ದಿನ ಭವಿಷ್ಯ: ಈ ರಾಶಿಯವರು ಹೊಸ ವಾಹನವನ್ನು ಖರೀದಿಸುವ ಸಾಧ್ಯತೆ ಇದೆ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ಡಿಸೆಂಬರ್ 2025, 23:30 IST
Last Updated 27 ಡಿಸೆಂಬರ್ 2025, 23:30 IST
ಮೇಷ
ಇತರರಿಗೆ ಅಸೂಯೆಯಾಗದಂತೆ ಕಾರ್ಯಗಳನ್ನು ಸಾಧಿಸಿಕೊಳ್ಳುವ ಗುಣವನ್ನು ವೃದ್ಧಿಸಿಕೊಳ್ಳಿ. ಹೊಸ ವಾಹನ ಖರೀದಿಸುವ ನಿಮ್ಮ ಬಯಕೆ ಈಡೇರುವ ಸಾಧ್ಯತೆ ಇದೆ.
ವೃಷಭ
ಪಾಲುದಾರರೊಂದಿಗೆ ಮಾತುಕತೆ ನಡೆಸುವ ಅನಿವಾರ್ಯತೆ ಎದುರಾಗಲಿದೆ. ತರಕಾರಿ, ಸೊಪ್ಪು ಬೆಳೆಗಾರರಿಗೆ ಅಧಿಕ ಲಾಭ. ಅನ್ಯರ ಭಾವನೆಗಳಿಗೆ ಬೆಲೆ ಕೊಡುವುವನ್ನು ಅಭ್ಯಾಸ ಮಾಡಿಕೊಳ್ಳಿ.
ಮಿಥುನ
ಮದುವೆಯ ವಿಚಾರದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡಬೇಡಿ. ಮನರಂಜನೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಸಂತೋಷವಾಗುವುದು.
ಕರ್ಕಾಟಕ
ಮಡದಿ ಮತ್ತು ಮಕ್ಕಳೊಂದಿಗಿನ ಬಿಡುವಿನ ಸಮಯ ಕಳೆಯುವಿರಿ.ಮನೆ ಕಟ್ಟುವ ನಿಮ್ಮ ಆಸೆಗೆ ಸಹೋದರರಿಂದ ಪ್ರೋತ್ಸಾಹ ಸಿಗುವುದು. ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡೂ ತೃಪ್ತಿತರಲಿದೆ.
ಸಿಂಹ
ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಹೊಸ ಯೋಜನೆಗಳಿಗೆ ಸಹಕಾರಿ. ಪ್ರಯಾಣದಲ್ಲಿನ ಒಂಟಿತನ ಸಮಾನ ಮನಸ್ಕರ ಭೇಟಿಯಿಂದಾಗಿ ನಿವಾರಣೆಯಾಗುವುದು. ಪುಣ್ಯಕ್ಷೇತ್ರಗಳಿಗೆ ಹೋಗಿಬರುವಂತಹ ಯೋಗವಿದೆ.
ಕನ್ಯಾ
ಶೀಘ್ರವಾಗಿ ನಿರ್ದಿಷ್ಟವಾದ ಕಾರ್ಯವೊಂದನ್ನು ಪೂರೈಸಲೇಬೇಕೆಂಬ ನಿಮ್ಮ ಯೋಚನೆಯು ಕನಸಾಗಿಯೇ ಉಳಿಯುವುದು. ಕುಟುಂಬದಲ್ಲಿ ಅಥವಾ ನೆರೆಯವರೊಂದಿಗೆ ಬಾಂಧವ್ಯ ವೃದ್ಧಿಯಾಗಲಿದೆ.
ತುಲಾ
ರಫ್ತು ವ್ಯಾಪಾರಗಳಲ್ಲಿ ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗದಂತೆ ವ್ಯವಹರಿಸಿ. ರಬ್ಬರ್ ಅಥವಾ ಪ್ಲಾಸ್ಟಿಕ್ ವ್ಯವಹಾರದಲ್ಲಿರುವವರು ಉತ್ತಮ ಲಾಭವನ್ನು ಹೊಂದುವಿರಿ. ಬದುಕಿನಲ್ಲಿ ನೆಲೆ ನಿಂತ ನೆಮ್ಮದಿ ಸಿಗಲಿದೆ.
ವೃಶ್ಚಿಕ
ವಿನೂತನ ಕೆಲಸವನ್ನು ಸ್ಟಾರ್ಟಪ್‌ನ ರೀತಿಯಲ್ಲಿ ಪಾಲುದಾರಿಕೆಯೊಂದಿಗೆ ಪ್ರಾರಂಭಿಸಲು ಸ್ನೇಹಿತರಿಂದ ಒತ್ತಾಯ ಬರಲಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಆ ವಿಚಾರದ ಬಗ್ಗೆ ವಿಮರ್ಶಿಸಿ.
ಧನು
ಕೃಷಿಯಲ್ಲಿ ಸಣ್ಣ ಉಳಿತಾಯ ಮಾಡುವಿರಿ. ಇದರಿಂದಾಗಿ ಭವಿಷ್ಯದ ಚಿಂತೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಉನ್ನತ ವ್ಯಾಸಂಗಕ್ಕೆ ವಿದೇಶಯಾನ ಮಾಡುವ ತಯಾರಿ ನಡೆಸುವಿರಿ.
ಮಕರ
ಶ್ರಮಜೀವಿಗಳಾದ ನಿಮಗೆ ಹಿರಿಯರ ಆಶೀರ್ವಾದವಿದ್ದರೆ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಅಪೇಕ್ಷಿಸಬಹುದು. ನಿಮ್ಮಲ್ಲಿ ಸಾಲ ಮಾಡಿದ ವ್ಯಕ್ತಿಗಳು ಬಾಕಿ ಬಾಬ್ತು ಹಿಂದಿರುಗಿಸುವರು. ರಾಜಕೀಯದಲ್ಲಿ ಜಯವನ್ನು ಸಾಧಿಸುವಿರಿ.
ಕುಂಭ
ನಾಯಕರಾಗಿ ನೀವು ನೀಡುವ ಸಲಹೆ ಸೂಚನೆಯಂತೆಯೇ ನಡೆದುಕೊಳ್ಳಲು ನಿಮ್ಮಸಹೋದ್ಯೋಗಿಗಳಿಗೆ ತಿಳಿಸಿ. ವಾತಾವರಣಕ್ಕೆ ಪೂರಕವಾದ ಆಹಾರ ಸೇವನೆಯಿಂದಾಗಿ ಅನಾರೋಗ್ಯದಿಂದ ಪಾರಾಗುವಿರಿ.
ಮೀನ
ನೂತನ ಗೃಹ ನಿರ್ಮಾಣ ಮಾಡುವ ಆಲೋಚನೆಯು ಕುಟುಂಬದ ಸದಸ್ಯರ ಸಂತಸಕ್ಕೆ ಕಾರಣವಾಗುತ್ತದೆ. ಆದರೆ ಅದಕ್ಕಾಗಿ ವಿವಿಧ ರೀತಿಯ ವೈಯಕ್ತಿಕ ಖರ್ಚುಗಳನ್ನೆಲ್ಲಾ ನಿಲ್ಲಿಸಬೇಕಾದಂತಹ ಪರಿಸ್ಥಿತಿ ಎದುರಿಸುವಿರಿ.