ADVERTISEMENT

ರೆಸಿಪಿ | ಸಿಹಿ ಗೆಣಸಿನ ವಡೆ ಮಾಡಿ ಸವಿಯಿರಿ: ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:56 IST
Last Updated 18 ನವೆಂಬರ್ 2025, 7:56 IST
   

ಸಿಹಿ ಗೆಣಸು ಉತ್ತಮ ಪೋಷಕಾಂಶ ಹೊಂದಿರುತ್ತದೆ. ಇದರಲ್ಲಿ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಬಹು ಬೇಗನೆ ಆಗುವ ಸಿಹಿ ಗೆಣಸಿನ ವಡೆಯನ್ನು ತಯಾರಿಸುವ ಕುರಿತು ಮಾಹಿತಿ ಇಲ್ಲಿದೆ.

ಸಿಹಿ ಗೆಣಸಿನ ವಡೆ ತಯಾರಿಸಲು ಬೇಕಾಗುವ ಸಾಮಾಗ್ರಿಗಳು

2–3 ಕಪ್ ಕಡಲೆ ಹಿಟ್ಟು

ADVERTISEMENT

ಮಧ್ಯಮ ಗಾತ್ರದ 1–2 ಸಿಹಿ ಗೆಣಸು

2–3 ಹಸಿರು ಮೆಣಸಿನಕಾಯಿ

1 ಈರುಳ್ಳಿ

ಅರ್ಧ ಕಪ್ ಅಕ್ಕಿ ಹಿಟ್ಟು

ರುಚಿಗೆ ತಕ್ಕಷ್ಟು ಉಪ್ಪು

ಅಡುಗೆ ಎಣ್ಣೆ

ಅಗತ್ಯಕ್ಕೆ ತಕ್ಕಷ್ಟು ಕಪ್ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ

ಮೊದಲು ಸಿಹಿ ಗೆಣಸನ್ನು ಬೇಯಿಸಿ, ಸಿಪ್ಪೆ ತೆಗೆದುಕೊಳ್ಳಿ.

ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಬಳಿಕ ಪಾತ್ರೆಯಲ್ಲಿ ಕಡಲೆ ಹಿಟ್ಟು, ತೊಳೆದು ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, ಈರುಳ್ಳಿ, ಹಸಿರು ಮೆಣಸಿನ ಕಾಯಿ, ಅಕ್ಕಿ ಹಿಟ್ಟು, ಬೇಯಿಸಿ ಸಿಪ್ಪೆ ತೆಗೆದ ಗೆಣಸು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ವಲ್ಪ ನೀರು ಸೇರಿಸಿ ಗೆಣಸಿನ ಮಿಶ್ರಣವನ್ನು ಹದಕ್ಕೆ ಕಲಸಿಕೊಳ್ಳಿ. ಕಲಸಿಕೊಂಡ ಮಿಶ್ರಣವನ್ನು ವಡೆ ಆಕಾರದಲ್ಲಿ ಎಣ್ಣೆಗೆ ಬಿಡಿ. ಬೆಂದ ಬಳಿಕ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.