ADVERTISEMENT

ಬಿ ಪಾಸಿಟಿವ್‌; ಕ್ಯಾನ್ಸರ್‌ ನೆಗೆಟಿವ್‌...

ಬಿ ಪಾಸಿಟಿವ್‌; ಕ್ಯಾನ್ಸರ್‌ ನೆಗೆಟಿವ್‌...

ಕೃಷ್ಣಿ ಶಿರೂರ
Published 3 ಫೆಬ್ರುವರಿ 2023, 19:38 IST
Last Updated 3 ಫೆಬ್ರುವರಿ 2023, 19:38 IST
ಫರಿದಾ ರಿಜ್ವಾನ್‌
ಫರಿದಾ ರಿಜ್ವಾನ್‌   

ಬೆಂಗಳೂರಿನ ಫರಿದಾ ರಿಜ್ವಾನ್‌ ಅವರಿಗೆ ಸ್ತನ ಕ್ಯಾನ್ಸರ್‌ ಪಾಸಿಟಿವ್‌ ಎಂದು ತಿಳಿದಾಗ ವಯಸ್ಸು ಕೇವಲ 29 ವರ್ಷ. ಅದು ಕೂಡ ಮೂರನೇ ಹಂತ. ಆ ಸಮಯದಲ್ಲಿ ಅವರಿಗೆ ಇಬ್ಬರು ಮಕ್ಕಳು. ಒಂದಕ್ಕೆ 4 ವರ್ಷ. ಮತ್ತೊಂದು ಹಾಲುಣ್ಣುವ 11 ತಿಂಗಳು ಕೂಸು.

ಒಂದು ಕಡೆ ಅನಾರೋಗ್ಯದ ಸವಾಲು. ಇನ್ನೊಂದೆಡೆ ಹಣಕಾಸಿನ ಮುಗ್ಗಟ್ಟು. ಅಂಥ ಸಂದರ್ಭದಲ್ಲೂ ಎದೆಗುಂದದೆ ಸ್ತನ ಛೇದನ ಮಾಡಿಸಿಕೊಂಡರು. ಕಿಮೋಥೆರಪಿಗೆ ಒಳಗಾಗಿ ಚಿಕಿತ್ಸೆ ಪಡೆದರು. ಪರಿಣಾಮ ಕ್ಯಾನ್ಸರ್‌ ಮುಕ್ತ ಜೀವನ ಆರಂಭಿಸಿ 27 ವರ್ಷಗಳೇ ಕಳೆದಿವೆ. ಸುಂದರ ಜೀವನ ತಮ್ಮದಾಗಿಸಿಕೊಂಡಿದ್ದಾರೆ.

ಕ್ಯಾನ್ಸರ್‌ ಗೆದ್ದ ಮೇಲೆ, ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ವೃತ್ತಿ ಜೀವನ ಆರಂಭಿಸಿದರು. ಶೈಕ್ಷಣಿಕ ಅಪ್ಲಿಕೇಶನ್‌ನೊಂದಿಗೆ ಪಠ್ಯಕ್ರಮ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಿಸ್ಕೂಲ್ ಮತ್ತು ಡೇ–ಕೇರ್ ಸೆಂಟರ್ ನಡೆಸುತ್ತಿದ್ದಾರೆ. ತಮ್ಮ ‘ವಿಶೇಷ ಮಗಳ‘ ಆರೈಕೆ ಮಾಡುತ್ತಲೇ, ಹೂಟ್ಟೂರು ಶಿರೂರಿನಲ್ಲಿರುವ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ಶಾಲೆಗೆ ಶೈಕ್ಷಣಿಕ ನಿರ್ದೇಶಕನಾಗಿ ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ.

ADVERTISEMENT

‘ಚಿಕಿತ್ಸೆಯಿಲ್ಲದೆ ಕೇವಲ ಸಕಾರಾತ್ಮಕ ಮನೋಭಾವ ಕ್ಯಾನ್ಸರ್ ಗುಣವಾಗಲು ಸಹಾಯ ಮಾಡುತ್ತದೆ ಎಂದು ನಾನು ಹೇಳಲಾರೆ. ಆದರೆ ಬದುಕುವ ಇಚ್ಛೆಯೊಂದಿಗೆ ಸರಿಯಾದ ಚಿಕಿತ್ಸೆ ಪಡೆದರೆ ಮತ್ತು ನಿಮ್ಮ ದೇಹವು ಹಾದುಹೋಗುವ ಬದಲಾವಣೆಗಳಿಂದ ತಲೆಕೆಡಿಸಿಕೊಳ್ಳದಿದ್ದರೆ, ಅದು ಖಂಡಿತವಾಗಿಯೂ ಸಹಾಯ ಮಾಡುತ್ತದೆ’ ಎಂಬುದು ಫರಿದಾ ಅಭಿಪ್ರಾಯ.

ಕ್ಯಾನ್ಸರ್‌ನೊಂದಿಗಿನ ತನ್ನ ಅನುಭವಗಳನ್ನು ತಮಾಷೆಯಾಗಿ ತೆಗೆದುಕೊಳ್ಳುವ ಮೂಲಕ ಜನರನ್ನು ನಗಿಸುತ್ತಾ. ಕ್ಯಾನ್ಸರ್‌ ರೋಗಿಗಳ ಪಾಲಿಗೆ ಸ್ಫೂರ್ತಿಯಾಗಿದ್ದಾರೆ ಫರಿದಾ.

ಇನ್ನಷ್ಟು ಸ್ಫೂರ್ತಿ ಕಥನಕ್ಕೆ: https://www.prajavani.net/women ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.