ADVERTISEMENT

ದಿನ ಭವಿಷ್ಯ: ಈ ರಾಶಿಯವರ ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಅಕ್ಟೋಬರ್ 2024, 23:30 IST
Last Updated 5 ಅಕ್ಟೋಬರ್ 2024, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ವೃತ್ತಿಕ್ಷೇತ್ರದ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ. ಕೆಲಸದಲ್ಲಿ ತೊಡಕು ತಾಪತ್ರಯವನ್ನುಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು.
  • ವೃಷಭ
  • ಗುರುವಿನ ಮಾರ್ಗದರ್ಶನದಂತೆ ನಡೆಯುವ ಈ ದಿನದ ನಿಮ್ಮ ಕೆಲಸದಲ್ಲಿ ಸರ್ವತೋಮುಖವಾದ ಅಭಿವೃದ್ಧಿಯನ್ನು ಹೊಂದುವಿರಿ. ಆದಾಯ ಮತ್ತು ತೆರಿಗೆ ಅಧಿಕಾರಿಗಳಿಗೆ ದಿಢೀರ್ ವರ್ಗಾವಣೆಯಾಗುವ ಸಂಭವವಿದೆ.
  • ಮಿಥುನ
  • ಕಲಾವಿದರಿಗೆ ಹಾಗೂ ನಟ ನಟಿಯರಿಗೆ ಉತ್ತಮ ಅವಕಾಶಗಳು ಒದಗಿ ಬರುವುದು. ಔಷಧಿಗಳು ಅಡ್ಡ ಪರಿಣಾಮ ಬೀರುವಂತಾಗಬಹುದು. ಆದ್ದರಿಂದಲೇ ವೈದ್ಯರ ಸಲಹೆ ಇಲ್ಲದೆ ಔಷಧಿಗಳನ್ನು ಸೇವಿಸಬೇಡಿ.
  • ಕರ್ಕಾಟಕ
  • ಕೊಟ್ಟಂತಹ ಮಾತನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಪದವಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ.
  • ಸಿಂಹ
  • ಮುಂದಿನ ಕೆಲಸ ಹಾಗೂ ವೃತ್ತಿ ಜೀವನದ ಬಗ್ಗೆ ಗಂಭೀರ ಆಲೋಚನೆ ಮಾಡುವುದು ಬಹಳ ಮುಖ್ಯವಾಗಿದೆ. ಗೃಹ ಕೃತ್ಯದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಅತಿಯಾದ ಆಲಸ್ಯ ನಿಮ್ಮನ್ನು ಕಾಡಲಿದೆ.
  • ಕನ್ಯಾ
  • ತುಂಬಾ ಆತ್ಮೀಯರಂತೆ ಮುಖವಾಡ ಹೊಂದಿರುವ ನಿಮ್ಮ ಅಕ್ಕ-ಪಕ್ಕದ ಹಿತಶತ್ರುಗಳ ಬಣ್ಣ ನಿಮ್ಮೆದುರು ಬಯಲಾಗಲಿದೆ. ನಿಮ್ಮ ಸೋಲನ್ನು ಬಯಸುವವರ ಸಂಖ್ಯೆಯು ಇಳಿಮುಖವನ್ನು ಹೊಂದುವುದು.
  • ತುಲಾ
  • ಕೌಟುಂಬಿಕ ಸಮಸ್ಯೆಗಳಿಗೆ ಎದುರುತ್ತರ ನೀಡದಿರುವುದು ಅತ್ಯುನ್ನತ ಪರಿಹಾರವೆಂದು ಅನುಭವಕ್ಕೆ ಬರುತ್ತದೆ. ರಿಯಾಯಿತಿ ಮಾರಾಟಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ಗಮನ ಕೊಡಿ.
  • ವೃಶ್ಚಿಕ
  • ನ್ಯಾಯಾಲಯದ ಮೆಟ್ಟಿಲೇರಿದ ಸಮಸ್ಯೆಗಳನ್ನು ರಾಜಿ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಬಹುದು. ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸದ ಅಸ್ಥಿರತೆ ಕಾಡಬಹುದು.
  • ಧನು
  • ಕೆಲಸ-ಕಾರ್ಯವನ್ನು ಜಾಣ್ಮೆಯಿಂದ ಸೂಕ್ಷ್ಮವಾಗಿ ನಿರ್ವಹಿಸುವಂತಹಾ ಬುದ್ಧಿವಂತಿಕೆಯನ್ನು ತೋರುವಿರಿ. ಶ್ರೀನಿವಾಸನ ಸೇವೆಯಿಂದ ವ್ಯಾಪಾರದಲ್ಲಿ ಉತ್ತಮ ಲಾಭವಿರುವುದು. ಶೀತಬಾಧೆ ಎದುರಾಗಬಹುದು.
  • ಮಕರ
  • ಪುಣ್ಯಸಂಪಾದನೆಗಾಗಿ ತಾಯಿಯೊಂದಿಗೆ ತೀರ್ಥಯಾತ್ರೆ ಕೈಗೊಳ್ಳುವ ನಿಮ್ಮ ಆಸೆ ಈಡೇರುವ ಲಕ್ಷಣಗಳು ಕಂಡುಬರುವುದು. ಅಭಿವೃದ್ಧಿಗೆ ಬೇಕಾದ ಅದ್ಭುತ ಅವಕಾಶವು ದೇವರ ಆಶೀರ್ವಾದದಿಂದ ನಿಮ್ಮ ಪಾಲಿಗೆ ಸಿಗಲಿದೆ.
  • ಕುಂಭ
  • ನಿಮ್ಮ ಫಲಕಾರಿ ಯೋಚನಾಲಹರಿಗಳನ್ನು ಕಂಡ ವ್ಯವಹಾರದ ಪಾಲುದಾರರು ನಿಮ್ಮ ಮಾತಿನಂತೆಯೇ ನಡೆಯುವರು. ಆರಕ್ಷಕ ವರ್ಗದವರಿಗೆ ಅಥವಾ ರಕ್ಷಣಾ ಕಾರ್ಮಿಕರಿಗೆ ರಾತ್ರಿ ಪಾಳಿ ಪ್ರಾರಂಭವಾಗಬಹುದು.
  • ಮೀನ
  • ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ಬಾಬ್ತು ಜಾಗ್ರತೆ ಇರಲಿ ಮತ್ತು ಆರ್ಥಿಕ ಸ್ಥಿತಿಯು ಕೊಂಚ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಮರೆಯಲಾಗದ ಕಹಿ ಘಟನೆಯೊಂದು ನೆಡೆಯಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.