ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ | ಚಳಿಗಾಲ: ಇರಲಿ ಕಾಳಜಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 1:17 IST
Last Updated 30 ಅಕ್ಟೋಬರ್ 2020, 1:17 IST
ಡಾ. ಸಂತೋಷ್ ಆರ್‌.ಜಿ.
ಡಾ. ಸಂತೋಷ್ ಆರ್‌.ಜಿ.   

ಮಂಗಳೂರು: ಚಳಿಗಾಲ ಶುರುವಾಗಿದೆ. ಅದರ ಜೊತೆಗೆ ಕೊರೊನಾ ಸೋಂಕು ಹೆಚ್ಚಾಗಬಹುದು ಎಂಬ ಭಯ ಬಹುತೇಕರಲ್ಲಿ ಕಾಡುತ್ತಿದೆ. ಸಾಮಾನ್ಯವಾಗಿ ವೈರಸ್‌ಗಳು ಚಳಿಯ ವಾತಾವರಣದಲ್ಲಿ ಹೆಚ್ಚು ಸಕ್ರಿಯವಾಗುತ್ತವೆ. ಹಾಗೆಯೇ ಚಳಿಯಿಂದಾಗಿ ಆಸ್ತಮಾ ಮತ್ತಿತರ ಶ್ವಾಸಕೋಶ ಸಂಬಂಧ ಸಮಸ್ಯೆಗಳು ತೀವ್ರವಾಗುವ ಸಾಧ್ಯತೆಯೂ ಇರುತ್ತದೆ.

ಚಳಿಗಾಲದಲ್ಲಿ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆಯೂ ಹಲವರಲ್ಲಿ ಗೊಂದಲಗಳಿವೆ. ಈ ಬಗ್ಗೆ ಮಂಗಳೂರಿನ ಯೆನೆಪೋಯ ಆಸ್ಪತ್ರೆಯ ವೈದ್ಯ (ಜನರಲ್‌ ಮೆಡಿಸಿನ್‌) ಡಾ. ಸಂತೋಷ್‌ ಆರ್‌.ಜಿ ವಿವರ ನೀಡಿದ್ದಾರೆ.

ಚಳಿಗಾಲದ ವಾತಾವರಣದಲ್ಲಿ ಎಲ್ಲ ರೀತಿಯ ವೈರಸ್‌ಗಳು ಜಾಗೃತಗೊಳ್ಳುತ್ತವೆ ಮತ್ತು ಹೆಚ್ಚು ಕಾಲ ಜೀವಿಸುತ್ತವೆ. ಹೀಗಾಗಿ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಲ ವೈರಸ್‌ ಸೋಂಕುಗಳ ಲಕ್ಷಣ ಸಾಮಾನ್ಯವಾಗಿ ಒಂದೇ ಆಗಿರುವುದರಿಂದ, ಕೋವಿಡ್–19 ಪತ್ತೆ ಮಾಡಲು ತುಸು ಸಮಯ ಹಿಡಿಯಬಹುದು. ಹೀಗಾಗಿ ಸ್ವಯಂ ಜಾಗೃತಿಯೇ ಇದಕ್ಕೆ ದೊಡ್ಡ ಮದ್ದು ಎನ್ನುತ್ತಾರೆ ಡಾ. ಸಂತೋಷ್‌.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.