ADVERTISEMENT

ರೆಸಿಪಿ | ಬಹು ಬೇಗನೆ ಮಾಡಬಹುದು ಹೋಟೆಲ್ ಶೈಲಿಯ ರಸಂ: ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2025, 11:59 IST
Last Updated 8 ಅಕ್ಟೋಬರ್ 2025, 11:59 IST
   

ಕೆಲವರಿಗೆ ಜ್ವರ ಅಥವಾ ನೆಗಡಿಯಿಂದ ಬಾಯಿ ಸಪ್ಪೆಯಾಗಿ ಊಟ ಸೇರುವುದಿಲ್ಲ ಎನ್ನುವವರು ಹೋಟೆಲ್ ಶೈಲಿಯ ರಸಂ ಮಾಡಿಕೊಂಡು ಊಟ ಮಾಡಬಹುದು. ಊಟದ ಬಳಿಕ ರಸಂ ಕುಡಿದರೆ ಹೊಟ್ಟೆ ತುಂಬುತ್ತದೆ ಎಂಬ ಅಭಿಪ್ರಾಯ ಇದ್ದವರು ಕೂಡ ಇದನ್ನು ಪ್ರಯತ್ನಿಸಬಹುದು. ಹಾಗಿದ್ದರೆ ಬಹು ಬೇಗನೆ ಇದನ್ನು ಮಾಡುವುದು ಹೇಗೆ ನೋಡೋಣ.

ಹೋಟೆಲ್ ಶೈಲಿಯ ರಸಂ ಮಾಡಲು ಬೇಕಾಗುವ ಸಾಮಾಗ್ರಿಗಳು

2 ಗುಂಟೂರು ಮೆಣಸಿನಕಾಯಿ

ADVERTISEMENT

1/2 ಚಮಚ ಕಾಳು ಮೆಣಸು

1 ಚಮಚ ಜೀರಿಗೆ

2 ಹಸಿರು ಮೆಣಸಿನಕಾಯಿ

6–7 ಬೆಳ್ಳುಳ್ಳಿ

ಅಗತ್ಯಕ್ಕೆ ತಕ್ಕಷ್ಟು ಹುಣಸೆ ಹುಳಿ

1/2 ಟೊಮಟೊ

ಕೊತ್ತಂಬರಿ ಸೊಪ್ಪು

ಅರಶಿನ ಪುಡಿ

ರುಚಿಗೆ ತಕ್ಕಷ್ಟು ಉಪ್ಪು

ಕರಿ ಬೇವು

ಅಡುಗೆ ಎಣ್ಣೆ

ಮಾಡುವ ವಿಧಾನ

ಹಂತ 1 : ತೊಳೆದು ಹೆಚ್ಚಿಕೊಂಡ 1/2 ಟೊಮೊಟೊ, 2 ಗುಂಟುರು ಮೆಣಸಿನಕಾಯಿ, 2 ಹಸಿರು ಮೆಣಸಿನಕಾಯಿ, 1/2 ಚಮಚ ಕಾಳು ಮೆಣಸು, 1 ಚಮಚ ಜೀರಿಗೆ, 6–7 ಬೆಳ್ಳುಳ್ಳಿ, 1/4 ಕಪ್ ಕೊತ್ತಂಬರಿ ಸೊಪ್ಪು, ಅಗತ್ಯಕ್ಕೆ ತಕ್ಕಷ್ಟು ಹುಣಸೆ ಹುಳಿ ಹಾಗೂ ನೀರು ಸೇರಿಸಿ ತರಿ ತರಿ ರುಬ್ಬಿಕೊಳ್ಳಿ.

ಹಂತ 2 : ಒಗ್ಗರಣೆ ತಯಾರು ಮಾಡಿಕೊಳ್ಳಲು ಒಂದು ಪಾತ್ರೆಯಲ್ಲಿ 2 ಚಮಚ ಅಡುಗೆ ಎಣ್ಣೆ ಹಾಕಿ ನಂತರ ಅದೇ ಬಾಣಲೆಗೆ ಕರಿಬೇವು, 1 ಒಣ ಮೆಣಸಿನಕಾಯಿ, ಹಾಗೂ ಉಳಿದ 1/2 ಟೊಮೊಟೊವನ್ನು ಒಗ್ಗರಣೆಗೆ ಹಾಕಿಕೊಳ್ಳಿ.

ಹಂತ 3 : ಬಳಿಕ ಕಾಯುತ್ತಿರುವ ಒಗ್ಗರಣೆಗೆ ರುಬ್ಬಿಕೊಂಡ ರಸಂ ಮಸಾಲಾವನ್ನು ಹಾಗೂ 2 ಲೋಟ ನೀರು ಹಾಕಿಕೊಳ್ಳಿ. ನಂತರ 1/4 ಅರಶಿನ ಪುಡಿಯನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ. ರಸಂ ರೆಡಿ

ನಂತರ ಅನ್ನದ ಜೊತೆ ಊಟ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.