ADVERTISEMENT

76.5 ಲಕ್ಷ ಮಾತ್ರೆಗಳನ್ನು ವಿತರಿಸಿದ ಡಾ.ಗಿರಿಧರ ಕಜೆ

ರೋಗನಿರೋಧಕ ಶಕ್ತಿ ವೃದ್ಧಿಗೆ ಸಹಾಯಕ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 19:24 IST
Last Updated 9 ಸೆಪ್ಟೆಂಬರ್ 2020, 19:24 IST
ಡಾ.ಗಿರಿಧರ ಕಜೆ
ಡಾ.ಗಿರಿಧರ ಕಜೆ   

ಬೆಂಗಳೂರು: ರೋಗ ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿಯಾಗಿರುವ ಆಯುರ್ವೇದ ಮಾತ್ರೆಗಳನ್ನು ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅವರು ಉಚಿತವಾಗಿ ವಿತರಿಸುತ್ತಿದ್ದು, ಅಲ್ಪಾವಧಿಯಲ್ಲಿ 85 ಸಾವಿರ ಮಂದಿಗೆ 76.5 ಲಕ್ಷ ಮಾತ್ರೆಗಳನ್ನು ನೀಡಿದ್ದಾರೆ.

ಕೋವಿಡ್‌ ಕಾರಣ ಸೋಂಕಿತರ ನೇರ ಹಾಗೂ ಪರೋಕ್ಷ ಸಂಪರ್ಕಿತರಿಗೆ ನೀಡಲು 72 ಲಕ್ಷ ಮಾತ್ರೆಗಳನ್ನು ರಾಜ್ಯ ಸರ್ಕಾರಕ್ಕೆ ಉಚಿತವಾಗಿ ಹಸ್ತಾಂತರಿಸುವುದಾಗಿ ಕಜೆ ಅವರು ಈ ಹಿಂದೆ ಹೇಳಿದ್ದರು. ಆದರೆ, ಸರ್ಕಾರ ಆಸಕ್ತಿ ತೋರಿಸದಿದ್ದರಿಂದ ಸಾರ್ವಜನಿಕ ಜೀವನದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಕಾರ್ಯನಿರ್ವಹಿಸುತ್ತಿರುವವರನ್ನು ಗುರುತಿಸಿ, ಮಾತ್ರೆಗಳನ್ನು ವಿತರಿಸಿದ್ದಾರೆ.

14 ಗಿಡಮೂಲಿಕೆಗಳಿಂದಸಂಶೋಧಿಸಿದ್ದ ‘ಭೌಮ್ಯ’ ಮತ್ತು ‘ಸಾತ್ಮ್ಯ’ ಮಾತ್ರೆಗಳನ್ನು ಕಜೆ ಅವರು ಜ್ವರ, ಶೀತದ ಜತೆಗೆ ಸಾಂಕ್ರಾಮಿಕ ರೋಗಗಳಿಗೆ 20 ವರ್ಷಗಳಿಂದ ನೀಡುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್‌) ಅಂಗ ಸಂಸ್ಥೆ ಕ್ಲಿನಿಕಲ್ ಟ್ರಯಲ್ಸ್‌ ರಿಜಿಸ್ಟ್ರಿ ಆಫ್ ಇಂಡಿಯಾ
ದಲ್ಲಿ (ಸಿಟಿಆರ್‌ಐ) ಅವರು ತಮ್ಮಸಂಶೋಧನೆಯನ್ನು ನೋಂದಾಯಿಸಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 10 ಕೋವಿಡ್‌ ರೋಗಿಗಳ ಮೇಲೆ ವೈದ್ಯಕೀಯ ಪ್ರಯೋಗ ನಡೆಸಿದ್ದರು. ಪ್ರಯೋಗ ಉತ್ತಮ ಫಲಿತಾಂಶ ನೀಡಿದೆ ಎಂದು ಆರೋಗ್ಯ ಸಚಿವರೇ ಸ್ಪಷ್ಟಪಡಿಸಿದ್ದರು.

ADVERTISEMENT

ಅಗತ್ಯ ಇದ್ದವರಿಗೆ ವಿತರಣೆ: ‘ಅಗತ್ಯ ಇರುವವರನ್ನು ಗುರುತಿಸಿ ಮಾತ್ರೆಗಳನ್ನು ವಿತರಿಸಲಾಗಿದೆ. ಇವುಗಳನ್ನು ಕೋವಿಡ್‌ಗೆ ಔಷಧಿ ಎಂದು ನೀಡುತ್ತಿಲ್ಲ. ಬದಲಿಗೆ ಸೋಂಕು ತಡೆಯಲು, ಸೋಂಕಿತರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿ, ಚೇತರಿಸಿಕೊಳ್ಳಲು ನೆರವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.