ADVERTISEMENT

ರೆಸಿಪಿ | ಮನೆಯಲ್ಲಿಯೇ ಹೋಟೆಲ್ ಶೈಲಿಯ ಸಿಗಡಿ ಫ್ರೈ ಮಾಡಿ ಸವಿಯಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2025, 13:20 IST
Last Updated 12 ಡಿಸೆಂಬರ್ 2025, 13:20 IST
   

ಮಲೆನಾಡು ಹಾಗೂ ಕರವಾಳಿ ಭಾಗದ ಜನರಿಗೆ ಮಾಂಸಹಾರ ನೆಚ್ಚಿನ ಆಹಾರವಾಗಿದೆ. ಊಟ ಸೇರದೆ ಇದ್ದಾಗ ಒಣ ಸಿಗಡಿ ಫ್ರೈ ಪ್ರಯತ್ನಿಸಬಹುದು. ಈ ಒಣ ಸಿಗಡಿ ಫ್ರೈ ಅನ್ನು ಮನೆಯಲ್ಲಿಯೇ ರುಚಿಯಾಗಿ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಒಣ ಸಿಗಡಿ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
ಕಪ್ ಒಣ ಸಿಗಡಿ – 1/2
ಹೆಚ್ಚಿಕೊಂಡ – ಈರುಳ್ಳಿ
ಹೆಚ್ಚಿಕೊಂಡ –1 ಟೊಮೆಟೊ
ಹಸಿರು ಮೆಣಸಿನಕಾಯಿ–3/4
ಅಡುಗೆ ಎಣ್ಣೆ– 1/ 2 ಚಮಚ
ಹುಳಿ– ಅಗತ್ಯಕ್ಕೆ ತಕ್ಕಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿಣ ಪುಡಿ– ಅರ್ಧ ಚಮಚ
ಖಾರದ ಪುಡಿ– 1 ಚಮಚ

ಮಾಡುವ ವಿಧಾನ
ಮೊದಲು ಒಣ ಸಿಗಡಿಯನ್ನು ಹಾಗೆ ಹುರಿದುಕೊಂಡು ನೀರಿನಲ್ಲಿ ತೊಳೆದುಕೊಳ್ಳಿ. ನಂತರ ಒಂದು ಬಾಣಲೆಗೆ 1/ 2 ಚಮಚ ಅಡುಗೆ ಎಣ್ಣೆ ಹಾಕಿ. ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಟೊಮೆಟೊ, ಹಸಿರುಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಅರಿಶಿಣಪುಡಿ, ಖಾರದಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಹುರಿದು, ತೊಳೆದುಕೊಂಡ ಸಿಗಡಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ಹುಳಿ ಹಾಗೂ ಅರ್ಧ ಲೋಟ ನೀರು ಹಾಕಿ ಒಂದೆರಡು ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ಬಳಿಕ ಅನ್ನ,ಚಪಾತಿ, ದೋಸೆ ಜೊತೆ ಸವಿಯಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT