ADVERTISEMENT

ತಲೆಹೊಟ್ಟಿಗಿದೆ ಪರಿಹಾರ

ಡಾ.ಕರವೀರಪ್ರಭು ಕ್ಯಾಲಕೊಂಡ
Published 13 ಡಿಸೆಂಬರ್ 2024, 23:45 IST
Last Updated 13 ಡಿಸೆಂಬರ್ 2024, 23:45 IST
   

ನೀವೊಮ್ಮೆ ತಲೆ ಬಗ್ಗಿಸಿ, ಕೂದಲಿನೊಳಗೆ ಕೈ ಸೇರಿಸಿ, ನೆತ್ತಿಯನ್ನು ಪಟಪಟನೆ ಜಾಡಿಸಿಕೊಳ್ಳಿ. ಸಿನಿಮಾಗಳಲ್ಲಿ ಹಿಮ ಉದುರುವ ರೀತಿಯಲ್ಲಿ ಬೆಳ್ಳನೆಯ ಪುಡಿಯಂಥದ್ದು  ತಲೆಯಿಂದ ಉದುತ್ತಿದೆಯೆಂದರೆ  ಅನುಮಾನವೇ ಬೇಡ; ನಿಮ್ಮನ್ನು ತಲೆಹೊಟ್ಟಿನ ಸಮಸ್ಯೆ ಖಂಡಿತವಾಗಿಯೂ ಕಾಡುತ್ತಿದೆ. ಮೂವರಲ್ಲಿ ಒಬ್ಬರನ್ನಾದರೂ ತಲೆಹೊಟ್ಟು ಕಾಡದೇ ಇರದು

ಕಾರಣಗಳೇನು?

  • ಸ್ವಚ್ಛತೆ ಇಲ್ಲದೇ ಇರುವುದು. ತಲೆಗೂದಲಿನ ಸ್ವಚ್ಛತೆ ಕಡೆ ಗಮನ ನೀಡದೆ ಹೋದರೆ ತಲೆಹೊಟ್ಟಿನ ಸಮಸ್ಯೆ ಉಂಟಾಗಬಹುದು. 

  • ಅತಿಯಾದ ಮಾನಸಿಕ ಒತ್ತಡ. 

    ADVERTISEMENT
  • ನಿಃಶ್ಯಕ್ತಿ ಕಾಡುತ್ತಿದ್ದಾಗಲೂ ತಲೆಹೊಟ್ಟಿನ ಸಮಸ್ಯೆ ಹೆಚ್ಚುತ್ತದೆ. 

  • ಪಿ.ಓವೆಲ್‌ ಎನ್ನುವ ಶಿಲೀಂಧ್ರ ಸೋಂಕಿನಿಂದ ತಲೆಹೊಟ್ಟಿನ ಸಮಸ್ಯೆ ಉಂಟಾಗುತ್ತದೆ. ಈ ಶಿಲೀಂಧ್ರ ಬಹುತೇಕ ಎಲ್ಲರ ತಲೆಯಲ್ಲಿಯೂ ಇರುತ್ತದೆ. ಕೆಲವರಲ್ಲಿ ತೀವ್ರವಾಗಿದ್ದರೆ, ಇನ್ನು ಕೆಲವರಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ. ವಾತಾವರದಲ್ಲಿ ಏರುಪೇರು, ಪೌಷ್ಟಿಕ ಆಹಾರ ಕೊರತೆಯಿಂದಲೂ ತಲೆಹೊಟ್ಟು ಉಂಟಾಗಬಹುದು. 

ನಿವಾರಣೆ ಹೇಗೆ?

ತಲೆಹೊಟ್ಟು ನಿವಾರಣೆಗೆ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಕೂದಲಿಗೆ ಬಣ್ಣ ಹಾಕುವ ರೂಢಿ ಇರುವವರಲ್ಲಿ ಈ ಔಷಧಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಕೆಟೋಕೊನಜೋಲ್ ಎನ್ನುವ   ಔಷಧವನ್ನು ವಾರಕ್ಕೆ ಎರಡು ಬಾರಿ ಬಳಸಿದರೆ ಶೇ 75ರಷ್ಟು ತಲೆಹೊಟ್ಟನ್ನು ನಿಯಂತ್ರಿಸಬಹುದು. ನೀವು ಬಳಸುವ ಶಾಂಪುವಿನಲ್ಲಿ ಕೆಟೋಕೊನಜೋಲ್ ಅಂಶ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. 

ಸಾಮಾನ್ಯ ಶಾಂಪುಗಳಿಂದ ನಿವಾರಣೆಯಾಗದೇ ಇದ್ದರೆ ವೈದ್ಯರು ಶಿಫಾರಸ್ಸು ಮಾಡಿದ ಶ್ಯಾಂಪು ಬಳಸಿ. ತಲೆಗೆ ಶಾಂಪು ಹಚ್ಚಿ ಬೆರಳ ತುದಿಗಳಿಂದ ತಲೆ ಬುರುಡೆಯನ್ನು ತಿಕ್ಕಿಕೊಳ್ಳಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಸಾಮಾನ್ಯವಾಗಿ ಜಿಂಕ್‌, ಸೆಲಿನಿಯಂ ಸಲ್ಫೈಡ್‌, ಸಾಲಿಸಿಲಿಕ್  ಆ್ಯಸಿಡ್‌ ಅಂಶಗಳಿರುವ ಶಾಂಪುಗಳನ್ನು ಬಳಸಿ. 

ತಲೆಹೊಟ್ಟು ಸಮಸ್ಯೆ ಕಡಿಮೆಯಾಗದೇ ಇದ್ದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ. ಕೆಲವೊಮ್ಮೆ ಸೊರಿಯಾಸಿಸ್‌ನಂಥ ಕಾಯಿಲೆಗಳಿಂದಾಗಿಯೂ ತುರಿಕೆ, ತಲೆಹೊಟ್ಟು ಬರಬಹುದು. ತಲೆಹೊಟ್ಟಿಗೆ ಸಂಬಂಧಿಸಿದಂತೆ ಸ್ವಯಂ ಚಿಕಿತ್ಸೆ ಸರಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.