ADVERTISEMENT

World Polio Day: ಪೋಲಿಯೊ ನಿರ್ಮೂಲನೆಯಲ್ಲಿ ಅ. 24ರ ದಿನದ ಮಹತ್ವವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2025, 6:58 IST
Last Updated 24 ಅಕ್ಟೋಬರ್ 2025, 6:58 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಅಕ್ಟೋಬರ್‌ 24ರಂದು ವಿಶ್ವ ಪೋಲಿಯೊ ದಿನವನ್ನು ಆಚರಿಸಲಾಗುತ್ತದೆ. ಪೋಲಿಯೊ ಕೊನೆಗೊಳಿಸುವ ಉದ್ದೇಶದಿಂದಾಗಿ ಈ ದಿನ ಪ್ರಾಮುಖ್ಯತೆ ಪಡೆದುಕೊಂಡಿದೆ. WHO,UNICEF, ROTARY ಸಂಸ್ಥೆಗಳು ಪೋಲಿಯೊ ನಿರ್ಮೂಲನೆಗೆ ಇಂದಿಗೂ ಶ್ರಮಿಸುತ್ತಿವೆ. ವಿಶ್ವ ಪೋಲಿಯೊ ದಿನದ ಇತಿಹಾಸ ಹಾಗೂ ಈ ವರ್ಷದ ಥೀಮ್ ಏನು ಎಂಬುದನ್ನು ತಿಳಿದುಕೊಳ್ಳೋಣ.

ಈ ಕಾಯಿಲೆಯಿಂದ ಮಕ್ಕಳನ್ನು ರಕ್ಷಿಸಲು, ಪೋಲಿಯೊ ಲಸಿಕೆಯ ಮಹತ್ವ ಕುರಿತು ಜಾಗೃತಿ ಮೂಡಿಸಲು ಹಾಗೂ ಪೋಲಿಯೊ ನಿರ್ಮೂಲನೆ ಸಾಧಿಸಲು ವಿಶ್ವ ಪೋಲಿಯೊ ದಿನವನ್ನು ಆಚರಿಸುತ್ತೇವೆ.

ADVERTISEMENT

ಈ ವರ್ಷದ ಥೀಮ್‌ ಏನು? 

‘ಪೋಲಿಯೊವನ್ನು ಕೊನೆಗೊಳಿಸಿ: ಪ್ರತಿ ಮಗು, ಪ್ರತಿ ಲಸಿಕೆ, ಎಲ್ಲೆಡೆ’

ವಿಶ್ವ ಪೋಲಿಯೊ ದಿನದ ಇತಿಹಾಸ

ಇಂದು (ಅಕ್ಟೋಬರ್ 24) ಪೋಲಿಯೊ ಲಸಿಕೆ ಕಂಡು ಹಿಡಿದ ಖ್ಯಾತ ವಿಜ್ಞಾನಿ ಡಾ. ಜೋನಾಸ್ ಸಾಲ್ಕ್ ಅವರ ಜನ್ಮದಿನವಾಗಿದೆ. ಈ ಲಸಿಕೆಯಿಂದಾಗಿ ಲಕ್ಷಾಂತರ ಮಕ್ಕಳ ಪ್ರಾಣ ಉಳಿಯಿತು. ಮಾತ್ರವಲ್ಲ, ಅನೇಕ ಮಕ್ಕಳು ಅಂಗಾಂಗ ವೈಕಲ್ಯದಿಂದ ಬಳಲುವುದನ್ನು ತಪ್ಪಿಸಲಾಯಿತು. ಈ ಕಾರಣಕ್ಕಾಗಿ ಡಾ. ಜೋನಾಸ್ ಸಾಲ್ಕ್ ಅವರ ಜನ್ಮದಿನವನ್ನು ವಿಶ್ವ ಪೋಲಿಯೊ ದಿನವಾಗಿ ಘೋಷಣೆ ಮಾಡಲಾಗಿದೆ. 

ರೋಟರಿ ಸಂಸ್ಥೆಯು 20ನೇ ಶತಮಾನದಲ್ಲಿ ವಿಶ್ವದ ನಾನಾ ಭಾಗದಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಿತು. ಇದು 1988ರಲ್ಲಿ ಪೋಲಿಯೊ ನಿರ್ಮೂಲನಾ ಉಪಕ್ರಮ (GPEI) ಸ್ಥಾಪನೆಗೆ ಅಡಿಪಾಯ ಹಾಕಿತು ಎಂದು ಇತಿಹಾಸ ಹೇಳುತ್ತದೆ. 

ಪ್ರಮುಖ ಸಂದೇಶಗಳು

  • ಪ್ರತಿ ಬಾರಿಯೂ ಎರಡು ಹನಿ, ಪೋಲಿಯೊದಿಂದ ರಕ್ಷಣೆ ಹಲವು ಬಾರಿ.

  • ಪೋಲಿಯೊ ನಿರ್ಮೂಲನೆ ಮಾಡಿ, ಆರೋಗ್ಯಕರ ಭಾರತ ನಿರ್ಮಿಸಿ.

  • ‌ಮಕ್ಕಳು ನಗಲಿ, ಪೋಲಿಯೊವನ್ನು ಸೋಲಿಸಲಿ.

2011ರ ಜನವರಿ 13ರಂದು ದಾಖಲಾದ ರುಕ್ಷಾ ಪ್ರಕರಣವೇ ಭಾರತದಲ್ಲಿ ದಾಖಲಾದ ಕಟ್ಟಕಡೆಯ ಪೋಲಿಯೊ ಪ್ರಕರಣವಾಗಿದೆ. ಇಂದಿಗೂ ಜಗತ್ತಿನ 41 ಬೇರೆ ಬೇರೆ ದೇಶಗಳಲ್ಲಿ ಪೋಲಿಯೊದ ಪಿಡುಗಿದೆ. ವಿಶ್ವದಾದ್ಯಂತ 40 ಕೋಟಿಗೂ ಅಧಿಕ ಮಕ್ಕಳಿಕೆ ಪ್ರತಿ ವರ್ಷ ಪೋಲಿಯೊ ಲಸಿಕೆ ಹಾಕಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.