ADVERTISEMENT

ನಾರಾಯಣಮೂರ್ತಿ ಸಲಹೆಯ 9 ಟು 9 X 6 ಸೂತ್ರ: ಆರೋಗ್ಯದ ಮೇಲೆ ಪರಿಣಾಮವೇನು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2025, 6:18 IST
Last Updated 24 ನವೆಂಬರ್ 2025, 6:18 IST
<div class="paragraphs"><p>ನಾರಾಯಣ ಮೂರ್ತಿ</p></div>

ನಾರಾಯಣ ಮೂರ್ತಿ

   

ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೆಚ್ಚು ಅವಧಿ ಕೆಲಸ ಮಾಡುವ ಕುರಿತು ಆಗಾಗ ಹೇಳಿಕೆ ನೀಡುತ್ತಿರುತ್ತಾರೆ. ಈ ಬಾರಿ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ವಾದವನ್ನು ಸಮರ್ಥಿಸಿಕೊಂಡಿದ್ದು, ಅದಕ್ಕೆ ಚೀನಾ ದೇಶದ ಉದಾಹರಣೆ ನೀಡಿದ್ದಾರೆ.

ಚೀನಾದಲ್ಲಿ ವಾರಕ್ಕೆ 6 ದಿನ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡುವುದನ್ನು ನಾರಾಯಣಮೂರ್ತಿ ಉದಾಹರಣೆಯಾಗಿ ನೀಡಿದ್ದಾರೆ. ಅವರಂತೆ ಭಾರತದ ಅಭಿವೃದ್ದಿಗೂ ಹೆಚ್ಚುವರಿ ಅವಧಿ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ. ಆದರೆ, ಈ ಹೆಚ್ಚು ಅವಧಿ ಕೆಲಸ ಉದ್ಯೋಗಿಗಳ ಮಾನಸಿಕ ಸ್ಥಿತಿಯ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ನೋಡೋಣ.

ADVERTISEMENT

ಪ್ರಸ್ತುತ ದಿನಗಳಲ್ಲಿ ಖಾಸಗಿ ಜೀವನಕ್ಕಿಂತ ಕೆಲಸ ದೊಡ್ಡದು ಎಂಬ ಭಾವನೆ ಯುವ ಜನರಲ್ಲಿ ಮೂಡಿದೆ. ಆದರೆ ಒಬ್ಬ ಮನುಷ್ಯ ಉತ್ತಮವಾಗಿ ಕೆಲಸ ಮಾಡಬೇಕೆಂದರೆ ಸರಿಯಾದ ನಿದ್ದೆ, ಪೌಷ್ಠಿಕ ಆಹಾರ ಮತ್ತು ವಿಶ್ರಾಂತಿ ಅತ್ಯಗತ್ಯ. ಇವುಗಳಿಲ್ಲದೆ ದೇಹ ಹಾಗೂ ಮನಸ್ಸು ಕುಗ್ಗುತ್ತದೆ. ಆಗ ಕೆಲಸದ ಮೇಲೆ ಹೆಚ್ಚು ಕೇಂದ್ರೀಕರಿಸಲು ಸಾಧ್ಯವಾಗದೆ ಫಲಿತಾಂಶ ಸಹ ಕುಸಿಯುತ್ತದೆ.

ಚೀನಾ ದೇಶದ ಉದಾಹರಣೆ:

ಚೀನಾದಲ್ಲಿ ಜಾರಿಯಿರುವ 9,9,6 ಕೆಲಸದ ಸೂತ್ರ (ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ, ವಾರಕ್ಕೆ 6 ದಿನ) ಆರಂಭದಲ್ಲಿ ಉತ್ಪಾದಕತೆಗೆ ಸಹಕಾರಿ ಎನಿಸಿತ್ತು. ಆದರೆ ಕಾಲಕ್ರಮೇಣ ಇದು ಅತಿಯಾದ ಒತ್ತಡ, ಕುಟುಂಬದಿಂದ ದೂರವಾಗುವಿಕೆ, ಆತ್ಮಹತ್ಯೆ ಪ್ರವೃತ್ತಿ ಮುಂತಾದ ಸಮಸ್ಯೆಗಳನ್ನು ಹೆಚ್ಚಿಸಿತು. ವೈದ್ಯಕೀಯ ವರದಿಗಳ ಪ್ರಕಾರ ಹೆಚ್ಚು ಸಮಯ ಕೆಲಸ ಮಾಡುವ ಯುವಕರಲ್ಲಿ ಕಡಿಮೆ ವಯಸ್ಸಿಗೆ ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಮೈಗ್ರೇನ್, ಹೃದಯ ಸಂಬಂಧಿ ರೋಗಗಳು ಹೆಚ್ಚಾಗಿ ಕಂಡು ಬಂದಿದೆ.

ನಾರಾಯಣ ಮೂರ್ತಿ ಹೇಳಿದ್ದೇನು?

ಭಾರತದ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಿದರೆ ದೇಶ ಅಭಿವೃದ್ಧಿಯಾಗುತ್ತದೆ ಎಂದು ನಾರಾತಣ ಮೂರ್ತಿಯವರು ಹೇಳಿದ್ದರು. ಅದಕ್ಕೆ ಅವರು ಚೀನಾ ದೇಶವನ್ನು ಉದಾಹರಣೆಯಾಗಿ ನೀಡಿದ್ದಾರೆ.

ಮನೋವಿಜ್ಞಾನ ಏನು ಹೇಳುತ್ತದೆ?

ಹೆಚ್ಚು ಗಂಟೆ ಕೆಲಸ = ಹೆಚ್ಚು ಫಲಿತಾಂಶ ಎಂಬ ತಪ್ಪು ಕಲ್ಪನೆ.

ಮಾನಸಿಕ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ

1. ಗಂಭೀರ ಒತ್ತಡ ಮತ್ತು ಕಳವಳ

2. ನಿದ್ರಾ ಹೀನತೆ

3. ಭಾವನಾತ್ಮಕ ಅಸ್ಥಿರತೆ

4. ಕೆಲಸದ ಮೇಲಿನ ಆಸಕ್ತಿ ಕುಗ್ಗುವುದು

5. ಸಮಾಜ ಹಾಗೂ ಕುಟುಂಬದಿಂದ ದೂರವಾಗುವುದು

6. ಆಂತಕ, ಖಿನ್ನತೆಯ ಲಕ್ಷ್ಮಣಗಳು

7. ಬೈಪೊಲಾರ್ ಮೂಡ್ ಸಮಸ್ಯೆ

8. ವೈಕಯಕ್ತಿಕ ಜೀವನದಲ್ಲಿನ ಅತೃಪ್ತಿ ಭಾವನೆ

ಅತಿಯಾಗಿ ಕೆಲಸ ಮಾಡಿದಾಗ ಯೌವನದಲ್ಲೇ ದೇಹದ ಮೇಲೆ ಪರಿಣಾಮ ಬೀರುತ್ತದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ, ನಿರಂತರ ಒತ್ತಡ ಮತ್ತು ನಿದ್ರೆ ಕೊರತೆ ಚಿಕ್ಕ ವಯಸ್ಸಿನಲ್ಲೇ ಕೆಲವು ರೋಗಗಳಿಗೆ ಕಾರಣವಾಗಬಹುದು.

1. ಪಾರ್ಶ್ವವಾಯು (Stroke) – ಅತಿಯಾದ ರಕ್ತದೊತ್ತಡದಿಂದ

2. ಹೃದಯಾಘಾತ (Heart Attack) – ಹೃದಯದ ಮೇಲೆ ಒತ್ತಡ

3. ಬೈಪೊಲಾರ್ ಲಕ್ಷಣಗಳು (Mood Dysregulation) – ಭಾವನೆಗಳಲ್ಲಿ ತೀವ್ರ ಏರಿಳಿತ

4. ಡಯಾಬಿಟಿಸ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು – ಹಾರ್ಮೋನ್ ಅಸ್ಥಿರತೆಯಿಂದ

5. ತಲೆನೋವು, ಮೈಗ್ರೇನ್, ಬೆನ್ನುನೋವು – ಸ್ನಾಯು ಒತ್ತಡದಿಂದ

(ಲೇಖಕರು: ಯು. ಕಾವ್ಯಾ, ಮನಃಶಾಸ್ರ್ತಜ್ಞರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.