ADVERTISEMENT

ದಿನ ಭವಿಷ್ಯ: ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ದೊರೆಯುತ್ತವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಡಿಸೆಂಬರ್ 2025, 18:30 IST
Last Updated 20 ಡಿಸೆಂಬರ್ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸ್ವಯಂಕೃತ ಅಪರಾಧದಿಂದ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಬರಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಬರುವುದು. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ದೊರೆಯುತ್ತವೆ.
  • ವೃಷಭ
  • ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ. ಏಕೆಂದರೆ ಅದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅವಿವಾಹಿತರು ಅಸ್ಪಷ್ಟ ನಿಲುವನ್ನು ಹೋಗಲಾಡಿಸಿದಲ್ಲಿ ಕಂಕಣಬಲದ ಸಾಧ್ಯತೆಯಿದೆ.
  • ಮಿಥುನ
  • ದುಃಖಗಳನ್ನೆಲ್ಲವನ್ನೂ ಮೀರಿ ಮುಖದಲ್ಲಿ ಮಂದಹಾಸ ಇರಲಿ.ಸಮಾಜದಲ್ಲಿ ಗೌರವಯುತ ಸ್ಥಾನಮಾನಗಳು ನಿಮಗೆ ದೊರಕುತ್ತವೆ. ಮೇಧಾವಿಗಳೊಂದಿಗಿನ ಸಂಪರ್ಕದಿಂದ ನಿಮ್ಮ ಅರಿವು ಹೆಚ್ಚಾಗಲಿದೆ.
  • ಕರ್ಕಾಟಕ
  • ಅಧಿಕಾರಿ ವರ್ಗದವರ ಉತ್ತೇಜನದಿಂದಾಗಿ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಜಯ ಲಭಿಸುವ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕಯಿಂದಿದ್ದರೆ ಎಲ್ಲವನ್ನೂ ಸುಲಭವಾಗಿ ನಿಭಾಯಿಸಬಹುದು.
  • ಸಿಂಹ
  • ನಿಮ್ಮಲ್ಲಿನ ಏಕಾಗ್ರತೆಯಿಂದಾಗಿ ಹೆಚ್ಚಿನ ಜವಾಬ್ದಾರಿಯ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಬಹುದು. ನಿಯಮ, ನಿಷ್ಠೆಗಳಿಂದ ಸಂಘದ ಅಧಿಕಾರದಲ್ಲಿ ಪದೋನ್ನತಿ ಪಡೆಯಬಹುದು.
  • ಕನ್ಯಾ
  • ವಾಹನಗಳ ಅಥವಾ ದೊಡ್ಡ ದೊಡ್ಡ ಯಂತ್ರಗಳಲ್ಲಿ ಕೆಲಸ ಮಾಡುವವರಿಗೆ ಜಾಗ್ರತೆ ಅಗತ್ಯ. ಉದ್ಯಮಿಗಳು ತಮ್ಮ ಕಾರ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಸಫಲರಾಗುವಿರಿ.
  • ತುಲಾ
  • ಕೆಲವು ಪ್ರಮುಖ ಕಾರ್ಯಗಳನ್ನು ಮಾಡುವಾಗ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು, ಅವನ್ನು ಲೆಕ್ಕಿಸದೆ ಗುರಿ ಸಾಧನೆಯ ಬಗ್ಗೆ ಯೋಚಿಸಿರಿ. ಖಾಸಗಿ ಗುಮಾಸ್ತ ಕೆಲಸದಲ್ಲಿದ್ದವರಿಗೆ ಪೂರ್ಣ ವಿರಾಮ ಸಿಗುವ ಸಾಧ್ಯತೆ ಇದೆ.
  • ವೃಶ್ಚಿಕ
  • ಈ ದಿನ ಸಿಗುವ ಅನಿರೀಕ್ಷಿತ ಅವಕಾಶಗಳನ್ನು ಮುಜುಗರವಿಲ್ಲದೆ ಬಳಸಿಕೊಳ್ಳದ್ದಿದ್ದರೆ ನಿಮ್ಮ ದಡ್ಡತನ ಪ್ರದರ್ಶಿಸಿದಂತಾಗುವುದು. ಇಂದು ಸಂದರ್ಶನ ನಡೆಸುವಲ್ಲಿ, ಯೋಗ್ಯತೆಯನ್ನು ಪರೀಕ್ಷಿಸುವಲ್ಲಿ ಕಷ್ಟಪಡುವಿರಿ.
  • ಧನು
  • ಕೆಲಸ ತಿರಸ್ಕರಿಸಿದವರು ಪುನಃ ಹಿಂದಿನ ಕಂಪನಿಯನ್ನೇ ಆಶ್ರಯಿಸುವ ಬಗ್ಗೆ ಯೋಚಿಸಿ. ಅಧಿಕಾರಿ ವರ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಜನಸಾಮಾನ್ಯರಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ದೊರಕುತ್ತದೆ.
  • ಮಕರ
  • ಶೈಕ್ಷಣಿಕ ರಂಗದಲ್ಲಿನ ನಿಮ್ಮ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಗಳಿಸಿಕೊಳ್ಳಬಹುದು. ನಿಮ್ಮಲ್ಲಿದ್ದ ಪ್ರತಿಭೆಯನ್ನು ಇತರರು ಗಮನಿಸುವರು. ಆಸ್ತಿ ಕೊಳ್ಳುವ ನಿರ್ಧಾರದಲ್ಲಿ ನಿಮ್ಮ ಮನೋಭಾವವನ್ನು ಬದಲಿಸಿಕೊಳ್ಳಿ.
  • ಕುಂಭ
  • ವಿದೇಶ ಪ್ರಯಾಣದ ನಿಮ್ಮ ಹಲವು ವರ್ಷದ ಕನಸು ನೆರವೇರುವ ಅವಕಾಶ ಸಿಗುವುದು. ಕಾರ್ಮಿಕರ ಸಮಸ್ಯೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿ ಅವರ ಮನಸ್ಸಿನಲ್ಲಿ ಉತ್ತಮ ಸ್ಥಾನವನ್ನು ಸಂಪಾದಿಸಿಕೊಳ್ಳುವಂತೆ ಆಗಲಿದೆ.
  • ಮೀನ
  • ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವ ಸೂಚನೆ ಕಾಣುತ್ತದೆ. ಅವಶ್ಯಕತೆ ಇರುವ ಜಾಗದಲ್ಲಿ ಅತ್ಯಂತ ಜಿಪುಣತನವನ್ನು ತೋರಿಸಿ ಸಮಾಜದಲ್ಲಿ ಗೌರವವನ್ನು ಕಳೆದುಕೊಳ್ಳುವಂತಾಗಬಹುದು ಎಚ್ಚರ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.