ಪ್ರಾತಿನಿಧಿಕ ಚಿತ್ರ
ನವದೆಹಲಿ: ಭಾರತದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ಶೇಕಡಾ 14ಕ್ಕಿಂತ ಹೆಚ್ಚು ಜನರು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್, ಮುಂಬೈನ ಅಂತರರಾಷ್ಟ್ರೀಯ ಜನಸಂಖ್ಯಾ ಗಣತಿ ಸಂಸ್ಥೆ ಸೇರಿದಂತೆ ಸಂಶೋಧಕರ ತಂಡ ನಡೆಸಿದ ಸಂಶೋಧನಾ ವರದಿ ಮಾಹಿತಿಯನ್ನು ಹಂಚಿಕೊಂಡಿದೆ.
ವಿಶ್ವದ ಅತಿದೊಡ್ಡ ಡೇಟಾಬೇಸ್ ಆಗಿರುವ 'ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಇನ್ ಇಂಡಿಯಾ' (LASI)ಯ ಭಾಗವಾಗಿ 31,000ಕ್ಕೂ ಹೆಚ್ಚು ವಯಸ್ಕರಿಗೆ ಸ್ಪೈರೋಮೆಟ್ರಿಯನ್ನು ನೀಡಲಾಗಿತ್ತು. ಸ್ಪೈರೋಮೆಟ್ರಿ ಎಂದರೆ ಶ್ವಾಸಕೋಶದ ಕಾರ್ಯವನ್ನು ನಿರ್ಣಯಿಸುವ ವಿಧಾನವಾಗಿದೆ. ಇದು ಒಬ್ಬರ ಶ್ವಾಸಕೋಶ ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ.
PLOS One ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಗಳ ಪ್ರಕಾರ, ಶ್ವಾಸಕೋಶದ ಸಮಸ್ಯೆ ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚಾಗಿ ಕಂಡುಬಂದಿದೆ. ಅಲ್ಲದೇ ವಯಸ್ಸಾದಂತೆಲ್ಲಾ ರೋಗದ ಸಮಸ್ಯೆ ಉಲ್ಬಣಿಸುತ್ತದೆ. ಉಸಿರಾಟಕ್ಕೆ ಅಡಚಣೆಯುಂಟು ಮಾಡುವ ‘ಅಬ್‌ಸ್ಟ್ರಕ್ಟಿವ್ ಲಂಗ್ ಡಿಸೀಸ್’ ಎಂಬ ಶ್ವಾಸಕೋಶ ಸಂಬಂಧಿತ ಕಾಯಿಲೆಯು ದೀರ್ಘಕಾಲದಲ್ಲಿ ಅಂಗಾಂಗಗಳಿಗೆ ತೀವ್ರ ಹಾನಿಯನ್ನುಂಟು ಮಾಡಲಿದೆ.
ಮತ್ತೊಂದು ಆಘಾತಕಾರಿ ಅಂಶವೆಂದರೆ, ಅಡುಗೆಗೆ ಅಶುದ್ಧ ಎಣ್ಣೆಯನ್ನು ಬಳಸುವ ಪ್ರಮಾಣವು ಶ್ವಾಸಕೋಶದ ಕಾಯಿಲೆಗೆ ಕಾರಣವಾಗಿದೆ. ದಕ್ಷಿಣ ಭಾರತದಲ್ಲಿ ಶೇಕಡಾ 30ರಷ್ಟು, ಮತ್ತು ಈಶಾನ್ಯದಲ್ಲಿ ಶೇಕಡಾ 65ಕ್ಕಿಂತ ಹೆಚ್ಚು ಅಶುದ್ಧ ಎಣ್ಣೆಯನ್ನು ಬಳಸುವುದು ಕಂಡುಬಂದಿದೆ. ಸದ್ಯ ಎರಡನೇ ಹಂತದ ಅಂಕಿ ಅಂಶ ಸಂಗ್ರಹಣೆ ನಡೆಯುತ್ತಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.