ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಬಂಧುಗಳ ಮಾತಿನಿಂದ ನೋವಾಗಬಹುದು

2026ರ ಫೆಬ್ರುವರಿ 8, ಭಾನುವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಫೆಬ್ರುವರಿ 2026, 19:30 IST
Last Updated 7 ಫೆಬ್ರುವರಿ 2026, 19:30 IST
   
ಮೇಷ
  • ಸಹಚರರಿಂದ ಅಥವಾ ಅಧಿಕಾರಿಗಳಿಂದ ನಿಮಗೆ ಅಸಹಕಾರದ ಪರಿಸ್ಥಿತಿ ಎದುರಾಗಬಹುದು. ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಕಂಡುಕೊಳ್ಳುವ ಸ್ಥಿತಿ ಬರಲಿದೆ. ಋಣ ಪರಿಹಾರವಾಗಿ ನೆಮ್ಮದಿ ಮೂಡುವುದು.
  • ವೃಷಭ
  • ಜಾಹೀರಾತು ಏಜೆನ್ಸಿಯಲ್ಲಿರುವವರಿಗೆ ಏಳಿಗೆ ಹಾಗೂ ಪ್ರಚಾರ ತರುವ ಸೂಕ್ತ ವಿಚಾರದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಆತ್ಮಾಭಿಮಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಿ.
  • ಮಿಥುನ
  • ದುಬಾರಿ ವಸ್ತುಗಳನ್ನು ಖರೀದಿಸುವ ಹಾಗೂ ಅದರ ಅವಶ್ಯಕತೆಯ ಕುರಿತು ನಿಮ್ಮ ಮನೆಯವರೊಂದಿಗೆ ಚರ್ಚಿಸಿ ಬಳಿಕ ಖರೀದಿಸಿ. ದಿನಗೂಲಿ ಕೆಲಸವನ್ನು ಮಾಡುವವರಿಗೆ ಈ ದಿನ ಸ್ವಲ್ಪ ಅಸ್ಥಿರತೆ ಕಾಡಬಹುದು.
  • ಕರ್ಕಾಟಕ
  • ಕಲಾವಿದರಿಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಗುವುವು. ಸಂಸಾರದಲ್ಲಿ ಬಿರುಕು ಮೂಡದಂತೆ ನೋಡಿಕೊಳ್ಳಿ. ಹಣಕಾಸಿನ ಸಂಸ್ಥೆಗೆ ಪಾಲುದಾರರಾಗುವ ಸಾಧ್ಯತೆ ಇದೆ.
  • ಸಿಂಹ
  • ಅಕ್ಕಪಕ್ಕದವರ ಅಥವಾ ಸ್ನೇಹಿತರ ಹೊಗಳಿಕೆಯ ಮಾತುಗಳಿಗೆ ಕಿವಿಗೊಟ್ಟು ಮರುಳಾಗಬೇಡಿ. ಬಂಧುಗಳ ಮಾತು ಮನಸ್ಸನ್ನು ನೋಯಿಸುವುದು. ಅದರಿಂದಾಗಿ ಮನಸ್ಸು ನಿರಾಸಕ್ತಿಯ ಭಾವನೆಯಿಂದ ಇರುವುದು.
  • ಕನ್ಯಾ
  • ಸಹೋದರಿಯ ಮದುವೆಯಂತಹ ಸಂದರ್ಭಕ್ಕೆ ಆಪ್ತರೊಬ್ಬರು ನೆರವಿಗೆ ಬರಲಿದ್ದಾರೆ. ಆಸ್ತಿ ಕೊಳ್ಳುವ ವಿಷಯದಲ್ಲಿ ಹೆಂಡತಿಯೊಂದಿಗೆ ಮಾತುಕತೆ ನಡೆಸಿ. ಹಿರಿಯ ಸಹೋದ್ಯೋಗಿಗಳಿಂದ ಬೈಗುಳ ಕೇಳಬೇಕಾಗುವುದು.
  • ತುಲಾ
  • ನಿಮ್ಮ ಮನಃಸ್ಥಿತಿಯು ಯಾರೊಂದಿಗೂ ಬೆರೆಯದೆ, ಕೆಲಸ ಕಾರ್ಯಗಳ ತ್ತಲೇ ಇರುವುದು. ಮಕ್ಕಳ ಭವಿಷ್ಯದ ಕುರಿತಾಗಿ ಆಳವಾದ ಚಿಂತನೆ ನಡೆಸುವಿರಿ. ಪರರಿಗೆ ಸಹಾಯ ಮಾಡುವ ಮನೋಭಾವದಿಂದ ಮುನ್ನಡೆ ಇರುವುದು.
  • ವೃಶ್ಚಿಕ
  • ಆಪ್ತರ ಕಷ್ಟಗಳ ಕಡೆಗೆ ಗಮನ ಹರಿಸುವುದು ಪುಣ್ಯದ ಕೆಲಸವೆಂದು ಭಾವಿಸಿ, ಹೊರತಾಗಿ ಪ್ರತಿಫಲವನ್ನು ಅಪೇಕ್ಷಿಸಬೇಡಿ. ಅಂದುಕೊಂಡಿರುವ ಕೆಲಸಗಳು ಉತ್ತಮವಾಗಿ ನೆರವೇರಿವುದರಿಂದ ನೆಮ್ಮದಿ ಇರುವುದು.
  • ಧನು
  • ಸಿಹಿ ವಿಚಾರವನ್ನು, ಅವಕಾಶಗಳನ್ನು ಮತ್ತು ಕಹಿಯ ಸಂಗತಿಯನ್ನು ಮುಕ್ತ ಮನಸ್ಸಿನಿಂದ ಸಮಾನವಾಗಿ ಸ್ವೀಕರಿಸಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರಾಗುವುವು.
  • ಮಕರ
  • ನಿಮ್ಮ ಅಭಿರುಚಿಗೆ ಹೊಂದುವಂತಹ ಜನರೊಂದಿಗೆ ಒಡನಾಟ ಬೆಳೆಸಿ ನೆಮ್ಮದಿ ಸಿಗುತ್ತದೆ. ಕಾರಣಾಂತರದಿಂದ ಇಂದು ಕೆಲವು ವ್ಯಕ್ತಿಗಳನ್ನು ನಿರ್ಲಕ್ಷಿ ಸುವಿರಿ. ಚರ್ಮದ ವಸ್ತು ವ್ಯಾಪಾರಿಗಳಿಗೆ ಲಾಭದಾಯಕ ದಿನ.
  • ಕುಂಭ
  • ಐ.ಟಿ. ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ. ಅದರ ಪರಿಣಾಮವಾಗಿ ವರಮಾನ ಹೆಚ್ಚಳದ ಸಂಭವವು ಇರುವುದು. ಮನೆಯವರ ಅಥವಾ ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ.
  • ಮೀನ
  • ಇಂಟೀರಿಯರ್ ಡೆಕೊರೇಟರ್ ಕೋರ್ಸ್ ಕಲಿಯುವಂತಹ ಆಸೆ ಹೊಂದಿದವರಿಗೆ ಶುಭ ಕಾಲ. ಸಗಟು ಧಾನ್ಯ ವರ್ತಕರಿಗೆ ಈ ದಿನ ಲಾಭ ಹೆಚ್ಚಿರುವುದು. ಸೋದರನ ಓದಿಗಾಗಿ ಖರ್ಚು ಮಾಡಬೇಕಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.