ADVERTISEMENT

Watch: ಉಡುಪಿ ಗುಳ್ಳ ತವಾ ಫ್ರೈ‌‌‌

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 1:27 IST
Last Updated 12 ಜೂನ್ 2021, 1:27 IST

ಉಡುಪಿ ಗುಳ್ಳ ತವಾ ಫ್ರೈ ಮಳೆಗಾಲಕ್ಕೆ ಬೆಸ್ಟ್‌ ಸೈಡ್ ಡಿಶ್‌

ಬೇಕಾಗುವ ಸಾಮಗ್ರಿಗಳು: ಉಡುಪಿ ಗುಳ್ಳ – 1 (ದುಂಡಾಗಿ ಕತ್ತರಿಸಿದ್ದು), ಒಣಮೆಣಸು – 10 ರಿಂದ 12 (ನೀರಿನಲ್ಲಿ ನೆನೆಸಿದ್ದು), ಉಪ್ಪು– ಚಿಟಿಕೆ, ಎಣ್ಣೆ – ಸ್ವಲ್ಪ, ಅಕ್ಕಿಹಿಟ್ಟು – ಸ್ವಲ್ಪ

ತಯಾರಿಸುವ ವಿಧಾನ: ಪಾತ್ರೆಯಲ್ಲಿ ಬದನೆಕಾಯಿ ತುಂಡನ್ನು ಹಾಕಿ ಅದಕ್ಕೆ ಉಪ್ಪು ಉದುರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೆನೆಸಿದ ಒಣಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಬದನೆಕಾಯಿ ಹೋಳಿಗೆ ಸೇರಿಸಿ. ಮಿಶ್ರಣ ಬದನೆತುಂಡಿಗೆ ಹಿಡಿಯುವಂತೆ ಚೆನ್ನಾಗಿ ಕಲೆಸಿ. ಅದನ್ನು ಅಕ್ಕಿಹಿಟ್ಟಿನಲ್ಲಿ ಅದ್ದಿ ಕಾಯಿಸಿದ ತವಾಕ್ಕೆ ಎಣ್ಣೆ ಹಚ್ಚಿ ಅದರ ಮೇಲೆ ಎಣ್ಣೆ ಹಚ್ಚಿ. ಸ್ವಲ್ಪ ಕಾದ ಮೇಲೆ ಮಗುಚಿ ಹಾಕಿ. ಇದು ಊಟದ ಜೊತೆ ಅಥವಾ ಹಾಗೇ ತಿನ್ನಲು ಚೆನ್ನಾಗಿರುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.