ADVERTISEMENT

ದಿನ ಭವಿಷ್ಯ: ಸದಾಕಾಲ ಪಕ್ಕದಲ್ಲಿಯೇ ಇರುವ ಪರಿಚಿತರಿಂದ ವಂಚನೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಡಿಸೆಂಬರ್ 2025, 22:30 IST
Last Updated 25 ಡಿಸೆಂಬರ್ 2025, 22:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಈ ದಿನ ನೀವು ಕುಟುಂಬಸ್ಥರೊಂದಿಗೆ ಸಂತೋಷದಿಂದ ವರ್ತಿಸುವುದು ಒಳ್ಳೆಯದು. ಧೈರ್ಯ ಮತ್ತು ಅಧಿಕ ಪ್ರಯತ್ನದಿಂದ ಮುನ್ನುಗ್ಗಿದಲ್ಲಿ ಮುಖ್ಯವಾದ ಕೆಲಸವೊಂದು ದಿನದ ಅಂತ್ಯದ ವೇಳೆಗೆ ನೆರವೇರುವುದು.
  • ವೃಷಭ
  • ಯಾವುದೇ ರಂಗದಲ್ಲಾದರೂ ನಿಮ್ಮ ಬಯಕೆಗೆ ತಕ್ಕಂತೆ ದೂರ ಕ್ರಮಿಸುವ ಸಾಮರ್ಥ್ಯ ನಿಮಗಿದೆ. ಧ್ಯಾನ, ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದುವಿರಿ. ತೆಂಗಿನಕಾಯಿ ವ್ಯಾಪಾರಿಗಳಿಗೆ ಹೆಚ್ಚು ಲಾಭವಿದೆ.
  • ಮಿಥುನ
  • ಆಸ್ತಿ ಕೊಳ್ಳುವುದರಲ್ಲಾಗಲಿ, ಮನೆ ಕಟ್ಟುವ ವಿಚಾರದಲ್ಲಾಗಲಿ ಅದೃಷ್ಟ ನಿಮ್ಮ ಪಾಲಿಗಿದೆ. ನಿಮ್ಮ ದುಡುಕು ನಿರ್ಧಾರಗಳಿಂದ ಇತರರಿಗೆ ನೋವಾಗಬಹುದು. ಚಂಡಿಕಾ ಪಾರಾಯಣದಿಂದ ನೆಮ್ಮದಿ ದೊರಕಲಿದೆ.
  • ಕರ್ಕಾಟಕ
  • ಈ ದಿನ ಉದ್ಯೋಗರಂಗದಲ್ಲಿ ಮೇಲಾಧಿಕಾರಿ ವರ್ಗದವರ ಕಿರಿಕಿರಿ ಇದ್ದರೂ ನಿಮ್ಮ ಪ್ರಯತ್ನಬಲಕ್ಕೆ ಯಶಸ್ಸು ದೊರಕಲಿದೆ. ಶ್ರಮ ಜೀವಿಗಳಿಗೆ ಶ್ರಮಕ್ಕೆ ಮೀರಿದ ಪ್ರತಿಫಲ ಸಿಗಲಿದೆ.
  • ಸಿಂಹ
  • ನ್ಯಾಯಾಲಯದ ವಿಚಾರಗಳಲ್ಲಿ ಮಧ್ಯಸ್ಥಿಕೆ ಅಥವಾ ರಾಜಿಯ ಮನೋಭಾವವು ಕಾರ್ಯದ ಅನುಕೂಲಕ್ಕೆ ಸಾಧಕವಾಗುತ್ತದೆ. ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕುಗಳನ್ನು ಸ್ನೇಹಿತನ ಸಹಾಯದಿಂದ ನಿವಾರಿಸಿಕೊಳ್ಳುವಿರಿ.
  • ಕನ್ಯಾ
  • ನಿಮ್ಮ ಸುತ್ತಮುತ್ತಲಿನವರ ಜೊತೆಯಲ್ಲಿ ಸಂಬಂಧಗಳು ಕೆಡಲುಆಸ್ಪದಕೊಡದಿರಿ. ಭೂಮಿಗೆ ಸಂಬಂಧಿಸಿದಂತೆ ವ್ಯವಹಾರ ನೆಡೆಸುವವರಿಗೆ ಶುಭ ದಿನ. ವಿಮಾ ಸಲಹೆಗಾರರಿಗೆ ಅತ್ಯುತ್ತಮ ದಿನವಾಗಲಿದೆ.
  • ತುಲಾ
  • ಸದಾಕಾಲ ಪಕ್ಕದಲ್ಲಿಯೇ ಇರುವ ಪರಿಚಿತರಿಂದ ವಂಚನೆಯಾಗುವ ಸಾಧ್ಯತೆಯಿದೆ. ಅನವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ಇರುವುದು. ನಿಮ್ಮ ಹಿತಾಸಕ್ತಿಗಳಿಗೆ ಹೆಚ್ಚಿನ ಗಮನವನ್ನು ಕೊಡಿ.
  • ವೃಶ್ಚಿಕ
  • ಪರೋಪಕಾರಗಳನ್ನು ಮಾಡಿ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳುವಿರಿ. ನಿಮ್ಮೆಲ್ಲ ಆಕಾಂಕ್ಷೆಗಳ ಸಿದ್ಧಿಯಾಗಿ, ಧಾರ್ಮಿಕ ಪ್ರವೃತ್ತಿಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
  • ಧನು
  • ಕಳೆಯಿತು ಎಂದುಕೊಂಡ ರೋಗವೊಂದು ಮತ್ತೆ ನಿಮ್ಮನ್ನು ಬೆಂಬಿಡದೆ ಕಾಡಿಸುತ್ತದೆ. ಪೊಲೀಸ್ ಅಧಿಕಾರಿಗಳಿಗೆ ತುರ್ತು ಕೆಲಸ ಒದಗಿಬರುವುದು. ವಾಹನ ಖರೀದಿಯಂತಹ ವಿಚಾರದಲ್ಲಿ ಕೈಯನ್ನು ಖಾಲಿ ಮಾಡಿಕೊಳ್ಳಬೇಡಿ.
  • ಮಕರ
  • ಮನೋಬಲದ ಜೊತೆಯಲ್ಲಿ ಆರ್ಥಿಕ ಬಲವನ್ನು ದೃಢವಾಗಿಸಿಕೊಂಡರೆ ಮಾತ್ರ ಕಾರ್ಯ ಸಾಧಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಪ್ರಮುಖ ವಿಚಾರದಲ್ಲಿ ಮುಂದಿನ ಹೆಜ್ಜೆಯಿಡಲು ಸೂಕ್ತ ಸಮಯವಲ್ಲ.
  • ಕುಂಭ
  • ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ದೊರೆಯಲಿದೆ. ಸಾಮಾಜಿಕ ವರ್ತನೆಯಲ್ಲಿ ಸ್ಥಿರತೆ , ಸಮತೋಲನ ಕಾಯ್ದುಕೊಳ್ಳಿ. ಎಂತಹ ದುಸ್ಥಿತಿಯಿಂದಲೂ ಹೊರ ಬರುವ ಸಾಮರ್ಥ್ಯ ನಿಮ್ಮಲ್ಲಿದೆ.
  • ಮೀನ
  • ಹಣಕಾಸು ಸಂಸ್ಥೆಗೆ ಪಾಲುದಾರರಾಗಿ ಸೇರಿಕೊಳ್ಳುವ ಯೋಚನೆಯಲ್ಲಿರುವವರಿಗೆ ವ್ಯವಹಾರದ ಉದ್ದಗಲವು ತಿಳಿಯುವುದು. ಔಷಧಿ ವಸ್ತುಗಳ ಮಾರಾಟದಿಂದ ಹೆಚ್ಚು ಲಾಭವಿದೆ. ಆರ್ಥಿಕ ಭದ್ರತೆ ಬಗ್ಗೆ ತಯಾರಿ ನಡೆಸಿಕೊಳ್ಳಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.