ಎಐ ಚಿತ್ರ
ಕ್ಯಾನ್ಸರ್ ಹಲವು ರೋಗಗಳ ಸಮೂಹವಾಗಿದೆ. ಯಾವುದೇ ಅಂಗದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೂ ಅದರ ಸ್ವರೂಪ ವಿಭಿನ್ನವಾಗಿರುತ್ತದೆ. ಚಿಕಿತ್ಸೆಗಳಿಗೂ ಭಿನ್ನವಾಗಿಯೇ ಪ್ರತಿಕ್ರಿಯಿಸುವ ಗುಣಲಕ್ಷಣಗಳನ್ನು ಕ್ಯಾನ್ಸರ್ ಹೊಂದಿರುತ್ತದೆ. ಸ್ತನ ಕ್ಯಾನ್ಸರ್ ಕೂಡ ಇದೇ ವರ್ಗಕ್ಕೆ ಸೇರುತ್ತದೆ.
ಸ್ತನ ಕ್ಯಾನ್ಸರ್‌ನ ವಿಧಗಳು ಯಾವುವು? HER2+ ಕ್ಯಾನ್ಸರ್ ಎಷ್ಟು ಪರಿಣಾಮಕಾರಿ, ಸ್ತನ ಕ್ಯಾನ್ಸರ್‌ಗೆ ಭಾರತದಲ್ಲಿರುವ ಚಿಕಿತ್ಸೆಗಳು ಯಾವುವು ಎಂಬ ಮಾಹಿತಿ ತಿಳಿಯೋಣ.
ಸ್ತನ ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ HER2+, ಟ್ರಿಪಲ್ ನೆಗೆಟಿವ್, ಲುಮಿನಲ್ A ಮತ್ತು Bಗಳೂ ಸೇರಿವೆ. ಕಳೆದ ಕೆಲ ವರ್ಷಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಈ ಉಪ ವಿಧಗಳು ಪತ್ತೆಯಾಗಿವೆ. ಬಹಳಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ಇದೆ. ಜೊತೆಗೆ ಅದನ್ನು ಹೇಗೆ ಪತ್ತೆ ಎಂಬುವುದು ತಿಳಿದಿದೆ. ಆದರೆ ಸ್ತನ ಕ್ಯಾನ್ಸರ್‌ನಲ್ಲಿ ಯಾವೆಲ್ಲಾ ವಿಧಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಕ್ಯಾನ್ಸರ್ ಚಿಕಿತ್ಸೆಯ ಹಾದಿ ಸುಲಭವಾದುದ್ದಲ್ಲ. ಕ್ಯಾನ್ಸರ್ ರೋಗಿಗಳನ್ನು ನೋಡಿಕೊಳ್ಳುವವರು ತೀವ್ರ ಕಷ್ಟಗಳನ್ನು ಎದುರಿಸುತ್ತಾರೆ. ಕ್ಯಾನ್ಸರ್ ರೋಗಿಗಳ ಆರೈಕೆದಾರರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಸಲುಬಹುದು.
HER2+ ಸ್ತನ ಕ್ಯಾನ್ಸರ್:
ಸ್ತನ ಕ್ಯಾನ್ಸರ್‌ನ ಉಪ ವಿಧಗಳಲ್ಲೇ HER2+ ಎಂಬುದು ಅತ್ಯಂತ ಆಕ್ರಮಣಕಾರಿಯಾಗಿದೆ. HER2+ ಎಂದರೆ ‘ಹ್ಯೂಮನ್ ಎಪಿಡರ್ಮಲ್ ಗ್ರೋಥ್ ಫ್ಯಾಕ್ಟರ್ ರೆಸೆಪ್ಟರ್ 2’ ಆಗಿದೆ. ಇದು ಪ್ರೊಟೀನ್ ಆಧಾರಿತ ಅಣುವಿಗೆ ಪ್ರತಿಕ್ರಿಯಿಸುವ ಜೀವಕೋಶವಾಗಿದೆ. ಹೀಗಾಗಿ HER2+ ಪದೇ ಪದೇ ಕಾಣಿಸಿಕೊಳ್ಳುವ ಹಾಗೂ ಸಾವು ತರುವ ಕ್ಯಾನ್ಸರ್ ಪ್ರಬೇಧ ಇದಾಗಿದೆ. ಹಂತ ಹಂತವಾಗಿ ಈ HER2+ ಸ್ತನ ಕ್ಯಾನ್ಸರ್‌ನ ಗೆಡ್ಡೆಯ ಗಾತ್ರವೂ ತ್ವರಿತವಾಗಿ ದೊಡ್ಡದಾಗುತ್ತಾ ಹೋಗುತ್ತದೆ ಎಂದು ತಿಳಿದು ಬಂದಿದೆ.
ಕೆಲ ವರ್ಷಗಳಲ್ಲಿ HER2+ ಕ್ಯಾನ್ಸರ್ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ. ಸ್ವತಹಃ ಮಹಿಳೆಯರೇ ಸ್ವಯಂ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಇದರಿಂದಾಗಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ, ಸಕಾಲಕ್ಕೆ ವೈದ್ಯಕೀಯ ಸಲಹೆ, ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯುವುದು ಸೂಕ್ತ.
ಭಾರತದಲ್ಲಿ ಲಭ್ಯವಿರುವ ಚಿಕಿತ್ಸೆಗಳು
ಕೀಮೋಥೆರಪಿ ಭಾರತದಲ್ಲಿ ಲಭ್ಯವಿರುವ ಮೊದಲ ಹಂತದ ಚಿಕಿತ್ಸೆ. ಆದಾಗ್ಯೂ, ಕೀಮೋಥೆರಪಿಗಿಂತಲೂ ಪರಿಣಾಮಕಾರಿಯಾಗಿ ಹಾಗೂ ನಿಖರವಾಗಿ HER2+ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ನಡೆಸಿ, ಕೊಲ್ಲಬಲ್ಲ ಚಿಕಿತ್ಸೆಗಳೂ ಲಭ್ಯವಿದೆ.
ಭಾರತೀಯ ಮಹಿಳೆಯರಲ್ಲಿ HER2+ ಕ್ಯಾನ್ಸರ್ ಪ್ರಬೇಧವು ಏರುಮುಖವಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಆರಂಭಿಕ ಹಂತದಲ್ಲೇ ಇದರ ಪತ್ತೆ ಮತ್ತು ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕವಾಗಿದೆ. ಆಧುನಿಕ ಚುಚ್ಚುಮದ್ದು ಮೂಲಕ ರೋಗಿಗಳ ಒಟ್ಟಾರೆ ಬದುಕುಳಿಯುವ ಮತ್ತು ಜೀವನದ ಗುಣಮಟ್ಟದಲ್ಲಿ ತೀವ್ರ ಸುಧಾರಣೆ ತರಲು ಸಾಧ್ಯವಾಗುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಪ್ರತಿ ರೋಗಿಗೂ ಅವರಲ್ಲಿರುವ ಕ್ಯಾನ್ಸರ್ ಪ್ರಬೇಧ ಮತ್ತು ಗಾತ್ರದ ಆಧಾರದಲ್ಲಿ ಚಿಕಿತ್ಸೆಯನ್ನು ವೈಯಕ್ತಿಕಗೊಳಿಸಲು ಸಾಧ್ಯವಾಗಿದೆ. ಸೂಕ್ತ ಆರೈಕೆ ಮತ್ತು ರೋಗಿಯ ಚೇತರಿಕೆಯ ಫಲಿತಾಂಶಗಳ ಆಧಾರದಲ್ಲಿ ನಿರಂತರ ಗಮನ ಹರಿಸುವುದರಿಂದ ರೋಗಿಯ ಬದುಕುಳಿಯುವ ಸಾಧ್ಯತೆ ಹೆಚ್ಚಳವಾಗುವುದರ ಜತೆಗೆ, ಜೀವನದ ಗುಣಮಟ್ಟವನ್ನೂ ಸುಧಾರಿಸಲು ಸಾಧ್ಯ.
(ಡಾ. ನೀತಿ ರೈಜಾದಾ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಪ್ರಧಾನ ನಿರ್ದೇಶಕಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.