ADVERTISEMENT

Orthopedic Health: ಭುಜದ ನೋವು ನಿರ್ಲಕ್ಷ್ಯ ಸಲ್ಲ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 22:30 IST
Last Updated 18 ಅಕ್ಟೋಬರ್ 2025, 22:30 IST
   

ಆಗಾಗ್ಗೆ ನೀವು ಭುಜದ ನೋವಿನಿಂದ ಬಳಲುತ್ತಿದ್ದೀರಾ?. ಹಾಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಸದ್ಯಕ್ಕೆ ಭುಜದ ನೋವಿನ ಸಮಸ್ಯೆ ಬೆನ್ನುನೋವಿಗೆ ಪ್ರತಿಸ್ಪರ್ಧಿ ಎನಿಸಿಕೊಂಡಿದೆ. 

ಭಾರತೀಯ ಮೂಳೆಚಿಕಿತ್ಸಾ ಸಂಘದ ಸಂಶೋಧನೆಯ ಪ್ರಕಾರ 25ರಿಂದ 45 ವಯೋಮಿತಿಯಲ್ಲಿರುವ ವಿವಿಧ ಬಗೆಯ ವೃತ್ತಿಪರರಲ್ಲಿ ಶೇ 40ರಷ್ಟು ಮಂದಿ ಭುಜದ ಸಮಸ್ಯೆಯಿಂದ ನರಳುತ್ತಿದ್ದಾರೆ.

ದೀರ್ಘಕಾಲ ಮೇಜಿನ ಮುಂದೆ ಕುಳಿತು ಕೆಲಸ ಮಾಡುವುದು, ಕಳಪೆ ಭಂಗಿ, ನಿರಂತರ ಫೋನ್‌ಗಳ ಬಳಕೆ, ಭಾರವಾದ ಚೀಲಗಳನ್ನು ಹೊತ್ತುಕೊಂಡು ಭುಜ ಮತ್ತು ಬೆನ್ನಿನ ಸ್ನಾಯುಗಳ ಮೇಲೆ ಅಪಾರ ಒತ್ತಡ ಹೇರಡುವುದು, ವ್ಯಾಯಾಮ ಮಾಡದೇ ಇರುವ  ಜಡ ಬದುಕು, ಸತತ ಗ್ಯಾಜೆಟ್‌ ಬಳಕೆಯೂ ಭುಜದ ನೋವಿಗೆ ಕಾರಣವಾಗಿರಬಹುದು ಎನ್ನುತ್ತದೆ ಸಂಶೋಧನೆ.  ನಿರಂತರವಾಗಿ ಭುಜದಲ್ಲಿ ಸಣ್ಣಗೆ ನೋವು ಬರುತ್ತಿದ್ದರೆ ಅದು ಕ್ರಮೇಣ ದೊಡ್ಡ ಪ್ರಮಾಣದಲ್ಲಿ ನೋವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಫ್ರೋಜನ್‌ ಹಾಗೂ ರೋಟೇಟರ್‌ ಕಫ್‌ನಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಭುಜದ ನೋವಿನಿಂದಾಗಿ ಕುತ್ತಿಗೆ ಅಥವಾ ಬೆನ್ನು ಭಾಗದಲ್ಲಿ ನೋವು ಉಲ್ಭಣಗೊಳ್ಳುವ ಸಾಧ್ಯತೆ ಇರುತ್ತದೆ. 

ADVERTISEMENT

ಲಕ್ಷಣಗಳು ಹೀಗಿವೆ

→ವಿಶೇಷವಾಗಿ ಬೆಳಿಗ್ಗೆ ಸಮುಯದಲ್ಲಿ ನಿರಂತರ ನೋವು ಅಥವಾ ಬಿಗಿತ ಉಂಟಾಗಬಹುದು.

→ ವಸ್ತುಗಳನ್ನು ಎತ್ತುವಾಗ ಭುಜದಲ್ಲಿ ನೋವು ಕಾಣಿಸಿಕೊಳ್ಳಬಹುದು

→ ನಿರ್ದಿಷ್ಟ ಚಲನೆಗಳ ಸಮಯದಲ್ಲಿ ತೀಕ್ಷ್ಣವಾದ ಸೆಳೆತ ಉಂಟಾಗಬಹುದು.

→ ಊತ, ಉರಿ ಕಾಣಿಸಿಕೊಳ್ಳಬಹುದು.

→ ನೋವಿನಿಂದ ನಿದ್ರೆ ಬಾರದೇ ಇರಬಹುದು. ನೋವು ಕ್ರಮೇಣ ಭುಜದಿಂದ ಕುತ್ತಿಗೆ ಹಾಗೂ ತೋಳಿನ ಸ್ನಾಯುಗಳ ಮೇಲೂ ಪರಿಣಾಮ ಬೀರಬಹುದು.

ಏನು ಮಾಡಬಹುದು?

→ ಕೆಲಸದ ನಡುವೆ ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಿ ಭುಜಗಳನ್ನು ಆಗಾಗ್ಗೆ ತಿರುಗಿಸಿ.

→ಮೇಜಿನ ಮುಂದೆ, ನೇರವಾಗಿ ಕುಳಿತುಕೊಳ್ಳಿ ಮತ್ತು ಬಾಗುವುದನ್ನು ತಪ್ಪಿಸಿ. ಕೆಲಸದ ಮಧ್ಯೆ ಸ್ವಲ್ಪ ತಲೆ-ಕುತ್ತಿಗೆಯ ಭಾಗದಲ್ಲಿ ಚಲನೆಗಳನ್ನು ಮಾಡಿ ಮತ್ತು ಕಣ್ಣುಗಳ ವಿಶ್ರಾಂತಿಗೆ
20-20-20 ನಿಯಮ ಅನುಸರಿಸಿ.

→ಎರಡು ವಾರಗಳಿಗಿಂತ ಹೆಚ್ಚು ಕಾಲ ಭುಜ ಹಾಗೂ ತೋಳಿನ ಭಾಗದಲ್ಲಿ ನೋವು ಕಾಣಿಸಿಕೊಂಡರೇ
ತಜ್ಞವೈದ್ಯರನ್ನು ನೋಡಿ.

ಲೇಖಕರು: ಮೂಳೆತಜ್ಞ , ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.