ADVERTISEMENT

ದಿನ ಭವಿಷ್ಯ: ಈ ರಾಶಿಯವರು ಸಾಲ ಕೊಡುವ ವ್ಯವಹಾರವನ್ನೇ ಇಟ್ಟುಕೊಳ್ಳಬೇಡಿ

2026ರ ಫೆಬ್ರುವರಿ 6, ಶುಕ್ರವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಫೆಬ್ರುವರಿ 2026, 19:30 IST
Last Updated 5 ಫೆಬ್ರುವರಿ 2026, 19:30 IST
   
ಮೇಷ
  • ಅಧಿಕಾರಿ ವರ್ಗದವರಿಗೆ ಅವರ ತಪ್ಪುಗಳನ್ನು ತಿಳಿಸುವಲ್ಲಿ ಧೈರ್ಯ ಸಾಮರ್ಥ್ಯದ ಜೊತೆಯಲ್ಲಿ ಸಹೋದ್ಯೋಗಿಗಳ ಉತ್ತೇಜನವನ್ನು ಪಡೆಯುವಿರಿ. ಶಿಕ್ಷಕ ವರ್ಗದವರಿಗೆ ಜವಾಬ್ದಾರಿಯುತ ಕೆಲಸಗಳು ಬರಲಿವೆ.
  • ವೃಷಭ
  • ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಮಾಧಾನ ತರಲಿದೆ. ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನವನ್ನು ಅನುಭವಿಸುವ ಸಮಯ ಹತ್ತಿರವಿದೆ. ವ್ಯವಹಾರದಲ್ಲಿ ಮಧ್ಯಮವರ್ಗದ ಲಾಭ ಹೊಂದುವಿರಿ.
  • ಮಿಥುನ
  • ಹೆಂಡತಿಯ ತವರು ಮನೆಗೋಸ್ಕರವಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬರಬಹುದು. ಹೊಸ ಕನಸು ಹಾಗು ಉತ್ಸಾಹದಿಂದ ಕೆಲಸವನ್ನು ಶುರು ಮಾಡುವಿರಿ. ಸಾಲ ಕೊಡುವಂತಹ ವ್ಯವಹಾರಗಳು ನಿಮಗೆ ಬೇಡ.
  • ಕರ್ಕಾಟಕ
  • ವಿಚಾರಗಳನ್ನು ವಿವಾದಕ್ಕೊಳಗಾಗದಂತೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗುವಿರಿ. ದೊರೆತಿರುವ ಖ್ಯಾತಿಯನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಿ. ಹೆಂಡತಿಯ ಆರೋಗ್ಯದಲ್ಲಿ ಸುಧಾರಣೆ ಕಾಣುವಿರಿ.
  • ಸಿಂಹ
  • ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ ಲಭಿಸಲಿವೆ. ಪ್ರೀತಿಪಾತ್ರರ ಜೊತೆ ಸಂತಸದ ಸಮಯವನ್ನು ಕಳೆಯುವಿರಿ. ಆದಾಯಕ್ಕೆ ಹಲವು ಹೊಸ ಮೂಲಗಳನ್ನು ಹುಡುಕುವಿರಿ.
  • ಕನ್ಯಾ
  • ರಾಜಕೀಯ ವ್ಯಕ್ತಿಗಳಿಗೆ ಸ್ಥಾನ ಬಲಪಡಿಸುವ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳಿಂದ ಬಹಳ ಉಪಯೋಗವಾಗಲಿದೆ. ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವತಾವರಣ ಉಂಟಾಗುವುದು.
  • ತುಲಾ
  • ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳುವ ಯೋಗವಿದೆ. ಈ ದಿನ ಬಂಗಾರ, ದೊಡ್ಡ ಮಟ್ಟದ ಹಣ ಇವುಗಳನ್ನು ಹಿಡಿದುಕೊಂಡು ಸಂಚರಿಸು ವುದು ಸರಿಯಲ್ಲ. ಆಹಾರ ಶೈಲಿಯಿಂದ ಆರೋಗ್ಯ ಹಾಳಾಗಬಹುದು.
  • ವೃಶ್ಚಿಕ
  • ಬೇರೆಯವರ ಬಗ್ಗೆ ಅನುಕಂಪ ತೋರುವ ಬಗ್ಗೆಯೂ ಗಮನ ಹರಿಸುವುದನ್ನು ಮರೆಯದಿರಿ. ಮನೆಯ ಹೆಣ್ಣು ಮಗಳಿಗೆ ಮದುವೆಗೆ ಹುಡುಗ ಸಿಗುವ ಸಾಧ್ಯತೆ ಇದೆ. ಹೊಸ ಜನರ ಸಂಪರ್ಕವು ಉತ್ತಮ ಧನಲಾಭ ತರಲಿದೆ.
  • ಧನು
  • ಖರ್ಚುಗಳನ್ನು ಬಿಟ್ಟು ಕೆಲವು ಮನೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸುವುದಕ್ಕಾಗಿ ಹಣ ಖರ್ಚು ಮಾಡಬೇಕಾಗಿ ಬರುವುದು. ವ್ಯವಹಾರದಲ್ಲಿ ಗೆಳೆಯನ ಮಾತುಗಳನ್ನು ಕೇಳಿದರೆ ಲಾಭವಾಗುವುದು.
  • ಮಕರ
  • ನೂತನ ಸಂಸ್ಥೆಯೊಂದರಲ್ಲಿ ಉತ್ತಮ ಉದ್ಯೋಗ ಪಡೆದುಕೊಳ್ಳಲು ಯೋಚಿಸುವಿರಿ. ಮಾರಕ ವಸ್ತುಗಳ ಜೊತೆಗಿನ ಕೆಲಸದಲ್ಲಿ ಎಚ್ಚರಿಕೆ ವಹಿಸಿ. ಭಾವನಾತ್ಮಕವಾಗಿ ಸ್ನೇಹಿತರು ಹಾಗೂ ಕುಟುಂಬದವರ ಸಹಕಾರ ಸಿಗಲಿದೆ.
  • ಕುಂಭ
  • ಹೊಸ ಉದ್ಯೋಗ ಒಪ್ಪಿಕೊಳ್ಳುವಾಗ ಅಥವಾ ಕರಾರಿಗೆ ಸಹಿ ಮಾಡುವಾಗ ವಕೀಲರನ್ನು ಅಥವಾ ಸಲಹೆಗಾರರನ್ನು ಭೇಟಿ ಮಾಡುವುದು ಒಳ್ಳೆಯದು. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಶುಭವಾಗುವುದು.
  • ಮೀನ
  • ಕೊಟ್ಟ ಹಣ ಹಿಂದುರುಗುವುದು ಕಷ್ಟಸಾಧ್ಯ. ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆರಡೂ ಇರುವಿಕೆಯನ್ನು ತಿಳಿಸಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.