ADVERTISEMENT

ಬಿಸಿಲಿನ ತಾಪಕೆ ಕಾಳಿನ ತಂಪು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:31 IST
Last Updated 19 ಏಪ್ರಿಲ್ 2019, 19:31 IST
ಪಾನಕ
ಪಾನಕ   

ಹೆಸರುಕಾಳು ತಂಪು

ಬೇಕಾಗುವ ಸಾಮಗ್ರಿಗಳು : ಹೆಸರುಕಾಳು, ಬೆಲ್ಲ, ಏಲಕ್ಕಿ ತಯಾರಿಸುವ ವಿಧಾನ: ಹೆಸರುಕಾಳನ್ನು ಚೆನ್ನಾಗಿ ಹುರಿದು ನೆನೆಹಾಕಿ (ರಾತ್ರಿ ನೆನೆ ಹಾಕಿದರೆ ಮುಂಜಾನೆ ರುಬ್ಬಬಹುದು). ನಂತರ ನುಣ್ಣಗೆ ರುಬ್ಬಿ. ಅದಕ್ಕೆ ಹಿಡಿಯುವಷ್ಟು ನೀರು, ಬೆಲ್ಲ, ಏಲಕ್ಕಿ, ಬೇಕಾದರೆ ಚಿಟಿಕೆ ಉಪ್ಪು ಹಾಕಿ ಹದ ಮಾಡಿ ಕುಡಿಯಿರಿ.

ಮೊಗೆ ಬೀಜದ (ಬಣ್ಣದ ಸೌತೆ) ಪಾನಕ

ADVERTISEMENT

ಬೇಕಾಗುವ ಸಾಮಗ್ರಿಗಳು: ಬಣ್ಣದ ಸೌತೆ ಬೀಜ – 1 ಲೋಟ, ಬೆಲ್ಲ– ರುಚಿಗೆ, ಏಲಕ್ಕಿ– ಪರಿಮಳಕ್ಕೆ, ನೀರು
ತಯಾರಿಸುವ ವಿಧಾನ: ಒಣಗಿಸಿಟ್ಟುಕೊಂಡ ಮೊಗೆಬೀಜವನ್ನು ಸ್ವಲ್ಪ ಹೊತ್ತು ನೆನೆಹಾಕಿ ಅದನ್ನು ನುಣ್ಣಗೆ ರುಬ್ಬಿ. ಅದನ್ನು ಸೋಸಿ ಹಿಡಿಯುವಷ್ಟು ನೀರು, ಬೆಲ್ಲ, ಏಲಕ್ಕಿ ಸೇರಿಸಿ ಹದಮಾಡಿ ಕುಡಿಯಿರಿ. ಮೂಲವ್ಯಾಧಿ, ಆಸಿಡಿಟಿ, ಆಮಶಂಕೆಯಂತಹ ರೋಗಕ್ಕೆ ದಿವ್ಯೌಷಧ.

ಎಳ್ಳು ಪಾನಕ (ತಂಪು)

ಬೇಕಾಗುವ ಸಾಮಗ್ರಿಗಳು: ಎಳ್ಳು – 1/2 ಅಥವಾ 1 ಲೋಟ, ನೀರು – 2-3 ಲೋಟ, ಹಾಲು – 1/2 ಲೋಟ (ಬೇಕಾದರೆ ಮಾತ್ರ) ಬೆಲ್ಲ – ಸಿಹಿ ಬೇಕಾದಷ್ಟು, ಏಲಕ್ಕಿ ರುಚಿಗೆ.
ತಯಾರಿಸುವ ವಿಧಾನ: ಎಳ್ಳು ನೆನೆ ಹಾಕಿಕೊಂಡು ನಂತರ ನುಣ್ಣಗೆ ರುಬ್ಬಿ ಅದಕ್ಕೆ ಸಾಕಷ್ಟು ನೀರು, ಬೆಲ್ಲ ಏಲಕ್ಕಿ ಹಾಕಿ ಕುಡಿಯಿರಿ.

ಕಾಮಕಸ್ತೂರಿ ಬೀಜದ ಪಾನಕ

ಬೇಕಾಗುವ ಸಾಮಗ್ರಿಗಳು: ಕಾಮಕಸ್ತೂರಿ ಬೀಜ – 1 ಚಮಚ, ಬೆಲ್ಲ – 3-4 ಚಮಚ, ನೀರು – 2 ಲೋಟ,ಹಾಲು – 1/2 ಅಥವಾ 1/4 ಲೋಟ, ಏಲಕ್ಕಿ
ತಯಾರಿಸುವ ವಿಧಾನ: ಕಾಮಕಸ್ತೂರಿ ಬೀಜವನ್ನು ಒಂದು ತಾಸು ಮೊದಲು ನೆನೆಸಿಟ್ಟುಕೊಳ್ಳಿ. ನಂತರ ಇದಕ್ಕೆ ನೀರು, ಹಾಲು, ಬೆಲ್ಲ, ಏಲಕ್ಕಿ ಹಾಕಿ ಹದ ಮಾಡಿಕೊಂಡು ಕುಡಿಯಿರಿ. ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನಿಂಬೆ ಹುಲ್ಲಿನ ತಂಪು

ಬೇಕಾಗುವ ಸಾಮಗ್ರಿಗಳು: ನಿಂಬೆಹುಲ್ಲು – 7-8, ಕೊತ್ತಂಬರಿ ಬೀಜ – 1 ಚಮಚ, ಜೀರಿಗೆ – 1 ಚಮಚ, ಶುಂಠಿ ಚೂರು – ಬೇಕಾದರೆ, ಉಪ್ಪು, ಸ್ವಲ್ಪ ಬೆಲ್ಲ, ಕಡೆದ ಮಜ್ಜಿಗೆತಯಾರಿಸುವ ವಿಧಾನ: ನಿಂಬೆಹುಲ್ಲಿನ ಜೊತೆ ಶುಂಠಿ, ಕೊತ್ತಂಬರಿ ಬೀಜ, ಜೀರಿಗೆ ಹಾಕಿ ರುಬ್ಬಿ ಸೋಸಿ ರಸ ತೆಗೆದು ಇದಕ್ಕೆ ಕಡೆದ ಮಜ್ಜಿಗೆ ರುಚಿಗೆ ಉಪ್ಪು ಬೆಲ್ಲ ಹಾಕಿ ಕುಡಿದರೆ ಹೊಟ್ಟೆಗೂ ತಂಪು, ಜೀರ್ಣಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.