ದಿನ ಭವಿಷ್ಯ: ಗುಂಪು ಚಟುವಟಿಕೆಯಲ್ಲಿ ಮುಂದಾಳತ್ವವು ನಿಮ್ಮದಾಗಲಿದೆ
ಶುಕ್ರವಾರ, 14 ನವೆಂಬರ್ 2025
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ನವೆಂಬರ್ 2025, 19:04 IST
Last Updated 13 ನವೆಂಬರ್ 2025, 19:04 IST
ಮೇಷ
ಹಲವು ವಾದ ವಿವಾದಗಳಿಂದ ಸಂಬಂಧದಲ್ಲಿ ಉಂಟಾದ ಒಡಕು ಗಳು ಸಮಾಧಾನದ ಮಾತುಗಳಿಂದಾಗಿ ಪರಿಹಾರವಾಗುತ್ತವೆ. ಮನೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಜನರು ಬರಲಿದ್ದಾರೆ.
ವೃಷಭ
ದೇಶಭಕ್ತಿಯ ಹೆಸರಿನಲ್ಲಿ ನಡೆಸಿರುವ ಹಾಗೂ ನಡೆಸುವ ಕಾರ್ಯಗಳು ಜನಮಾನ್ಯವಾಗುತ್ತವೆ. ಗುಂಪು ಚಟುವಟಿಕೆಯಲ್ಲಿ ಮುಂದಾಳತ್ವವು ನಿಮ್ಮದಾಗಲಿದೆ. ಸಾಂಸಾರಿಕ ಜವಾಬ್ದಾರಿಗಳು ಹೆಚ್ಚಲಿವೆ.
ಮಿಥುನ
ಸೂರ್ಯೋದಯದೊಳಗೆ ಮನಸಂಕಲ್ಪ ನೆರವೇರಿಸಿಕೊಳ್ಳಲು ಸರ್ವಪ್ರಯತ್ನ ನಡೆಸುವಿರಿ. ಧನ ಆದಾಯಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕಗಳು ಇರುವುದಿಲ್ಲ. ಮಾರ್ಗದರ್ಶಕರ ಸಲಹೆ ಪಡೆದು ಪಾಲಿಸಿರಿ.
ಕರ್ಕಾಟಕ
ದಾನ-ಧರ್ಮ ಸ್ವಭಾವ ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಿ. ಗೃಹ ಉತ್ಪಾದಕ ವಸ್ತುಗಳ ಮಾರಾಟದಲ್ಲಿ ಲಾಭವಾಗುವ ಸಾಧ್ಯತೆಗಳಿವೆ. ತಂಗಿಯರ ವಿದ್ಯಾಭ್ಯಾಸದಲ್ಲಿ ಮೇಲ್ವಿಚಾರಣೆ ನಡೆಸಿ.
ಸಿಂಹ
ಸ್ಥಿರ ಆಸ್ತಿಯನ್ನು ಸಂಪಾದಿಸುವಲ್ಲಿ ನಿರ್ಣಯದಲ್ಲಿ ದೃಢವಾಗಿ ನಿಲ್ಲುವಂತಹ ತೀರ್ಮಾನವನ್ನು ಮಾಡಿಕೊಳ್ಳಿರಿ. ಸಂಬಂಧಿಗಳಲ್ಲಿ ಆದರ ಭಾವದಿಂದ ನಡೆದುಕೊಳ್ಳುವಿರಿ. ಪ್ರಯಾಣಕ್ಕೆ ಹೆಚ್ಚು ಧನ ವ್ಯಯ ಆಗುವುದು.
ಕನ್ಯಾ
ಮನೆಯಲ್ಲಿ ಸುಖ-ಶಾಂತಿ ಸಮೃದ್ಧಿಯಾಗಿದ್ದರೂ ಮನದಲ್ಲಿ ಮಕ್ಕಳ ವಿಚಾರವಾಗಿ ಭಯದ ಭೀತಿ ತೋರಿಬಂದೀತು. ನೆರೆ ಮನೆಯವರ ಶುಭ ಸಮಾರಂಭಕ್ಕೆ ಹೋಗುವ ಸಲುವಾಗಿ ಕಿರು ಪ್ರಯಾಣ ಇರುವುದು.
ತುಲಾ
ವ್ಯವಹಾರದಲ್ಲಿನ ಹಿಂದಿನ ನಿರ್ಧಾರಗಳು ಒಳಿತಿಗಾಗಿ ಬದಲಾಗುವ ಸಂಭವವಿದೆ. ಕಳೆದು ಹೋದ ವಸ್ತುವನ್ನು ಸಮಾಧಾನದ ಶೋಧನದಿಂದಾಗಿ ಪಡೆದುಕೊಳ್ಳುವಿರಿ. ಪ್ರವಾಸ ಯೋಜನೆಗಳು ಕಾರ್ಯ ರೂಪಕ್ಕೆ ಬರಲಿವೆ.
ವೃಶ್ಚಿಕ
ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಸಂಪಾದನೆಯ ಜತೆಯಲ್ಲಿ ಉಡುಗೊರೆ ಸಿಗುವ ಯೋಗ. ಮುಗ್ಧವಾದ ಮಕ್ಕಳ ಆಟೋಪಚಾರವನ್ನು ಕಂಡು ಹರ್ಷಗೊಳ್ಳುವಿರಿ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ಧನು
ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವ ಆಹಾರವನ್ನು ಸೇವಿಸದಿರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು.
ಮಕರ
ಉದ್ಯೋಗದ ಬದುಕಿನಲ್ಲಿ ತಪ್ಪಿ ಹೋಗಿದ್ದ ಅವಕಾಶಗಳು ದೊರೆಯಲಿವೆ. ಬಹುಜನರ ಒಡನಾಟದಿಂದ ವಿಶ್ವಾಸ, ಪ್ರೀತಿ ಪಡೆಯುವಂತಾಗುವುದು. ಸಹಿಯನ್ನು ನಕಲು ಪಡಿಸುವವರಿದ್ದಾರೆ. ಎಚ್ಚರವಾಗಿರಿ.
ಕುಂಭ
ಮನೆಯಲ್ಲಿನ ಮಂಗಳ ಕಾರ್ಯಕ್ರಮಕ್ಕೆ ಆಪ್ತರ ನೆರವು ದೊರೆಯದೆ ಖೇದ ಉಂಟಾದರೂ ಹಠದಿಂದ ಉತ್ತಮವಾಗಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಸ್ವಪ್ರಯತ್ನದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ಮೀನ
ಗ್ರಾಮ ಪಂಚಾಯ್ತಿಯಂಥ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಭಾರ ಹೊರಬೇಕಾಗುವುದು. ಸ್ವಪ್ನಸದೃಶ್ಯವಾದ ಘಟನೆಗಳನ್ನು ನೋಡುವ ಸಾಧ್ಯತೆ ಇದೆ. ಕೃಷಿಕರಿಗೆ ಕೃಷಿಯಲ್ಲಿ ಉತ್ಸಾಹ ಹೆಚ್ಚುವಂತಾಗಲಿದೆ.