ADVERTISEMENT

ಹೊಟ್ಟೆಗೆ ತಂಪು ಮತ್ತು ಹಿತವಾದ ಹೆಸರುಕಾಳು ಉಸ್ಲಿ: ಸುಲಭ ವಿಧಾನದಲ್ಲಿ ಹೀಗೆ ಮಾಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2025, 12:44 IST
Last Updated 19 ನವೆಂಬರ್ 2025, 12:44 IST
   

ಅನೇಕ ಪೋಷಕಾಂಶಗಳನ್ನು ಹೊಂದಿರುವ ಹೆಸರು ಕಾಳು ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಈ ಕಾಳನ್ನು ಹಸಿ ತಿನ್ನಲು ಆಗದೇ ಇದ್ದರೆ, ಹೆಸರುಕಾಳಿನ ಉಸ್ಲಿ ಕೂಡ ಮಾಡಿ ಸೇವಿಸಬಹುದು. ಇದನ್ನು ಸುಲಭ ವಿಧಾನದಲ್ಲಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಹೆಸರುಕಾಳಿನ ಉಸ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು

2–3 ಕಪ್ ಹೆಸರು ಕಾಳು

ADVERTISEMENT

ಅರ್ಧ ಕಪ್ ಕಾಯಿತುರಿ

ಅಡುಗೆ ಎಣ್ಣೆ

ಕಾಲು ಚಮಚ ಅರಿಶಿನ ಪುಡಿ

ರುಚಿಗೆ ತಕ್ಕಷ್ಟು ಉಪ್ಪು

1–2 ಒಣ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ

ಕಾಲು ಚಮಚ ಸಾಸಿವೆ

ಕರಿ ಬೇವು

1–2 ಈರುಳ್ಳಿ

ಮಾಡುವ ವಿಧಾನ

ನೆನೆಸಿಟ್ಟ ಹೆಸರು ಕಾಳನ್ನು ತೊಳೆದು ಉಪ್ಪು ಹಾಕಿ ಬೇಯಿಸಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಒಗ್ಗರಣೆ ತಯಾರು ಮಾಡಿಕೊಳ್ಳಿ.

ಬೇಯಿಸಿದ ಹೆಸರು ಕಾಳಿನ ನೀರನ್ನು ಹಾಗೆ ಕುಡಿಯಬಹುದು. ಆದರೆ ಉಸ್ಲಿಗೆ ಬಳಸಬೇಡಿ.

ಒಗ್ಗರಣೆ ತಯಾರಿಸಲು: ಒಂದು ಬಾಣಲೆಗೆ 1–2 ಚಮಚ ಅಡುಗೆ ಎಣ್ಣೆ, ಸಾಸಿವೆ, ಕರಿಬೇವು, ಅರಶಿಣ ಪುಡಿ, ಹೆಚ್ಚಿಕೊಂಡ ಈರುಳ್ಳಿ, ಕಾಯಿತುರಿ, ಒಣ ಮೆಣಸಿನಕಾಯಿ, ಹಸಿರು ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ಅದಕ್ಕೆ ಬೇಯಿಸಿದ ಹೆಸರು ಕಾಳನ್ನು ಮಿಶ್ರಣ ಮಾಡಿ.

ಸವಿಯಲು ಸಿದ್ದ ಹೆಸರುಕಾಳಿನ ಉಸ್ಲಿ.!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.