
ಆಲೂಗೆಡ್ಡೆ
ಚಿತ್ರ ಕೃಪೆ: ಗೆಟ್ಟಿ
ಮಧುಮೇಹ ಇರುವವರು ಆಹಾರ ಪಥ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿರುತ್ತದೆ. ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದೇ. ಆದರೆ ಕೆಲವು ತರಕಾರಿಗಳ ಸೇವನೆಯಿಂದ ಮಧುಮೇಹ ಹೆಚ್ಚಾಗುವ ಸಾಧ್ಯತೆಯೂ ಇದೆ. ಹಾಗಾದರೆ ಆಲೂಗೆಡ್ಡೆಯನ್ನು ಮಧುಮೇಹಿಗಳು ಸೇವಿಸಬಹುದಾ? ಇದರ ಸೇವನೆಯಿಂದ ಮಧುಮೇಹ ಹೆಚ್ಚಾಗಲಿದೆಯೇ ಎಂಬುದನ್ನು ತಿಳಿಯೋಣ.
ಮಧುಮೇಹ ಇರುವವರು ಆಲೂಗೆಡ್ಡೆ ಸೇವಿಸುವುದರಿಂದ ಒಂದೇ ಸಲಕ್ಕೆ ಮಧುಮೇಹ ಏರಿಕೆಯಾಗುವುದಿಲ್ಲ. ಆಲೂಗೆಡ್ಡೆಯಲ್ಲಿರುವ ಕಾರ್ಬೊಹೈಡ್ರೇಟ್, ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚಿಸುವುದು ಸಹಜ. ಆದರೆ ಸಮಸ್ಯೆ ಪ್ರಾರಂಭವಾಗುವುದು ಆಲೂಗೆಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ. ಅದರಲ್ಲಿಯೂ ಮುಖ್ಯವಾಗಿ ಆಲೂಗೆಡ್ಡೆ ಚಿಪ್ಸ್ ಅಥವಾ ಇತರೆ ಕರಿದ ಖಾದ್ಯಗಳಿಂದ ಅಪಾಯ ಹೆಚ್ಚು.
ಆಲೂಗೆಡ್ಡೆಯಲ್ಲಿರುವ ಪ್ರಮುಖ ಪೋಷಕಾಂಶಗಳು
ಕಾರ್ಬೋಹೈಡ್ರೇಟ್‌ಗಳು
ಪೊಟ್ಯಾಸಿಯಮ್
ವಿಟಮಿನ್ ಸಿ
ವಿಟಮಿನ್ ಬಿ6
ನಾರಿನಾಂಶ
ಮೆಗ್ನೀಸಿಯಮ್
ಕಬ್ಬಿಣ
ರಂಜಕ
ಸತು
ಆಂಟಿಆಕ್ಸಿಡೆಂಟ್‌ಗಳು
ಮಧುಮೇಹವುಳ್ಳವರು ಆಲೂಗೆಡ್ಡೆ ಸೇವಿಸಲೇಬಾರದು ಎಂದಲ್ಲ. ಆದರೆ ಎಷ್ಟು ಸೇವಿಸಬೇಕು, ಹೇಗೆ ಸೇವಿಸಬೇಕು ಎಂಬುದನ್ನು ಗಮನದಲ್ಲಿರಿಸಿಕೊಳ್ಳುವುದು ಮುಖ್ಯ. ಬೇಯಿಸಿದ ಅಥವಾ ಕರಿದ ಆಲೂಗೆಡ್ಡೆಯನ್ನು ಇತರೆ ತರಕಾರಿಗಳೊಂದಿಗೆ ಸೇವಿಸುವುದರಿಂದ ಪ್ರೊಟೀನ್ ದೊರೆಯುತ್ತದೆ. ದಿನಕ್ಕೆ ಒಂದು ಪ್ಲೇಟ್ ಸೇವನೆ ಉತ್ತಮವಾಗಿದೆ. ಆದ್ದರಿಂದ ಮಧುಮೇಹವಿರುವವರು ಯಾವುದೇ ಭಯವಿಲ್ಲದೆ ನಿಯಮಿತವಾಗಿ ಆಲೂಗೆಡ್ಡೆಗಳನ್ನು ಸೇವಿಸಬಹುದಾಗಿದೆ.
ಲೇಖಕರು: ಡಾ. ನಿಶ್ಚಿತಾ ಕೆ. ಕನ್ಸಲ್ಟೆಂಟ್ ಎಂಡೋಕ್ರೈನಾಲಜಿ, ಗ್ಲೆನೀಗಲ್ಸ್ ಬಿಜಿಎಸ್ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.