ರೊಬೊಟಿಕ್ ಸರ್ಜರಿಯಲ್ಲಿ 'ಡ ವಿಂಚಿ' ತಂತ್ರಜ್ಞಾನ ಬಳಸಿಕೊಂಡು ಕ್ಯಾನ್ಸರ್ ರೋಗಿಗಳಿಗೆ ಸುಧಾರಿತ ಹಾಗೂ ಪರಿಣಾಮಕಾರಿಯಾದ ಚಿಕಿತ್ಸೆ ನೀಡಬಹುದು. ಇದರಿಂದ ರೋಗಿಗಳು ತ್ವರಿತವಾಗಿ ಗುಣಮುಖರಾಗುತ್ತಾರೆ ಮತ್ತು ಆಸ್ಪತ್ರೆಯಿಂದ ಬೇಗನೆ ಡಿಸ್ಚಾರ್ಜ್ ಆಗಬಹುದು ಎಂದು ಇತ್ತೀಚಿನ ಅಧ್ಯಯನದ ವರದಿಯೊಂದು ತಿಳಿಸಿದೆ.
ಭಾರತೀಯ ಸ್ತ್ರೀರೋಗ ತಜ್ಞರು–ಕ್ಯಾನ್ಸರ್ ಅಧ್ಯಯನ ಸಮೂಹ 'ಕ್ಯೂರಿಯಸ್'ನಲ್ಲಿ ಪ್ರಕಟಿಸಿದ ಬಹುಕೇಂದ್ರ ಅಧ್ಯಯನವು, ಭಾರತದಲ್ಲಿ ಎಂಡೊಮೆಟ್ರಿಯಲ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಉತ್ತಮ ಫಲಿತಾಂಶ ನೀಡಿದೆ.
‘ಡ ವಿಂಚಿ’ ಯಂತಹ ಮುಂದುವರಿದ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರಿಂದ ಕ್ಯಾನ್ಸರ್ ರೋಗಿಗಳ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ರೋಬೋಟಿಕ್‌ನ ಸಹಾಯವನ್ನು ಸಂಶೋಧನೆಗಳು ತೋರಿಸಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.