ADVERTISEMENT

ದಿನ ಭವಿಷ್ಯ: ಈ ರಾಶಿಯವರು ಕೌಟುಂಬಿಕ ವಿಷಯಗಳತ್ತ ಗಮನ ಹರಿಸಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಜುಲೈ 2024, 22:32 IST
Last Updated 18 ಜುಲೈ 2024, 22:32 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಕೌಟುಂಬಿಕ ವಿಷಯಗಳತ್ತ, ಅದರಲ್ಲೂ ಮಡದಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನಹರಿಸಿ. ವೃತ್ತಿಪರ ಸಾಧನೆಗಳಿಂದಾಗಿ ಸೂಕ್ತ ಸ್ಥಾನಮಾನ ತಾನಾಗಿಯೇ ಒದಗಿ ಬರಲಿದೆ.
  • ವೃಷಭ
  • ಮಾನಸಿಕವಾಗಿ ಕುಗ್ಗದೇ ಧೈರ್ಯದಿಂದ ಇರುವುದು ಮೂಲಮಂತ್ರವಾಗಿರಲಿ. ನೂತನ ವಾಹನ ಕೊಳ್ಳುವ ಆಲೋಚನೆಗಳು ಎದುರಾಗುವುದು. ಸ್ಥಳ ಬದಲಾದ ಕಾರಣ ನೀರಿನಿಂದ ಸೋಂಕು ಉಂಟಾಗಬಹುದು.
  • ಮಿಥುನ
  • ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸೂಕ್ತ ರೀತಿಯಲ್ಲಿ ಅವಕಾಶ ಸಿಗುವುದು. ಸಣ್ಣ ಕೈಗಾರಿಕೋದ್ಯಮದವರಿಗೆ ಸಹಕಾರ ದೊರೆಯಲಿದೆ. ಪವಿತ್ರ ವಸ್ತುಗಳನ್ನು ಗೌರವದಿಂದ ಕಾಣಿ.
  • ಕರ್ಕಾಟಕ
  • ಸಹೋದರರಲ್ಲಿನ ಕೋರ್ಟು ವ್ಯವಹಾರಗಳನ್ನು ರಾಜಿ ಅಥವಾ ಸಂಧಾನ ಮೂಲಕ ಬಗೆ ಹರಿಸಿಕೊಳ್ಳುವ ಪ್ರಯತ್ನ ಮಾಡಿ. ಒಂದು ಕೆಲಸವನ್ನು ಆಸಕ್ತಿಯಿಂದ ನಿರ್ವಹಿಸಿ.
  • ಸಿಂಹ
  • ಕೆಲಸಗಳನ್ನು ಇತರರು ಅತ್ಯಂತ ಅಚ್ಚುಕಟ್ಟಾಗಿ ಮಾಡುವುದರಿಂದಾಗಿ ಅವಲಂಬನೆ ಕಡಿಮೆಯಾಗುವುದು. ಬ್ಯಾಂಕಿನ ಸಾಲಗಳು ತೀರಿ ಮನೆಯಲ್ಲಿ ನೆಮ್ಮದಿಯ ಪರಿಸರ ಮೂಡಲಿದೆ.
  • ಕನ್ಯಾ
  • ಕಾರ್ಯರಂಗದಲ್ಲಿ ಮುನ್ನಡೆಗೆ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಇರುತ್ತದೆ. ಯೋಚಿಸಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಸರ್ಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಸಂಭವವಿದೆ.
  • ತುಲಾ
  • ಸಹೋದರನಲ್ಲಿ ಮತ್ತು ನೆರೆಹೊರೆಯವರೊಂದಿಗೆ ಸೌಹಾರ್ದದಿಂದ ವರ್ತಿಸುವುದರಿಂದ ಸಂಬಂಧ ಉತ್ತಮಗೊಳ್ಳುವುದು. ಮಗನ ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡು ಮನೆಯವರಿಗೆ ಸಂತಸ.
  • ವೃಶ್ಚಿಕ
  • ಹೊಸ ವೃತ್ತಿಯ ವಿಚಾರವಾಗಿ ಉತ್ತಮ ಅವಕಾಶಗಳು ಬರಲಿವೆ. ಅದನ್ನು ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ. ಚಿನ್ನ ಮೊದಲಾದ ದುಬಾರಿ ಲೋಹಗಳಿಗೆ ಹಣ ವಿನಿಯೋಗ ಮಾಡುವಿರಿ.
  • ಧನು
  • ಕೆಲಸಗಳು ನಿಧಾನಗತಿಯಲ್ಲಿ ಸಾಗುವುದಕ್ಕೆ ಮನಸ್ಸಿಗೆ ಬೇಸರ ಉಂಟಾಗುವುದು. ಸುತ್ತಮುತ್ತಲಿನ ವಾತಾವರಣದಲ್ಲಿನ ಬದಲಾವಣೆಯ ಲಕ್ಷಣಗಳು ಕಣ್ಣಿಗೆ ಬೀಳಲಿದೆ. ಸಂತೋಷದಿಂದ ದಿನ ಕಳೆಯುವಿರಿ.
  • ಮಕರ
  • ಹಣಕಾಸಿನ ವ್ಯವಹಾರ ನಡೆಸುವವರು ತಮ್ಮ ನೂತನ ಯೋಜನೆಗಳನ್ನು ಇನ್ನೂ ಕೆಲವು ಕಡೆಯಲ್ಲಿ ವಿಸ್ತರಿಸಬಹುದು. ಗೆಳೆತನಕ್ಕೆ ಸಂಬಂಧಿಸಿದ ಒಂದು ಗುಪ್ತವಾದ ವಿಚಾರವು ಸೋರಿಕೆಯಾಗಬಹುದು.
  • ಕುಂಭ
  • ವಿದ್ಯಾರ್ಥಿಗಳಿಗೆ ಓದು ಅಥವಾ ಉದ್ಯೋಗದ ಆಯ್ಕೆ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ಸಹನಾಶೀಲರಾಗಿ ವರ್ತಿಸಿದಲ್ಲಿ ಪ್ರಯತ್ನಬಲಕ್ಕೆ ಸರಿಯಾದಂಥ ಯಶಸ್ಸು ಸಿಗುತ್ತದೆ.
  • ಮೀನ
  • ಅಧಿಕಾರಿಗಳ ಭೇಟಿಯಿಂದ ಕೆಲಸ ಕಾರ್ಯಗಳು ಏರು-ಪೇರಾಗುವುದು. ಹೊಸ ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ತೆರೆದಿದೆ. ಆತಂಕವು ದೂರವಾಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.