ADVERTISEMENT

ರಂಜಾನ್ ಉಪವಾಸಕ್ಕೆ ಮನೆಯಲ್ಲೇ ತಯಾರಿಸಿ ರುಚಿಯಾದ ರೋಸ್ ಮಿಲ್ಕ್ ಪುಡ್ಡಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 6:31 IST
Last Updated 18 ಫೆಬ್ರುವರಿ 2026, 6:31 IST
<div class="paragraphs"><p>ರೋಸ್ ಮಿಲ್ಕ್ ಪುಡ್ಡಿಂಗ್</p></div>

ರೋಸ್ ಮಿಲ್ಕ್ ಪುಡ್ಡಿಂಗ್

   

ಎಐ ಚಿತ್ರ 

ಇಸ್ಲಾಂ ಧರ್ಮದ ಪವಿತ್ರ ಮಾಸ ರಂಜಾನ್ ಆರಂಭವಾಗುತ್ತಿದ್ದು, ಅದಕ್ಕಾಗಿ ಮುಸ್ಲಿಮರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 30 ದಿನ ಉಪವಾಸ ತೊರೆಯುವ ಸಂದರ್ಭದಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹೀಗೆ ರಂಜಾನ್‌ಗೆ ವಿಶೇಷವಾಗಿ ರೋಸ್ ಮಿಲ್ಕ್ ಪುಡ್ಡಿಂಗ್ ಮಾಡುವ ವಿಧಾನ ತಿಳಿಯಿರಿ.

ADVERTISEMENT

ಬೇಕಾಗಿರುವ ಸಾಮಾಗ್ರಿಗಳು

ಹಾಲು, ಕಾರ್ನ್ ಫ್ಲೋರ್, ಸಕ್ಕರೆ, ರೋಸ್ ಸಿರಪ್

ತಯಾರಿಸುವ ವಿಧಾನ

ಮೊದಲು ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲು, ಕಾರ್ನ್ ಫ್ಲೋರ್, ಸಕ್ಕರೆ, 2-3 ಚಮಚ ರೋಸ್ ಸಿರಪ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ದಪ್ಪಗಾಗುವವರೆಗೆ ಕುದಿಸಿ. ಈ ಮಿಶ್ರಣ ತಣ್ಣಗಾದ ನಂತರ ಅದನ್ನು ಮೌಲ್ಡ್‌ಗೆ ಹಾಕಿ 3ರಿಂದ 4 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಿ. ನಂತರ ಅದನ್ನು ಫ್ರಿಡ್ಜ್‌ನಿಂದ ತೆಗೆದು ಅದಕ್ಕೆ ಕತ್ತರಿಸಿದ ಪಿಸ್ತಾ, ಬಾದಾಮಿ ಮತ್ತು ಒಣಗಿದ ಗುಲಾಬಿ ದಳಗಳಿಂದ ಅಲಂಕರಿಸಿ. ಈಗ ರೋಸ್ ಮಿಲ್ಕ್ ಪುಡ್ಡಿಂಗ್ ಸವಿಯಲು ಸಿದ್ಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.