
ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ
ಪ್ರಜಾವಾಣಿ ಚಿತ್ರ
ಬಿರಿಯಾನಿ ಎಂದರೆ ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ. ಬಿರಿಯಾನಿಯಲ್ಲಿ ವಿವಿಧ ಬಗೆಗಳಿವೆ. ಅದರಲ್ಲೂ ವಿಶೇಷವಾಗಿ ಅತೀ ಹೆಚ್ಚು ಜನರು ಇಷ್ಟಪಡುವುದು ನಾಟಿ ಸ್ಟೈಲ್ ದೊನ್ನೆ ಬಿರಿಯಾನಿಯನ್ನು. ಈ ನಾಟಿ ಸ್ಟೈಲ್ ದೊನ್ನೆ ಬಿರಿಯಾನಿಯನ್ನು ಮನೆಯಲ್ಲೇ ರುಚಿಕರವಾಗಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ.
ಬೇಕಾಗಿರುವ ಸಾಮಾಗ್ರಿಗಳು
ಅಡುಗೆ ಎಣ್ಣೆ, ಚಿಕನ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನಕಾಯಿ, ಕೊತ್ತಂಬರಿ, ಪುದೀನ, ಈರುಳ್ಳಿ, ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ ಪೌಡರ್, ಉಪ್ಪು, ಅಕ್ಕಿ ಮತ್ತು ನೀರು.
ತಯಾರಿಸುವ ವಿಧಾನ
ಮೊದಲು ಮಿಕ್ಸಿ ಜಾರಿಗೆ 5 ಮೆಣಸಿನಕಾಯಿ, ಒಂದು ಹಿಡಿ ಕೊತ್ತಂಬರಿ ಹಾಗೂ ಪುದೀನ ಹಾಕಿ ರುಬ್ಬಿಕೊಳ್ಳಿ. ಬಳಿಕ ಒಂದು ಕುಕ್ಕರ್‌ಗೆ ಎಣ್ಣೆ ಹಾಕಿ. ನಂತರ ಅದಕ್ಕೆ ಈರುಳ್ಳಿ ಹಾಕಿ. ಈರುಳ್ಳಿ ಕೆಂಪಗಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಹಾಗೇ ಬಿಡಿ. ನಂತರ ಅದಕ್ಕೆ ರುಬ್ಬಿಕೊಂಡ ಪೇಸ್ಟ್ ಅನ್ನು ಹಾಕಿ ಹಸಿ ವಾಸನೆ ಹೋಗುವವರೆಗೂ ಚಮಚದ ಸಾಹಾಯದಿಂದ ಹುರಿಯಿರಿ.
ಇದಾದ ನಂತರ ತೊಳೆದು ಇಟ್ಟುಕೊಂಡ ಚಿಕನ್ ಅನ್ನು ಅದಕ್ಕೆ ಹಾಕಿ ಮತ್ತೆ ಮಿಕ್ಸ್ ಮಾಡಿ. ಬಳಿಕ ಇದರ ಮೇಲೆ ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ ಪೌಡರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚಿಕನ್ ಕೊಂಚ ಬೆಂದ ಬಳಿಕ ಅದಕ್ಕೆ 2 ಕಪ್ ಅಕ್ಕಿಯನ್ನು ಹಾಕಿ. ಬಳಿಕ 4 ಕಪ್ ನೀರು ಹಾಕಿ ಕುದಿಯಲು ಬಿಡಿ. ಎರಡು ನಿಮಿಷದ ಬಳಿಕ ಕುಕ್ಕರ್ ಮುಚ್ಚಿ ಮೂರು ವಿಷಲ್ ಕೂಗಿಸಿ. ಈಗ ಬಿಸಿ ಬಿಸಿ ನಾಟಿ ಸ್ಟೈಲ್ ದೊನ್ನೆ ಬಿರಿಯಾನಿ ಸವಿಯಲು ಸಿದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.