
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಗೆಟ್ಟಿ
ಸಿಹಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲಿಯೂ ಬೇಕರಿ ತಿನಿಸುಗಳೆಂದರೆ ಬಾಯಲಿ ನೀರೂರದೇ ಇರದು. ಆದರೆ ಅತಿಯಾಗಿ ಸಿಹಿ ತಿನ್ನುವುದು ಆರೋಗ್ಯಕ್ಕೆ ಹಿತವಲ್ಲ. ಅದರಲ್ಲೂ ಸಕ್ಕರೆ ಇರುವ ಆಹಾರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಸಿಹಿ ತಿನ್ನುವುದನ್ನು ನಿಲ್ಲಿಸಿದರೆ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ, ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎನ್ನುವ ಬಗ್ಗೆ ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.
ಒಂದು ತಿಂಗಳು ಸಿಹಿ ತಿನ್ನುವುದು ನಿಲ್ಲಿಸಿದರೆ ಏನಾಗುತ್ತದೆ?
ಆರಂಭದಲ್ಲಿ ಸಿಹಿ ಪದಾರ್ಥ ತಿನ್ನದೇ ಇರುವುದಕ್ಕೆ ಕಷ್ಟವಾಗುತ್ತದೆ. ಇದರಿಂದ ಕಿರಿಕಿರಿ ಹಾಗೂ ಆಯಾಸವೂ ಕಾಡಬಹುದು. ದೇಹವು ಇದಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ನಂತರ ನಿಧಾನವಾಗಿ ಅಭ್ಯಾಸವಾಗುತ್ತದೆ. ಸಿಹಿ ಸೇವನೆ ತಪ್ಪಿಸುವುದರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ವೈದ್ಯರು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ಸರಿದೂಗಿಸುತ್ತದೆ. ರಾತ್ರಿ ಸರಿಯಾದ ಸಮಯಕ್ಕೆ ನಿದ್ದೆ ಮಾಡಲು ಸಹಕಾರಿಯಾಗಿದೆ.
ಸಿಹಿ ಸೇವನೆ ನಿಲ್ಲಿಸಿದರೆ ಜೀರ್ಣಕ್ರಿಯೆಗೂ ಅನುಕೂಲವಾಗಲಿದೆ. ವಿಪರೀತ ತಲೆನೋವಿನಿಂದ ಮುಕ್ತಿ ಪಡೆಯಲು ಸಹಕಾರಿಯಾಗಿದೆ. ಒಂದು ತಿಂಗಳು ಸಿಹಿಯನ್ನು ತ್ಯಜಿಸಿದರೆ ದೇಹವು ನಮಗೆ ಗೊತ್ತಿಲ್ಲದೆ, ಹೊಂದಿಕೊಳ್ಳುತ್ತದೆ.
ಪ್ರಮುಖ ಉಪಯೋಗಗಳು:
ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿ
ತೂಕ ನಿಯಂತ್ರಣಕ್ಕೆ ಅನುಕೂಲ
ಹಲ್ಲಿನ ರಕ್ಷಣೆ
ಕರುಳಿನ ಆರೋಗ್ಯ ಕಾಪಾಡುತ್ತದೆ
ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ
ಲೇಖಕರು: ಡಾ. ನಿಶ್ಚಿತಾ ಕೆ. ಕನ್ಸಲೆಂಟ್ ಎಂಡೋಕ್ರೈನಾಲಜಿ, ಗ್ಲನೀಗಲ್ಸ್ ಬಿಜಿಎಸ್ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.