ADVERTISEMENT

ಆರೋಗ್ಯಕ್ಕೆ ತ್ರಿಕೋನಾಸನ

ಗೋಪಾಲಕೃಷ್ಣ ದೇಲಂಪಾಡಿ
Published 12 ಜನವರಿ 2020, 19:30 IST
Last Updated 12 ಜನವರಿ 2020, 19:30 IST
ತ್ರಿಕೋನಾಸನ
ತ್ರಿಕೋನಾಸನ   

ಮೊದಲು ತಾಡಾಸನದಲ್ಲಿ ನಿಲ್ಲಿ. ಆನಂತರ ಕಾಲುಗಳನ್ನು ಅಗಲಿಸಿ. ಮೂರು ಅಥವಾ ಮೂರುವರೆ ಅಡಿಗಳಷ್ಟು ಅಂತರದಲ್ಲಿ ನಿಲ್ಲಿ. ಕೈಗಳೆರಡನ್ನೂ ಹೆಗಲಿನ ಮಟ್ಟಕ್ಕೆ ಇರುವಂತೆ ನೇರವಾಗಿ ಚಾಚಿ. ಆಮೇಲೆ ಬಲಪಾದವನ್ನು ಬಲಕಡೆಗೆ 90 ಡಿಗ್ರಿ ತಿರುಗಿಸಿ ಉಸಿರನ್ನು ಹೊರಕ್ಕೆ ಬಿಟ್ಟು ಶರೀರವನ್ನು ಬಲಭಾಗಕ್ಕೆ ಬಾಗಿಸಿ. ಬಲ ಕೈಯನ್ನು ಬಲಕಾಲಿನ ಪಕ್ಕದಲ್ಲಿ ಇಡಿ. ಆಗ ದೃಷ್ಟಿಯು ಎಡ ಕೈಯ ಬೆರಳ ಮೇಲಿರಬೇಕು. ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷ ಇರಿ. ಅದೇ ರೀತಿ ಎಡ ಭಾಗದಲ್ಲಿ ಅಭ್ಯಸಿಸಬೇಕು. ಅನಂತರ 2 ನಿಮಿಷ ವಿಶ್ರಾಂತಿ.

ಉಪಯೋಗ: ಚಪ್ಪಟೆ ಪಾದವಾಗುವ ತೊಂದರೆಯನ್ನು ತಡೆಯುತ್ತದೆ. ಮೀನ ಖಂಡ ತೊಡೆ ಹಾಗೂ ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನುಹುರಿಯ ಬಳಕುವಿಕೆ ಮತ್ತು ಶ್ವಾಸಕೋಶದ ಕ್ಷಮತೆಯನ್ನು ಹೆಚ್ಚಿಸುತ್ತದೆ. ಕಾಲುಗಳ ಮಾಂಸಖಂಡಗಳು ಪಳಗುತ್ತವೆ. ಕಾಲುಗಳ ಸಾಮಾನ್ಯ ವಕ್ರತೆಯನ್ನು ಸರಿಪಡಿಸಬಹುದಾಗಿದೆ.

ಜಾಗ್ರತೆಗಳು:ಸ್ಲಿಪ್ ಡಿಸ್ಕ್, ಸಯಟಿಕಾ ತೊಂದರೆಗಳಿದ್ದಲ್ಲಿ ಮತ್ತು ಉದರ ಭಾಗದ ಶಸ್ತ್ರಚಿಕಿತ್ಸೆಯಾಗಿದ್ದಲ್ಲಿ ತ್ರಿಕೋನಾಸನ ಮಾಡಬೇಡಿ. ಅತಿಯಾಗಿ ಪಾರ್ಶ್ವಭಾಗವನ್ನು ಉದ್ದ ಮಾಡಬೇಡಿ ಮತ್ತು ಮಿತಿಮೀರಿ ಮಾಡಬೇಡಿ. ಪಾದವನ್ನು ಕೈಗಳಿಂದ ಸ್ಪರ್ಶಿಸಲು ಅಸಾಧ್ಯವಾದಲ್ಲಿ, ಮೊಣಕಾಲಿನವರೆಗೆ ಮಾತ್ರ ಕೈಗಳನ್ನು ಒಯ್ಯಿರಿ.

ADVERTISEMENT

ಕಾಲುಗಳ ಮಾಂಸಖಂಡಗಳು ಮತ್ತು ಸೊಂಟದ ಸ್ನಾಯುಗಳನ್ನು ಬಲಪಡಿಸುವ ತ್ರಿಕೋನಾಸಾನ. ಇದು ಕಾಲುಗಳು, ಕೈಗಳು ಮತ್ತು ದೇಹ ತ್ರಿಕೋನದ ಆಕಾರ ಪಡೆಯುವಿಕೆಯ ಆಸನ. ಈ ಆಸನವು ತ್ರಿಕೋನಾಕಾರದಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.