ADVERTISEMENT

‌Eye Safety Tips: ದೀಪಾವಳಿ.. ಕಣ್ಣುಗಳು ಜೋಪಾನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 0:30 IST
Last Updated 19 ಅಕ್ಟೋಬರ್ 2025, 0:30 IST
   

ಬೆರಗುಗೊಳಿಸುವ ದೀಪಗಳು ಹಾಗೂ ಪಟಾಕಿಗಳ ನಡುವೆಯೂ ಕಣ್ಣುಗಳ ಬಗ್ಗೆ ಜಾಗ್ರತೆ ವಹಿಸುವುದು ಬಹುಮುಖ್ಯ.

ಪಟಾಕಿಗಳಲ್ಲಿರುವ ರಾಸಾಯನಿಕ ಅಂಶಗಳು ಕಣ್ಣಿನ ಮೇಲೆ ನೇರವಾದ ಪರಿಣಾಮ ಬೀರಬಹುದು. ಸಾಮಾನ್ಯ ಪಟಾಕಿಗಳು, ಸುರುಸುರುಬತ್ತಿ  ಅಷ್ಟೆ ಅಲ್ಲದೇ ಚಕ್ರ ಪಟಾಕಿಗಳು ಕಣ್ಣಿಗೆ ಹಾನಿ ಮಾಡಬಲ್ಲವು. ಪಟಾಕಿ ಹೊಡೆಯುವವರಷ್ಟೆ ಅಲ್ಲದೇ ಹಾದಿಹೋಕರೂ ಕೂಡ ಪಟಾಕಿಗಳಿಂದ ಕಣ್ಣಿಗೆ ಗಾಯ ಮಾಡಿಕೊಂಡ ಉದಾಹರಣೆಗಳಿವೆ. 

 ಪಟಾಕಿಯ ಸಿಡಿತದಿಂದ ಕಣ್ಣಿಗೆ ಪೆಟ್ಟಾದರೆ ಸೌಮ್ಯವಾದ ಕಿರಿಕಿರಿಯಿಂದ ಕಾರ್ನಿಯಲ್‌ ಸವೆತ, ರೆಟಿನಲ್‌ನಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು.  ಪಟಾಕಿಯಲ್ಲಿ ಬೆರೆತಿರುವ ಸ್ಫೋಟಕ ಪದಾರ್ಥಗಳು, ರಾಸಾಯನಿಕಗಳಿಂದ ಶಾಶ್ವತ ಕುರುಡುತನ  ಬರಬಹುದು. ಅಷ್ಟೆ ಅಲ್ಲದೇ ಪಟಾಕಿ ಸಿಡಿತದಿಂದಾಗುವ ಹೊಗೆಯು ಗಂಟಲು ಊತ ಮತ್ತು ಗಂಟಲು ಸೋಂಕುಗಳಿಗೆ ಕಾರಣವಾಗಬಹುದು. ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸಿರುವವರು ಈ ಪಟಾಕಿಯಿಂದಾಗುವ ಶಾಖಕ್ಕೆ ನೇರವಾಗಿ ಒಡ್ಡಿಕೊಂಡರೆ ಕಣ್ಣುಗಳಲ್ಲಿ ಕಿರಿ ಕಿರಿ ಕಾಣಿಸಿಕೊಳ್ಳಬಹುದು.  ಕಣ್ಣಿನ ಗುಡ್ಡೆಗೆ ಗಾಯ, ಕಣ್ಣಿನಸುತ್ತ ಮೂಗೇಟು, ಕಣ್ಣಿನ ಮುಂಭಾಗದಲ್ಲಿ ರಕ್ತಸ್ರಾವ, ಕಣ್ಣಿನ ಮುಂಭಾಗದಲ್ಲಿ ರಕ್ತಸ್ರಾವ ಉಂಟಾಗಬಹುದು. 

ADVERTISEMENT

ಏನು ಮಾಡಬೇಕು

* ಪಟಾಕಿಯ ಕಿಡಿಗಳು ಕಣ್ಣಿನಲ್ಲಿ ತೂರಿದರೆ , ನಿಮ್ಮ ಕಣ್ಣುರೆಪ್ಪೆಗಳನ್ನು ತೆರೆದಿಟ್ಟು ನಿರಂತರವಾಗಿ ನೀರಿನಿಂದ ತೊಳೆಯಿರಿ.
* ಕಣವನ್ನು ತೆಗೆದುಹಾಕಲು ಸಾಧ್ಯವಾಗದಿದ್ದರೆ, ಕಣ್ಣುಗಳನ್ನು ಮುಚ್ಚಿಟ್ಟು ಕೂಡಲೇ ವೈದ್ಯರನ್ನು ಭೇಟಿ ಮಾಡಿ.

*ಕಣ್ಣಿಗೆ ರಾಸಾಯನಿಕಗಳು ಸೋಕಿದರೆ,  30 ನಿಮಿಷಗಳ ಕಾಲ ತೊಳೆಯಿರಿ ಮತ್ತು ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.
*ಯಾವಾಗಲೂ ತೆರೆದ ಜಾಗದಲ್ಲಿ ಪಟಾಕಿಗಳನ್ನು ಸಿಡಿಸಿ.
* ಪಟಾಕಿಗಳನ್ನು ನಿರ್ವಹಿಸುವಾಗ ರಕ್ಷಣಾತ್ಮಕ ಕನ್ನಡಕ ಅಥವಾ ಗಾಗಲ್ಸ್ ಧರಿಸಿ.
*ಸುರಕ್ಷಿತ ದೂರವನ್ನು ಕಾಯ್ದುಕೊಳ್ಳಿ:  ಕನಿಷ್ಠ 5 ಮೀಟರ್ ದೂರ ಕಾಯ್ದುಕೊಳ್ಳಿ. 
*ಪಟಾಕಿ ಸಿಡಿಸುವ ಮೊದಲು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ತೆಗೆದುಹಾಕಿ; ಬದಲಿಗೆ ರಕ್ಷಣಾತ್ಮಕ ಕನ್ನಡಕವನ್ನು ಬಳಸಿ.
*ಬಳಸಿದ ಪಟಾಕಿಗಳನ್ನು ವಿಲೇವಾರಿ ಮಾಡುವ ಮೊದಲು ಅವುಗಳನ್ನು ನೀರಿನಲ್ಲಿ ನೆನೆಸಿ ನಿಷ್ಕ್ರಿಯಗೊಳಿಸಿ. 
* ಆಕಸ್ಮಿಕ ಬೆಂಕಿ ನಂದಿಸಲು ಹತ್ತಿರದಲ್ಲಿ ನೀರು ಅಥವಾ ಮರಳಿನ ಬಕೆಟ್ ಇರಿಸಿ.
* ಪಟಾಕಿಗಳನ್ನು ಮಕ್ಕಳಿಗೆ ತಲುಪದಂತೆ ಸುರಕ್ಷಿತವಾಗಿ ಸಂಗ್ರಹಿಸಿ.
* ಸುಟ್ಟ ಪಟಾಕಿಗಳ ಮೇಲೆ ಕಾಲಿಡುವುದನ್ನು ತಪ್ಪಿಸಲು ಗಟ್ಟಿ ಚಪ್ಪಲಿಗಳನ್ನು ಧರಿಸಿ.
* ಮಕ್ಕಳು ಪಟಾಕಿ ಹೊಡೆಯುತ್ತಿದ್ದರೆ, ಅವರ ಜತೆ ಇರಿ. 

ಏನು ಮಾಡಬಾರದು

*ಕಣ್ಣುಗಳನ್ನು ಉಜ್ಜಬೇಡಿ ಅಥವಾ ಕೆರೆದುಕೊಳ್ಳಬೇಡಿ.
*ಗಾಯಗೊಂಡ ಕಣ್ಣಿಗೆ ಒತ್ತಡ ಹೇರಬೇಡಿ.
*ದೊಡ್ಡ ಕಣವನ್ನು ಅಥವಾ ಸಿಕ್ಕಿಹಾಕಿಕೊಂಡ ಕಣವನ್ನು ನೀವೇ ತೆಗೆದುಹಾಕಲು ಪ್ರಯತ್ನಿಸಬೇಡಿ.
*ಕಣ್ಣಿನ ಗಾಯಗಳಿಗೆ ಪೇನ್ ರಿಲೀವರ್‌ಗಳು ಸೇರಿದಂತೆ ಸ್ವಯಂ ಔಷಧ ತೆಗೆದುಕೊಳ್ಳಬೇಡಿ. 

ಲೇಖಕರು: ನೇತ್ರ ತಜ್ಞರು, ಅಗರ್‌ವಾಲ್‌ ಕಣ್ಣಿನ ಆಸ್ಪತ್ರೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.