ADVERTISEMENT

ದಿನ ಭವಿಷ್ಯ: ಹೆಂಡತಿಯ ಮಾತಿಗೆ ಕಿವಿಗೊಡಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಫೆಬ್ರುವರಿ 2026, 22:30 IST
Last Updated 21 ಫೆಬ್ರುವರಿ 2026, 22:30 IST
   
ಮೇಷ
  • ಮನಸ್ಸು ಧ್ಯಾನದತ್ತ ಹರಿಯಲು ಧಾರ್ಮಿಕ ವಿಚಾರಧಾರೆಯಂತಹ ಸಮಾರಂಭಗಳ ಆಲಿಕೆಯು ಕಾರಣವಾಗುವುದು. ಕಣ್ಣಿನ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು ಅನಾಹುತಕ್ಕೆ ಕಾರಣವಾಗುವುದು.
  • ವೃಷಭ
  • ಉದ್ಯಮಿಗಳು, ವಿದ್ಯಾರ್ಥಿಗಳು ಪ್ರಗತಿ ಸಾಧಿಸುವರು. ಕಲಾವಿದರಿಗೆ ಹಾಗೂ ನಟ ನಟಿಯರಿಗೆ ಉತ್ತಮ ಅವಕಾಶಗಳು ಒದಗಿಬರುವುವು. ಮಕ್ಕಳ ತುಂಟತನದ ಬಗ್ಗೆ ಗಮನವಿರಲಿ.
  • ಮಿಥುನ
  • ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಕೆಲಸದ ಅಸ್ಥಿರತೆ ಅನುಭವಕ್ಕೆ ಬರಲಿದೆ. ಮಹಿಳೆಯರಿಗೆ ಕಚೇರಿಯ ಒತ್ತಡದಲ್ಲಿ ಮನೆಯ ಮುಖ್ಯ ಕೆಲಸಗಳತ್ತ ಗಮನ ಕಡಿಮೆಯಾಗುವುದು.
  • ಕರ್ಕಾಟಕ
  • ವೃತ್ತಿರಂಗದಲ್ಲಿ ಸಂದರ್ಭಕ್ಕೆ ಸರಿಯಾಗಿ ವರ್ತಿಸುವುದರಿಂದ ಲಾಭವಾಗುವುದು. ಆದರೆ, ಈ ದಿನದ ನಿಮ್ಮ ವರ್ತನೆಯನ್ನು ನಾಳೆಗೆ ಕಾಪಾಡಿ ಕೊಳ್ಳುವುದು ಕಷ್ಟವಾಗುತ್ತದೆ. ನೇರ ನುಡಿ ಗೆಳೆತನಕ್ಕೆ ಸಂಕಷ್ಟವಾಗಬಹುದು.
  • ಸಿಂಹ
  • ವ್ಯವಹಾರದಲ್ಲಿ ನಿಮ್ಮಿಂದ ಮೋಸ ನಡೆದು ಹಣ ಸಂಗ್ರಹವಾಗುವುದು ಮತ್ತು ಅದರ ದುಷ್ಫಲವನ್ನು ಅನುಭವಿಸುವಂತಾಗುವುದು. ಮಡದಿಯ ಸಲಹೆಗಳಿಗೆ ಗಮನ ನೀಡಿ ಸ್ವಪ್ರಯತ್ನದಿಂದ ಕೆಲಸದಲ್ಲಿ ಮುನ್ನುಗ್ಗಿ.
  • ಕನ್ಯಾ
  • ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರದಲ್ಲಿ ಎಂದಿಗೂ ಮರೆಯಲಾಗದ ಒಂದು ಕಹಿ ಘಟನೆ ನಡೆಯಬಹುದು. ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ. ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ.
  • ತುಲಾ
  • ನೆರೆಹೊರೆಯವರೊಂದಿಗೆ ಮತ್ತು ಸಹೋದರಿಯವರೊಂದಿಗೆ ಸೌಹಾರ್ದದಿಂದ ವರ್ತಿಸಿ. ಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಯೋಗ ಕೂಡಿ ಬರುವುದು. ಖರ್ಚು ವೆಚ್ಚಗಳು ಈ ದಿನ ತಗ್ಗುವುವು
  • ವೃಶ್ಚಿಕ
  • ಮಿತ್ರರ ಚಾಣಾಕ್ಷತನ, ಮಾತುಗಾರಿಕೆ ಯನ್ನು ನೋಡಿ ಕಲಿಯುವುದರಿಂದ ವ್ಯಾಪಾರದಲ್ಲಿ ಪ್ರಗತಿ ಇರುವುದು. ಗೃಹ ಕೃತ್ಯದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ವ್ಯಾಸಂಗಕ್ಕಾಗಿ ಹಣದ ವ್ಯವಸ್ಥೆ ಆಗುವುದು.
  • ಧನು
  • ನಿಮ್ಮ ಮಾತು, ಸಕಾಲದ ಆರ್ಥಿಕ ನೆರವು ಸೋದರಿಯ ಸಂಸಾರ ನೆಲೆ ನಿಲ್ಲುವುದಕ್ಕೆ ಕಾರಣವಾಗಲಿದ್ದು, ಅದರಿಂದ ನಿಮ್ಮ ಜವಾಬ್ದಾರಿ ಪೂರೈಸಿದ ತೃಪ್ತಿ ಈ ದಿನ ದೊರೆಯಲಿದೆ. ಸಾಲದ ಹಣ ಹಿಂತಿರುಗಿಸುವಲ್ಲಿ ಗಮನವಿರಲಿ.
  • ಮಕರ
  • ವೃತ್ತಿಗಿಂತ ಪ್ರವೃತ್ತಿಗೆ ಸಮಯ ಕೊಡುವುದು ಹೆಚ್ಚಲಿದೆ. ಉದ್ಯಮಿಗಳಿಗೆ ವಿದೇಶ ವ್ಯವಹಾರಗಳಿಂದ ಹೆಚ್ಚಿನ ಲಾಭ ಪ್ರಾಪ್ತಿಯಾಗುವುದು. ನಿಮ್ಮ ಸುತ್ತಲಿನ ವಾತಾವರಣ ಸಂತಸದಾಯಕವಾಗಿ ಇರುತ್ತದೆ.
  • ಕುಂಭ
  • ನೂತನ ಅಧಿಕಾರಿಗಳ ಆಗಮನದಿಂದಾಗಿ ಕಚೇರಿಯಲ್ಲಿ ಹೆಚ್ಚಿನ ಕೆಲಸಗಳು ಬರಲಿವೆ. ಕಾರ್ಖಾನೆಯ ವಿದ್ಯುತ್ ಲೋಪಗಳನ್ನು ಸರಿಪಡಿಸಲು ಅಧಿಕ ವೆಚ್ಚವಾಗುವುದು. ಹಿರಿಯರ ಆಸ್ತಿ ನಿಮ್ಮ ಪಾಲಿಗೆ ಬರಲಿದೆ.
  • ಮೀನ
  • ಕೆಲವು ಮಾನಸಿಕ ತೊಂದರೆಗಳು ಎದುರಾಗಬಹುದು. ಆದರೆ, ದೊಡ್ಡ ಸಮಸ್ಯೆ ಉಂಟಾಗುವ ಪರಿಸ್ಥಿತಿ ಕಂಡುಬರುವುದಿಲ್ಲ. ಹಾಲಿನ ಡೇರಿ ಪದಾರ್ಥಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆ ಹಾಗೂ ಲಾಭ ತರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.