ADVERTISEMENT

ಸಂಧಿವಾತ ನೋವು ನಿವಾರಕ ಕ್ರೀಂ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 10:49 IST
Last Updated 18 ಫೆಬ್ರುವರಿ 2019, 10:49 IST
ಸುಬೋಧ್‌
ಸುಬೋಧ್‌   

ಬೆಂಗಳೂರು: ಸಂಧಿವಾತ ಮತ್ತು ಸಿಗರೇಟ್‌ ಸೇವನೆ ತ್ಯಜಿಸಲು ನೆರವಾಗುವ ಎರಡು ಹೊಸ ಉತ್ಪನ್ನಗಳನ್ನು ಸ್ಟ್ರೈಡ್ಸ್‌ ಕನ್ಸುಮರ್‌ ಪ್ರೈವೇಟ್‌ ಲಿಮಿಟೆಡ್‌ ಮಾರುಕಟ್ಟೆಗೆ ಪರಿಚಯಿಸಿದೆ.

‘ಬದಲಾದ ಜೀವನಶೈಲಿ, ದೀರ್ಘ ಸಮಯದವರೆಗೆ ವಾಹನ ಚಾಲನೆ ಮತ್ತು ಕೆಲಸದ ವೈಖರಿ ಮತ್ತಿತರ ಕಾರಣಕ್ಕೆ ಕೆಲವರಲ್ಲಿ ತಾರುಣ್ಯಾವಸ್ಥೆಯಲ್ಲಿಯೇ ಕಂಡು ಬರುವ ಸಂಧಿವಾತಕ್ಕೆ ಸಂಸ್ಥೆ ತಯಾರಿಸಿರುವ ಜಾಯಿಂಟ್‌ ಫ್ಲೆಕ್ಸ್‌ ಕ್ರೀಂ ಉತ್ತಮ ಪರಿಹಾರ ಒದಗಿಸಲಿದೆ’ ಎಂದು ಸಂಸ್ಥೆಯ ಸಿಇಒ ಸುಬೋಧ ಮಾರ್ವಾ ತಿಳಿಸಿದ್ದಾರೆ.

‘ಆಯುರ್ವೇದ ಸೂತ್ರಗಳಡಿ ತಯಾರಿಸಿರುವ ಈ ಕ್ರೀಂ, ತ್ವರಿತ ಮತ್ತು ಪರಿಣಾಮಕಾರಿಯಾದ ನೋವು ಉಪಶಮನಕಾರಿಯಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ನಿಕ್ಸಿಟ್‌: ‘ಸಿಗರೇಟ್‌ ಸೇವನೆಯಿಂದ ಹೊರಬರಲು ನಿಕ್ಸಿಟ್‌ ಹೆಸರಿನ ಪೆಪ್ಪರ್‌ಮೆಂಟ್‌ ಪರಿಚಯಿಸಿದೆ. ಇದನ್ನು 3 ತಿಂಗಳು ಬಳಸಿದರೆ ಸಿಗರೇಟ್‌ ಸೇವನೆಯ ಆಕರ್ಷಣೆಯಿಂದ ಹೊರ ಬರಲು ಸಾಧ್ಯವಾಗಲಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.