ADVERTISEMENT

ದಿನ ಭವಿಷ್ಯ: ಯಶಸ್ಸಿಗೆ ಇನ್ನೊಂದಿಷ್ಟು ಪೂರಕವಾದ ವಾತಾವರಣ ಮೂಡಿ ಬರಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಫೆಬ್ರುವರಿ 2024, 18:30 IST
Last Updated 11 ಫೆಬ್ರುವರಿ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಬುದ್ಧಿವಂತಿಕೆ ಕೊರತೆಯಿಂದ ಸಮಸ್ಯೆಯಲ್ಲಿ ಸಿಲುಕುವ ಸಂಭವ ವಿರುವುದು. ದೇಹದಲ್ಲಿ ಪಿತ್ತ ಅಧಿಕವಾಗುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಮದುವೆ ಕೆಲಸಗಳಿಗೆ ಓಡಾಟ ನಡೆಸುವಿರಿ.
  • ವೃಷಭ
  • ಇನ್ನೊಬ್ಬರಿಗೆ ಗೌರವವನ್ನು ಕೊಟ್ಟು ನೀವು ಗೌರವವನ್ನು ಅಪೇಕ್ಷಿಸುವ ಮನಸ್ಥಿತಿ ಇಟ್ಟುಕೊಳ್ಳಿರಿ. ರಾಜಕೀಯ ವರ್ಗದವರಿಗೆ ದೇವತಾನುಗ್ರಹದಿಂದ ಅದೃಷ್ಟ ಖುಲಾಯಿಸಲಿದೆ. ಶುಭವಾರ್ತೆಗಳು ನೆಮ್ಮದಿಗೆ ಕಾರಣವಾದೀತು.
  • ಮಿಥುನ
  • ಖಾದಿ ಉದ್ಯಮದವರಿಗೆ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ರೀತಿಯಲ್ಲಿ ವ್ಯವಹಾರ ನಡೆಯುವುದು. ಸಂಬಂಧಿಕರ ವಲಯದಲ್ಲಿದ್ದ ತಪ್ಪು ಅಭಿಪ್ರಾಯಗಳು ದೂರಾಗುವುದು.
  • ಕರ್ಕಾಟಕ
  • ಬಾಲ್ಯದ ಸ್ನೇಹಿತರ ಆಶ್ಚರ್ಯಕರ ಭೇಟಿಯು ಮನಸ್ಸಿಗೆ ಸಂತೋಷ ಉಂಟುಮಾಡಲಿದೆ. ಕೆಲಸಕಾರ್ಯಗಳಿಗೆ ಅಪೇಕ್ಷಿಸಿದ ಬೆಂಬಲ ದೊರೆಯಲಿದೆ. ಆಡಿದ ಮಾತುಗಳು ನಿಮಗೆ ಮುಳ್ಳಾಗುವ ದಿನ.
  • ಸಿಂಹ
  • ವೃತ್ತಿಯನ್ನು ಅಭಿವೃದ್ಧಿ ಮಾಡುವ ಸಂಕಲ್ಪದಿಂದ ಈ ದಿನವನ್ನು ಪ್ರಾರಂಭಿಸಿ, ದೇವತಾನುಗ್ರಹದಿಂದ ಅಭಿವೃದ್ಧಿಯಾಗುವುದು. ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯ ಹೊಂದುವಿರಿ.
  • ಕನ್ಯಾ
  • ಜೀವನೋಪಾಯಕ್ಕೆ ಹಲವಾರು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಹೆಚ್ಚಿನ ಆದಾಯ ಉಂಟಾಗಲಿದೆ. ಕುಲದೇವರ ಸೇವೆಯಿಂದ ಹೆಚ್ಚಿನ ಫಲ ಲಭಿಸಲಿದೆ.
  • ತುಲಾ
  • ಸಾಮಾಜಿಕ ಕ್ಷೇತ್ರದಲ್ಲಿನ ಸಮರ್ಥ ಕಾರ್ಯನಿರ್ವಹಣೆಯು ಕೆಟ್ಟ ಜನರ ದೃಷ್ಟಿ ದೋಷಕ್ಕೆ ಕಾರಣವಾಗುವುದು. ವೃತ್ತಿಯ ಮತ್ತು ಮುಂದಿನ ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.
  • ವೃಶ್ಚಿಕ
  • ಯಶಸ್ಸಿಗೆ ಇನ್ನೊಂದಿಷ್ಟು ಪೂರಕವಾದ ವಾತಾವರಣ ಮೂಡಿ ಬರಲಿದೆ. ಯಾವುದೇ ಕೆಲಸಗಳಿಗೂ ಅಳುಕುವ ಪ್ರಮೇಯ ಈ ದಿನ ಇರುವುದಿಲ್ಲ. ನೂತನ ವಸ್ತುಗಳ ಖರೀದಿಗೆ ಈ ದಿನ ಸಮಯವಲ್ಲ.
  • ಧನು
  • ಮರಕೆಲಸ ಮಾಡುವ ವಿಶ್ವಕರ್ಮರಿಗೆ ಉದ್ಯೋಗದಲ್ಲಿ ಕೀರ್ತಿ, ಲಾಭ ಹಾಗೂ ಸಮಾಜದಲ್ಲಿ ಹೆಸರು ಸಂಪಾದನೆಯಾಗುವುದು. ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ. ಶಿರೋವೇದನೆ ಕಾಡಲಿದೆ.
  • ಮಕರ
  • ತೆರೆಮರೆಯಲ್ಲಿ ನಡೆಸಿದ ಕೆಲಸಗಳಿಂದ ಹಾಗೂ ಪಕ್ಷನಿಷ್ಠೆ, ಸೇವಾಮನೋಭಾವದಿಂದ ಅಧಿಕಾರ ಪಡೆದುಕೊಳ್ಳುವಿರಿ. ಮಾನಸಿಕ ಅಸ್ಥಿರತೆ ಹಾಗೂ ಋಣಾತ್ಮಕ ಚಿಂತನೆ ಆಗಾಗ ಕಾಡಲಿದೆ. ನೀಲಿ ಬಣ್ಣ ಶುಭ ತರಲಿದೆ.
  • ಕುಂಭ
  • ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡು ತ್ತಾರೆ. ಕ್ರೀಡಾಪಟುಗಳಿಗೆ, ಉಪನ್ಯಾಸಕರಿಗೆ ಮತ್ತು ಕಲಾವಿದರಿಗೆ ಹೆಚ್ಚಿನ ಅವಕಾಶ ಲಭಿಸಲಿದೆ. ಶುಭಫಲಗಳ ಪ್ರಾಪ್ತಿಗಾಗಿ ನವಗ್ರಹಗಳನ್ನು ಆರಾಧಿಸಿ.
  • ಮೀನ
  • ವ್ಯವಹಾರಿಕ ಜೀವನದ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಇಂದು ಸೂಕ್ತ ದಿನವಾಗಿದೆ. ದಾನ-ಧರ್ಮ ಪ್ರವೃತ್ತಿಯಿಂದ ಕೆಲವು ಶುಭ ಫಲಗಳು ಅನುಭವಕ್ಕೆ ಬರಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.