಹಣ್ಣಿನದ್ದೇ ಕಾರುಬಾರು.

ಮಾವಿನಹಣ್ಣಿನಲ್ಲಿ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮಾವಿನ ಜ್ಯೂಸ್‌, ರಸಾಯನದ ಜೊತೆಗೆ ಕ್ಯಾಪಚಿನೊ ಕೂಡ ಇಂದಿನ ಟ್ರೆಂಡ್‌. ಮಾವಿನಹಣ್ಣಿನ ಕ್ಯಾಪಿಚಿನೊವನ್ನು ಮನೆಯಲ್ಲೂ ತಯಾರಿಸಿ ಸವಿಯಬಹುದು.

ಬೇಕಾಗುವ ಸಾಮಗ್ರಿಗಳು

ADVERTISEMENT

ಕಳಿತ ಮಾವಿನಹಣ್ಣು – 2
ತೆಂಗಿನಹಾಲು – 50 ಮಿಲಿ ಲೀಟರ್‌
ಮೆಣಸು – 1
ಕಂದು ಸಕ್ಕರೆ – 50ಗ್ರಾಂ
ಕಂದು ಉಪ್ಪು – 20 ಗ್ರಾಂ
ನಿಂಬೆರಸ – 4 ಚಮಚ
ಜೀರಿಗೆಪುಡಿ – 10 ಗ್ರಾಂ
ಐಸ್ ತುಂಡುಗಳು – 3 ರಿಂದ 4
ಪುದಿನ ಸೊಪ್ಪು – ಅಲಂಕರಿಸಲು

ತಯಾರಿಸುವ ವಿಧಾನ: ಮಾವಿನಹಣ್ಣನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. (ಒಂದಿಷ್ಟು ತುಂಡುಗಳನ್ನು ಅಲಂಕರಿಸಲು ತೆಗೆದಿಡಿ). ಉಳಿದ ತುಂಡುಗಳನ್ನು ತೆಂಗಿನಹಾಲು, ಮೆಣಸಿನಕಾಯಿ, ಕಂದು ಸಕ್ಕರೆ, ಉಪ್ಪು ಹಾಗೂ ಐಸ್‌ ತುಂಡುಗಳನ್ನು ಸೇರಿಸಿ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ನಿಂಬೆರಸ ಹಾಗೂ ಜೀರಿಗೆಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಗ್ಲಾಸ್ ತೆಗೆದುಕೊಂಡು ಮುಕ್ಕಾಲು ಗ್ಲಾಸ್ ಮಾವಿನರಸ ಸುರಿಯಿರಿ. ಅದರ ಮೇಲೆ ತೆಂಗಿನಹಾಲು ಸುರಿಯಿರಿ. ನಂತರ ಮಾವಿನಹಣ್ಣಿನ ತುಂಡು ಹಾಗೂ ಪುದಿನಸೊಪ್ಪಿನಿಂದ ಅಲಂಕರಿಸಿದರೆ ಮಾವಿನಹಣ್ಣಿನ ಕ್ಯಾ‍ಪಚಿನೊ ಸವಿಯಲು ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.