ADVERTISEMENT

ದಿನ ಭವಿಷ್ಯ: ಮಾತಿನಿಂದಾಗಿ ಮನೆಯಲ್ಲಿ ಯುದ್ಧದ ವಾತಾವರಣ ನಿರ್ಮಾಣ ಮಾಡಿಕೊಳ್ಳದಿರಿ

ಭಾನುವಾರ, 16 ನವೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ನವೆಂಬರ್ 2025, 22:59 IST
Last Updated 15 ನವೆಂಬರ್ 2025, 22:59 IST
   
ಮೇಷ
  • ಮೇಲಧಿಕಾರಿಗಳು ಹಾಗೂ ಹಿರಿಯರು ನಿಮ್ಮ ಕೆಲಸಗಳಲ್ಲಿ ಸಹಕಾರ ನೀಡುತ್ತಾರೆ. ನಿಮ್ಮ ಉತ್ತಮ ಧ್ಯೇಯೋದ್ಧೇಶಕ್ಕಾಗಿ ಇಂದಿನಿಂದ ಹೆಚ್ಚಿನ ಶ್ರಮ ಪಡುವಿರಿ. ಉದ್ಯೋಗರಂಗದಲ್ಲಿ ಅನಿರೀಕ್ಷಿತ ಬೆಳವಣಿಗೆ ಕಂಡು ಬರುವುದು.
  • ವೃಷಭ
  • ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆಯಿದ್ದು, ಹೆಚ್ಚಿನ ಗಮನವಿರಲಿ. ಕುಟುಂಬಸ್ಥರ ನಿಧನದಿಂದ ದುಃಖವಾಗುತ್ತದೆ. ವಿದ್ಯಾಭ್ಯಾಸದಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಹೊಂದುತ್ತೀರಿ.
  • ಮಿಥುನ
  • ಫಲಾಫಲಗಳನ್ನು ಅರಿತು ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದರೆ ಕಹಿ ಸನ್ನಿವೇಶಗಳು ಸಹಜ ಸ್ಥಿತಿಗೆ ಮರಳಲಿವೆ. ನಿರುದ್ಯೋಗಿಗಳಿಗೆ ಹಂಗಾಮಿ ನೌಕರಿ ದೊರೆಯುವ ಮಾರ್ಗ ಸಿಗಲಿದೆ.
  • ಕರ್ಕಾಟಕ
  • ಬಾಲ್ಯದಲ್ಲಿ ಕಲಿತ ಅಥವಾ ತಿಳಿದುಕೊಂಡಿದ್ದ ಕೆಲ ವಿಷಯಗಳು ವೃತ್ತಿಪರವಾಗಿ ಇಂದು ಉಪಯೋಗಕ್ಕೆ ಬರಲಿವೆ. ಹತ್ತಿರದ ಬಂಧುಗಳನ್ನು ಅನಿರೀಕ್ಷಿತವಾಗಿ ಕಂಡು ನಿಮಗೆ ಹರ್ಷ ಉಂಟಾಗುತ್ತದೆ.
  • ಸಿಂಹ
  • ಶ್ರದ್ಧೆ, ತಾಳ್ಮೆಯಿಂದ ಹಾಗೂ ಹಿಂದಿನ ಸೋಲು ಹೇಳಿಕೊಟ್ಟ ಪಾಠದಿಂದ ನಿಮ್ಮ ಪಾಲಿನ ಕಾರ್ಯ ಸಿದ್ಧಿಯಾಗುವುದು. ಕೆಲವರು ನಡೆಸುತ್ತಿರುವ ಕಾನೂನುಬಾಹಿರವಾದ ವಿಚಾರಗಳನ್ನು ಬಯಲು ಮಾಡುವಿರಿ.
  • ಕನ್ಯಾ
  • ಸಂಗಾತಿಯ ಮನಸ್ಸಿನ ಮಾತುಗಳನ್ನು ಅರಿತು ಅದನ್ನು ಈಡೇರಿಸುವ ಸಂಕಲ್ಪ ಮಾಡುವಿರಿ. ಮಕ್ಕಳಿಂದ ಅಚ್ಚರಿಯ ಸುದ್ದಿ ಕೇಳುವಿರಿ. ಹಿಂದೆ ರೂಪಿಸಿದ್ದ ಯೋಜನೆಗಳು ಯಶಸ್ಸು ಕಾಣುವುದನ್ನು ಕಂಡು ಸಂತಸಪಡುವಿರಿ.
  • ತುಲಾ
  • ಜ್ಞಾನ ಸಂಪಾದನೆಯ ಮಾರ್ಗದಲ್ಲಿ ಉತ್ತಮವಾದ ಗುರುವಿನ ಕೊರತೆಯಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ. ನೀವು ಗಳಿಸಿದ ಸಂಪಾದನೆಯಲ್ಲಿ ತೃಪ್ತಿ ಹೊಂದುವುದು ಅತ್ಯಗತ್ಯ.
  • ವೃಶ್ಚಿಕ
  • ವೃತ್ತಿರಂಗದಲ್ಲಿ ಹೊಸ ಹೆಜ್ಜೆ ಇಡುವವರಿಗೆ ವಿದ್ಯಾರ್ಹತೆಗಿಂತ ನಿಮ್ಮ ಸ್ವಪ್ರತಿಭೆ ಬಹಳ ಮುಖ್ಯವಾದದ್ದು ಎಂಬುವುದು ಅರಿವಾಗುವುದು. ಮನೆಯಲ್ಲಿ ಮಾತಿನಿಂದಾಗಿ ಯುದ್ಧದ ವಾತಾವರಣ ನಿರ್ಮಾಣ ಮಾಡಿಕೊಳ್ಳದಿರಿ.
  • ಧನು
  • ಮನೆಯಿಂದ ದೂರ ಇರುವ ಮಕ್ಕಳ ವರ್ತನೆಗಳು ಪದೇ ಪದೇ ನೆನಪಾಗುತ್ತದೆ. ಸ್ಟೇಷನರಿ ಹೋಲ್‌ಸೇಲ್ ವ್ಯಾಪಾರ ವಿಸ್ತರಿಸುವ ಬಗ್ಗೆ ‌ಮಾತುಕತೆ ನಡೆಸಿ. ನಿಮ್ಮ ವ್ಯಕ್ತಿತ್ವವು ಇತರರನ್ನು ವಿಶೇಷವಾಗಿ ಆಕರ್ಷಿಸುವುದು.
  • ಮಕರ
  • ಮಗಳಿಗೆ ಅನುರೂಪ ವರ ದೊರೆತು ನೆಮ್ಮದಿ ಕಂಡು ಬರುವುದು. ಸಮಸ್ಯೆಗಳ ಬಗ್ಗೆಯೆ ಹೆಚ್ಚು ಯೋಚನೆ ಮಾಡುವುದರಿಂದ ಅದರ ಬಗ್ಗೆ ಪರಿಹಾರ ಸಿಗುವ ಸೂಚನೆಗಳಿಲ್ಲ. ವಾತ ಸಂಬಂಧಿ ಕಾಯಿಲೆಗಳು ಆಗಬಹುದು.
  • ಕುಂಭ
  • ವಿವಾಹದ ವಿಚಾರದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿಷ್ಠುರವಾದ ತೀರ್ಮಾನ ತೆಗೆದುಕೊಳ್ಳದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾದೀತು. ದೂಷಿಸಿದ ವ್ಯಕ್ತಿಗಳಿಗೆ ನಿಮ್ಮ ಅಭಿವೃದ್ಧಿಯನ್ನು ನೋಡಿ ಸಹಿಸಲಾಗದು.
  • ಮೀನ
  • ಸುಖ-ದುಃಖ, ಲಾಭ-ನಷ್ಟಗಳೆರಡೂ ಸಮಾನವಾಗಿದ್ದರೂ ಪ್ರತಿಷ್ಟಿತ ಜನರ ಸಹಕಾರದಿಂದ ಸುಧಾರಣೆಯಾಗಲಿದೆ. ಅಸಾಧಾರಣ ರೀತಿಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.