ಇತ್ತೀಚಿನ ದಿನಗಳಲ್ಲಿ ಅನೇಕರು ಕಿವಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಶ್ರವಣ ಸಮಸ್ಯೆಗೆ ಆಯುರ್ವೇದ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕಿವಿ ನೋವಿಗೆ ಕಾರಣ
ಕಿವಿಗೆ ಇಯರ್ ಫೋನ್, ಇಯರ್ ಬರ್ಡ್ಸ್, ಬ್ಲೂಟೂತ್‌ಗಳ ಬಳಕೆ
ಪಿನ್, ಕಾಟನ್ ಬಡ್ಸ್, ಪೆನ್ನು, ಕಡ್ಡಿ ಸೇರಿದಂತೆ ಇತರೆ ವಸ್ತುಗಳನ್ನು ಕಿವಿ ಒಳಗೆ ಹಾಕುವುದು
ಕಿವಿ ಒಳಗೆ ಹೆಚ್ಚು ಸಮಯ ಹತ್ತಿ ಇಡುವುದರಿಂದ, ಅದರ ಸಣ್ಣ ಎಳೆಗಳು ಒಳಗೆ ಸೇರಿಕೊಳ್ಳುವುದರಿಂದ ಕಿವಿ ನೋವು ಬರುವ ಸಾಧ್ಯತೆ ಇರುತ್ತದೆ.
ಕಿವಿ ಒಳಗೆ ಬೆರಳುಗಳನ್ನು ಹಾಕುವುದು
ಶಬ್ದ ಮಾಲಿನ್ಯ: ಚಿತ್ರಮಂದಿರದ ಒಳಗಿನ ಸದ್ದು, ಅತಿಯಾದ ಟಮಟೆ, ಡಿಜೆ ಸದ್ದು ಕೇಳುವುದರಿಂದ ಕಿವಿ ನೋವಿಗೆ ಕಾರಣ ಎಂದಿದ್ದಾರೆ ಆಯುರ್ವೇದತಜ್ಞರು.
ಪರಿಹಾರ
ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಬಳಕೆ: ಕುದಿಯುವ ನೀರಿನ ಮೇಲೆ ಒಂದು ಸಣ್ಣ ಪಾತ್ರೆ ಇಟ್ಟು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ಹಾಕಿ ಉಗುರು ಬೆಚ್ಚಗೆ ಮಾಡಿ ರಾತ್ರಿ ಮಲಗುವ ವೇಳೆ ಕಿವಿಗೆ ಒಂದೆರಡು ಹನಿ ಹಾಕಿ ಮಲಗುವುದರಿಂದ ಕಿವಿ ನೋವು ಕಡಿಮೆ ಆಗುತ್ತದೆ.
ಸ್ವಿಮ್ಮಿಂಗ್ ಮಾಡುವವರು ಕಿವಿಗೆ ಒಳಗೆ ನೀರು ಹೋಗದಂತೆ ಕ್ಯಾಪ್ ಧರಿಸಿ ನೀರಿಗೆ ಇಳಿಯಬೇಕು.
ಕಿವಿ ಆರೋಗ್ಯ ಕಾಪಾಡಲು ಯೋಗದಲ್ಲಿ ಹೇಳಿರುವಂತೆ ‘ಕರ್ಣ ರಂಧ್ರ ಧೌತಿ’ ಅಭ್ಯಾಸ ಮಾಡಬೇಕು. ಕರ್ಣ ರಂಧ್ರ ಧೌತಿ ಅಂದರೆ, ಕಿವಿಯ ರಂಧ್ರಕ್ಕೂ ಮೊದಲು ಕಿವಿಯ ಮುಂಭಾಗದಲ್ಲಿ ಇರುವ ಅಂಗ. ಈ ಅಂಗವನ್ನು ನಿಧಾನವಾಗಿ ತೋರು ಬೆರಳಿನ ತುದಿಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ಕಿವಿಯ ಆರೋಗ್ಯದ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಎನ್ನುತ್ತಾರೆ ಆಯುರ್ವೇದ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.