ADVERTISEMENT

ಸ್ಪಂದನ ಅಂಕಣ | ಗರ್ಭಕೋಶ ದಪ್ಪಗಾಗಿದೆಯೇ?

ಡಾ.ವೀಣಾ ಎಸ್‌ ಭಟ್ಟ‌
Published 18 ಜುಲೈ 2025, 23:30 IST
Last Updated 18 ಜುಲೈ 2025, 23:30 IST
   

ನನಗೆ 29 ವರ್ಷ. ಮದುವೆಯಾಗಿ 12 ವರ್ಷ ಆಗಿದೆ. ಸರಿಯಾಗಿ ಮುಟ್ಟು ಆಗುತ್ತದೆ. ಆದರೆ ಮುಟ್ಟು ನಿಂತು ಎರಡು–ಮೂರು ದಿನಗಳಾದ ಮೇಲೆ ಮತ್ತೆ ಸ್ವಲ್ಪ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಮತ್ತೆ ನಿಲ್ಲುತ್ತದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿ, ಗರ್ಭಕೋಶ ಸ್ವಲ್ಪ ದಪ್ಪಗಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಏನಾದರೂ ತೊಂದರೆ ಇದೆಯೇ?.

ಆಶಾ, ಮೈಸೂರು

ನೀವು ಒಮ್ಮೆ ತಜ್ಞ ವೈದ್ಯರಿಂದ ಸ್ಪೆಕ್ಯೂಲಂ ಪರೀಕ್ಷೆ ಮಾಡಿಸಿಕೊಳ್ಳಿ. ಕೆಲವೊಮ್ಮೆ ಗರ್ಭಕೋಶದ ಬಾಯಲ್ಲಿ ಪಾಲಿಪ್‍ನಂತಹ ತೊಂದರೆ ಇದ್ದರೆ ಹೀಗೆ ಆಗಬಹುದು. ಕೆಲವೊಮ್ಮೆ ಕಾಪರ್‌ ಟಿಯಂತಹ ಉಪಕರಣ ಗರ್ಭಕೋಶದಲ್ಲಿ ಇದ್ದಾಗ ಅಥವಾ ಹಾರ್ಮೋನುಗಳ ಏರುಪೇರಿನಿಂದಲೂ ಈ ರೀತಿಯಾಗುತ್ತದೆ. ಆದ್ದರಿಂದ ಇನ್ನೊಮ್ಮೆ ಪರೀಕ್ಷಿಸಿಕೊಳ್ಳಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.