ಸಾಂದರ್ಭಿಕ ಚಿತ್ರ
ಕೊಲೆಸ್ಟ್ರಾಲ್‌ನ ಆರಂಭಿಕ ರೋಗಲಕ್ಷಣಗಳನ್ನು ತಿಳಿಯುವುದು ಕಷ್ಟ, ಅದೊಂದು ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುತ್ತದೆ. ಆದರೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಅದೊಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಕೆಳಗೆ ನೀಡಲಾಗಿರುವ ಲಕ್ಷಣಗಳು ಕಂಡುಬಂದಲ್ಲಿ ದೇಹದಲ್ಲಿ ಕೊಲೆಸ್ಟ್ರಾಲ್ ಇದೆ ಎಂದು ತಿಳಿಯಬಹುದು.
ಓಡುವಾಗ ಶಕ್ತಿ ಕಡಿಮೆಯಾಗುವುದು: ದೇಹದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ತುಂಬಿರುವುದರಿಂದ ರಕ್ತದ ಹರಿವಿಗೆ ತೊಡಕಾಗುತ್ತದೆ. ಇದರಿಂದ ಶಕ್ತಿ ಕುಂದಬಹುದು.
ಪಾದಗಳಲ್ಲಿ ನೋವು: ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಪಾದಗಳಲ್ಲಿ ನೋವು ಕಾಣಿಸಿಕೊಳ್ಳಬಹುದು, ಇದು ಫೆರಿಫೆರಲ್ ಆರ್ಟರಿ ಡಿಸೀಸ್‌ನ ಸೂಚಕವಾಗಬಹುದು.
ಹೃದಯ ಸಂಬಂಧಿ ಸಮಸ್ಯೆಗಳು: ದಿಢೀರನೆ ಎದೆನೋವು, ಶ್ವಾಸಕೋಶದ ತೊಂದರೆಗಳು ಮತ್ತು ಹೃದಯಾಘಾತ ಕಾಣಿಸಿಕೊಳ್ಳುವುದು ಕೂಡ ಕೊಲೆಸ್ಟ್ರಾಲ್‌ನ ಪ್ರಭಾವ ಎಂದು ಹೇಳಬಹುದು.
ಕೊಲೆಸ್ಟ್ರಾಲ್ ಅನ್ನು ಪರೀಕ್ಷಿಸುವುದು ಹೇಗೆ?
ಸಾಮಾನ್ಯವಾಗಿ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ರಕ್ತ ಪರೀಕ್ಷೆಯ ಮೂಲಕವೇ ಪತ್ತೆ ಹಚ್ಚಲು ಸಾಧ್ಯ. ಈ ನಿಟ್ಟಿನಲ್ಲಿ ವೈದ್ಯರು ವಿವಿಧ ಪರೀಕ್ಷೆಗಳನ್ನು ಮಾಡಿಸಲು ಸಲಹೆ ನೀಡುತ್ತಾರೆ. ಅವುಗಳೆಂದರೆ
ಲಿಪಿಡ್ ಪ್ರೊಫೈಲ್: ಈ ಪರೀಕ್ಷೆಯ ಮೂಲಕ ಒಟ್ಟಾರೆ ಕೊಲೆಸ್ಟ್ರಾಲ್, ಎಲ್‌ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್), ಹೆಚ್‌ಡಿಎಲ್ (ಒಳ್ಳೆಯ ಕೊಲೆಸ್ಟ್ರಾಲ್) ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಪರೀಕ್ಷಿಸುತ್ತದೆ.
ಎಲ್‌ಡಿಎಲ್ ಪಾರ್ಟಿಕಲ್ ಟೆಸ್ಟಿಂಗ್: ಈ ಪರೀಕ್ಷೆಯು ಕೊಲೆಸ್ಟ್ರಾಲ್ ಕಣಗಳ ಗಾತ್ರ ಮತ್ತು ಸಂಖ್ಯೆಯನ್ನು ಪರಿಶೀಲಿಸುತ್ತದೆ.
ಸಿಎಟಿ ಸ್ಕ್ಯಾನ್: ಹೃದಯ ಮತ್ತು ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್‌ನಿಂದ ತೊಂದರೆ ಉಂಟಾಗಿದಲ್ಲಿ ಈ ಪರೀಕ್ಷೆ ಉಪಯುಕ್ತವಾಗಲಿದೆ.
ಸೂಚನೆ: ಕೊಲೆಸ್ಟ್ರಾಲ್ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಒಳಿತು. ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಅಗತ್ಯ ಔಷಧಿಗಳ ಮೂಲಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುವುದು ಮುಖ್ಯ. ಮುಖ್ಯವಾಗಿ ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ಅಥವಾ ಡಯಟ್ ಅನ್ನು ಅನುಸರಿಸದಿರಿ.
ಲೇಖಕರು: ತಜ್ಞರು, ವಾಸವಿ ಆಸ್ಪತ್ರೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.