ADVERTISEMENT

ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅಧಿಕ ಲಾಭ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಫೆಬ್ರುವರಿ 2026, 22:30 IST
Last Updated 16 ಫೆಬ್ರುವರಿ 2026, 22:30 IST
   
ಮೇಷ
  • ಉದ್ವೇಗ ಹಾಗೂ ಕೆಲ ವೈಮನಸ್ಸುಗಳು ತಂದೆಯ ತಿಳಿವಳಿಕೆ ನುಡಿಯಿಂದ ದೂರಾಗುವುದು.  ಆರಿಸಿಕೊಂಡ ಮಾರ್ಗದಲ್ಲಿ ಸರಿ  ಬಗ್ಗೆ ಯೋಚಿಸಿ ಏಕಾಗ್ರತೆಯಿಂದ ಮುನ್ನಡೆಯಿರಿ.
  • ವೃಷಭ
  • ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಆತಂಕಕ್ಕೆ ಕಾರಣವಾಗಬೇಕಿಲ್ಲ. ಆಫೀಸಿನ ಕೆಲಸಗಳು ಬೇಗನೇ ಮುಗಿಸಿ. ಪರೀಕ್ಷಾ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಕೆಲಸವನ್ನು ಪರೀಕ್ಷಿಸಬಹುದು.
  • ಮಿಥುನ
  • ಆಟಿಕೆಗಳ ಮಾರಾಟದವರಿಗೆ ಮತ್ತು ಉಡುಗೊರೆ ವಸ್ತುಗಳ ಮಾರಾಟಗಾರರಿಗೆ ಉತ್ತಮ ಮಾರಾಟ ಹಾಗೂ ಲಾಭವಿರುವುದು. ಉನ್ನತ ಶಿಕ್ಷಣದವರಿಗೆ ಕೀರ್ತಿ ಮತ್ತು ಸಾಮಾಜಿಕ ಗೌರವ ಪ್ರಾಪ್ತಿ.
  • ಕರ್ಕಾಟಕ
  • ನಿಯೋಜಿತ ಕೆಲಸಗಳನ್ನು ಉತ್ಸಾಹದಿಂದ ಮಾಡಿ ಮುಗಿಸುವಿರಿ. ಇನ್ನೊಂದು ಹೊಸ ಕೆಲಸ ನಿಮಗಾಗಿ ಕಾದಿರಲಿದೆ. ಮೇಧಾಕರ ದಕ್ಷಿಣಾಮೂರ್ತಿಯ ಆರಾಧನೆ  ಸುಲಭವಾಗಿ ಯಶಸ್ಸಿನ ದಾರಿ ತೋರಿಸಲಿದೆ.
  • ಸಿಂಹ
  • ಭೂ ಖರೀದಿಯಂಥ ಅಥವಾ ಗೃಹ ನಿರ್ಮಾಣ ಕಾರ್ಯದಂಥ ಕನಸಿನ ಯೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಸಹಚರರಿಂದ ಅಥವಾ ಅಧಿಕಾರಿಗಳಿಂದ ಅಸಹಕಾರದ ಪರಿಸ್ಥಿತಿ ಎದುರಾಗಬಹುದು.
  • ಕನ್ಯಾ
  • ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬೇಡಿ. ಯಂತ್ರೋಪಕರಣಗಳ ಸಹಾಯದಿಂದ ಕೆಲಸ ಮಾಡುವ ವೇಳೆಯಲ್ಲಿ ಅಪಾಯ ಸಂಭವಿಸಬಹುದು.
  • ತುಲಾ
  • ಆತ್ಮೀಯರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸಲಾಗದೇ ಬಿಡಲೂ ಆಗದೇ ಚಡಪಡಿಸುವ ಪರಿಸ್ಥಿತಿ ನಿಮ್ಮದಾಗುತ್ತದೆ. ನಿಮ್ಮ ಮೇಲುಸ್ತುವಾರಿಯಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿವೆ.
  • ವೃಶ್ಚಿಕ
  • ಸಾಹಸಪ್ರಿಯತೆ ಮನೋಭಾವವು ಆವರಿಸಲಿದ್ದು ಚಾರಣ ಅಥವಾ ಸವಾಲಿನ ಕೆಲಸಗಳನ್ನು ಮಾಡುವಿರಿ. ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಂತಸ ಹಾಗೂ ಸಮಾಧಾನ ತರಲಿದೆ.
  • ಧನು
  • ವಿಲಾಸೀ ವಸ್ತುಗಳ ಖರೀದಿ  ಮಾಡುವ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ತೋರಲಿದೆ. ನಿಮ್ಮ ಸೇವಾ ಮನೋಭಾವಕ್ಕೆ ಕುಟುಂಬ ವರ್ಗದವರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ.
  • ಮಕರ
  • ಜೀವನದಲ್ಲಿ ಹಳೆಯ ಘಟನೆಗಳಿಂದ ಕಲಿತ ಪಾಠ ಉತ್ತಮ ತಿಳಿವಳಿಕೆಗೆ ಕಾರಣವಾಗುವುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅನೇಕ ತರಹದ ಅವಕಾಶಗಳು ಒದಗಿ ಬರುತ್ತವೆ.
  • ಕುಂಭ
  • ಅಭಿಪ್ರಾಯಗಳು ಬೇರೆಯವರ ಆಲೋಚನೆಗೆ ಹೊಂದಿಕೊಳ್ಳುವುದು ಬಹಳ ಕಷ್ಟಕರ ಎನಿಸಲಿದೆ. ನಿಯೋಜಿತ ಕಾರ್ಯ ಕಲಾಪಕ್ಕೆ  ಪುಟ್ಟ ಆತಂಕಗಳು ಎದುರಾಗಲಿವೆ.
  • ಮೀನ
  • ಮಕ್ಕಳ ವಿಷಯದಲ್ಲಿ ಸಂಯಮದೊಂದಿಗೆ ವರ್ತಿಸುವುದು ಉತ್ತಮ. ಸಂತೋಷವಾಗಿ ದಿನ ಕಳೆಯುವ ಹಾಗೆ ಆಗುವುದು.  ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.