ಸೌತೆಕಾಯಿ ಜ್ಯೂಸ್
ಬೇಸಿಗೆಯ ಬೇಗೆ ನೀಗಿಸುವ ಬಗೆಗಳು ಹಲವು. ಮನೆಯಲ್ಲಿ ಮಕ್ಕಳಿದ್ದರಂತೂ ಬಗೆಬಗೆಯ ಪಾನಕ, ಪಾನೀಯಗಳ ಸಮಾರಾಧನೆ ನಡೆದೇ ಇರುತ್ತದೆ. ಆರೋಗ್ಯಕರ ಮತ್ತು ಸುಲಭವಾಗಿ ತಯಾರಿಸಬಹುದಾದ ಕೆಲವು ಪಾನಕಗಳು ಇಲ್ಲಿವೆ. ಹೊಟ್ಟಿಗೆ ಹಿತವಾಗಿರುವ ಈ ಪಾನೀಯಗಳು ಈ ಸಲದ ಬೇಸಿಗೆಯಲ್ಲಿ
ಸೌತೆಕಾಯಿ ಜ್ಯೂಸ್
ಬೇಕಾಗುವ ಸಾಮಗ್ರಿಗಳು: ಎಳೆ ಸೌತೆಕಾಯಿ 1, ಜೀರಿಗೆ ಪುಡಿ 1/4 ಚಮಚ, ಚಿಟಿಕೆ ಉಪ್ಪು
ಮಾಡುವ ವಿಧಾನ: ಸೌತೆಕಾಯಿಯ ಸಿಪ್ಪೆ ತೆಗೆದು, ದೊಡ್ಡ ಕಣ್ಣಿನ ತುರೇಮಣೆಯಲ್ಲಿ ತುರಿದುಕೊಳ್ಳಿ. ಇದಕ್ಕೆ ಜೀರಿಗೆ, ಉಪ್ಪು ಸೇರಿಸಿ ಜ್ಯೂಸರ್ ಅಥರ್ ಮಿಕ್ಸಿಜಾರ್ ನಲ್ಲಿ ಅರೆದು ಸೋಸಿದರೆ ಆರೋಗ್ಯಕರ
ಸೌತೆ ಜ್ಯೂಸು ರೆಡಿ.
ಸೋರೆಕಾಯಿ ಜ್ಯೂಸ್
ಬೇಕಾಗುವ ಸಾಮಗ್ರಿಗಳು: ಸೋರೆಕಾಯಿ ಅರ್ಧ ಹೋಳು, ನಿಂಬೆರಸ 1 ಚಮಚ, ರುಚಿಗೆ ತಕ್ಕಷ್ಟು ಕಂದು ಸಕ್ಕರೆ.
ಮಾಡುವ ವಿಧಾನ: ಸೋರೆಕಾಯಿಯ ಸಿಪ್ಪೆ ತೆಗೆದು ಬೀಜರಹಿತ ತಿರುಳನ್ನು ತುರಿದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆರಸ ಸೇರಿಸಿ ಅರೆದು ಶೋದಿಸಿ, ನಂತರ ರುಚಿಗೆ ತಕ್ಕಷ್ಟು ಕಂದು ಸಕ್ಕರೆ ಸೇರಿಸಿ ಸವಿಯಿರಿ.
ಕಾಯಿ ಹಾಲು
ಬೇಕಾಗುವ ಸಾಮಗ್ರಿಗಳು: ತಾಜಾ ತೆಂಗಿನತುರಿ 1 ಕಪ್, ಸಕ್ಕರೆ 1/2 ಚಮಚ, ಬಾದಾಮಿ,ಗೋಡಂಬಿ ತುಂಡುಗಳು 1 ಚಮಚ, ಏಲಕ್ಕಿ ಪುಡಿ 1/4 ಚಮಚ
ಮಾಡುವ ವಿಧಾನ: ತೆಂಗಿನತುರಿಯನ್ನು ಒಂದು ಕಪ್ ನೀರು ಸೇರಿಸಿ ಚೆನ್ನಾಗಿ ಅರೆದು, ಹಾಲು ಬಸಿದುಕೊಳ್ಳಿ. (ಸಾಂದ್ರತೆಗೆ ತಕ್ಕಂತೆ ಹೆಚ್ಚುವರಿ ನೀರು ಸೇರಿಸಿಕೊಳ್ಳಬಹುದು) ಈ ಹಾಲಿಗೆ ಏಲಕ್ಕಿಪುಡಿ, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ, ಬಾದಾಮಿಗೋಡಂಬಿ ಉದುರಿಸಿದರೆ ಪರಿಮಳಭರಿತ ಕಾಯಿಹಾಲು ಸಿದ್ಧ.
ಪುದೀನ ಜ್ಯೂಸ್
ಬೇಕಾಗುವ ಸಾಮಗ್ರಿಗಳು: ಪುದೀನ ಸೊಪ್ಪು ಒಂದು ಕಪ್, ಶುಂಠಿ ಸಣ್ಣ ತುಂಡು, ನಿಂಬೆರಸ 1/2ಚಮಚ, ಚಿಟುಕಿ ಕಪ್ಪು ಉಪ್ಪು (ಕಾಲ ನಮಕ್) ಮಾಡುವ ವಿಧಾನ: ಪುದೀನ ಸೊಪ್ಪು, ಶುಂಠಿ, ನಿಂಬೆರಸಕ್ಕೆ ಒಂದು ಕಪ್ ನೀರು ಸೇರಿಸಿ ಅರೆದು, ಸೋಸಿಕೊಳ್ಳಿ. ನಂತರ ಉಪ್ಪು ಬೆರೆಸಿ, ಮಿಶ್ರಣ ಮಾಡಿದರೆ ಹಚ್ಚ ಹಸಿರು ಪುದಿನ
ಜ್ಯೂಸು ರೆಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.