ADVERTISEMENT

ಕೊರೊನಾ | ಭಯ ಬೇಡ, ಲಕ್ಷಣ ಕಾಣಿಸಿಕೊಂಡರೆ ಏನೇನು ಮಾಡಬೇಕು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜುಲೈ 2020, 10:28 IST
Last Updated 7 ಜುಲೈ 2020, 10:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮಳೆಗಾಲ ಆರಂಭವಾಗಿರುವುದರಿಂದ ಶೀತ ಜ್ವರ, ನೆಗಡಿ, ಕೆಮ್ಮು ಬರುವುದು ಸಾಮಾನ್ಯವಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಆದರೆ, ಕೊರೊನಾ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆ ಇರಲಿ ಎಂದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು, ಅನಾರೋಗ್ಯ ಉಂಟಾದರೆ ಅಥವಾ ರೋಗ ಲಕ್ಷಣ ಕಂಡುಬಂದರೆ ಏನೇನು ಮಾಡಬೇಕು ಎಂದು ವಿಸ್ತೃತ ಮಾಹಿತಿಯುಳ್ಳ ‘ಕೋವಿಡ್ ಫ್ಲೋ ಚಾರ್ಟನ್ನು’ ಟ್ವೀಟ್ ಮಾಡಿದ್ದಾರೆ. ಚಾರ್ಟ್‌ನಲ್ಲಿರುವ ಮಾಹಿತಿ ಇಲ್ಲಿದೆ.

* ಅನಾರೊಗ್ಯ ಉಂಟಾದಲ್ಲಿ ತಕ್ಷಣ ವೈದ್ಯರನ್ನು (ಖಾಸಗಿ/ಸರ್ಕಾರಿ) ಭೇಟಿಯಾಗಿ

* ಫೀವರ್ ಕ್ಲಿನಿಕ್‌ಗೆ (ಖಾಸಗಿ/ಸರ್ಕಾರಿ) ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಿ

ADVERTISEMENT

* ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಶಿಫಾರಸು ಮಾಡದಿದ್ದರೆ, ವೈದ್ಯರು ಸೂಚಿಸಿರುವ ಔಷಧ ತೆಗೆದುಕೊಳ್ಳಿ

* ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿದ್ದರೆ, ಸರ್ಕಾರಿ/ಖಾಸಗಿ ಮಾದರಿ ಸಂಗ್ರಹ ಲ್ಯಾಬ್‌ಗಳಿಗೆ ಅಥವಾ ಕೋವಿಡ್–19 ಪರೀಕ್ಷಾ ಲ್ಯಾಬ್‌ಗಳಿಗೆ ತೆರಳಿ ಗಂಟಲು ದ್ರವದ ಮಾದರಿ ನೀಡಿ

* ಪರೀಕ್ಷಾ ವರದಿ ಬರುವವರೆಗೆ ಮನೆಯಲ್ಲೇ ಪ್ರತ್ಯೇಕವಾಗಿರಿ. ವೈದ್ಯರ ಸಲಹೆ–ಸೂಚನೆಗಳನ್ನು ಅನುಸರಿಸಿ

* ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದರೆ ವೈದ್ಯರನ್ನು ಭೇಟಿಯಾಗಿ ಅವರು ಸೂಚಿಸಿದಂತೆ ಔಷಧ ತೆಗೆದುಕೊಳ್ಳಿ

* ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದರೆ ಸ್ಥಳೀಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ

* ಸರ್ಕಾರಿ ಅಥವಾ ಖಾಸಗಿ ವೈದ್ಯರನ್ನು ಭೇಟಿಯಾಗಿ

* ಸೊಂಕಿನ ಲಕ್ಷಣಗಳು ಕಡಿಮೆ ಇದ್ದಲ್ಲಿ ಮನೆಯಲ್ಲೇ ಪ್ರತ್ಯೇಕ ವಾಸ ಮಾಡಿ ಅಥವಾ ಹೋಟೆಲ್‌ನಲ್ಲಿ ಪ್ರತ್ಯೇಕ ವಾಸ ಮಾಡಬಹುದು (ರೋಗಿಯೇ ವೆಚ್ಚ ಭರಿಸಬೇಕಾಗುತ್ತದೆ). ಅಥವಾ ಸರ್ಕಾರಿ ಐಸೋಲೇಷನ್ ಕೇಂದ್ರಗಳಲ್ಲಿ (ಕೋವಿಡ್ ಕೇರ್ ಸೆಂಟರ್‌ಗಳು) ಉಳಿಯಬಹುದು

* ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆ ಇದ್ದಲ್ಲಿ 108 ಸಂಖ್ಯೆಗೆ ಕರೆ ಮಾಡಿ. ಈ ಸಂಖ್ಯೆಗೆ ಕರೆ ಲಭ್ಯವಾಗದಿದ್ದಲ್ಲಿ 1912 ಸಂಖ್ಯೆಗೆ ಕರೆ ಮಾಡಿ

* ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ

* ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಬಹುದು (ರೋಗಿಯೇ ಚಿಕಿತ್ಸಾ ವೆಚ್ಚ ಪಾವತಿಸಬೇಕು). ಬೆಂಗಳೂರಿನಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ

* ಕೊರೊನಾಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಆಗಾಗ ಕೈಗಳನ್ನು ತೊಳೆಯುತ್ತಿರಿ. ಅಂತರ ಕಾಯ್ದುಕೊಳ್ಳಿ. ಮಾಸ್ಕ್‌ ಧರಿಸಿ ಹಾಗೂ ಮನೆಯಲ್ಲೇ ಸುರಕ್ಷಿತವಾಗಿರಿ

* ತುರ್ತು ವೈದ್ಯಕೀಯ ಸೇವೆಗಳಿಗಾಗಿ 104/9745697456 ಈ ಸಂಖ್ಯೆಗೆ ಕರೆ ಮಾಡಬಹುದು

* ಆಪ್ತಮಿತ್ರ ಸಹಾಯವಾಣಿ 14410 ಈ ಸಂಖ್ಯೆಗೂ ಕರೆ ಮಾಡಬಹುದು

* ಹೆಚ್ಚಿನ ಮಾಹಿತಿಗೆ ಈ ಜಾಲತಾಣಕ್ಕೆ ಭೇಟಿ ನೀಡಿ: https://covid19.karnataka.gov.in/

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.