ADVERTISEMENT

ದಿನ ಭವಿಷ್ಯ: ಈ ರಾಶಿಯವರು ವಿವಾದಗಳಿಂದ ದೂರವಿರುವುದನ್ನು ಅಭ್ಯಸಿಸಿಕೊಳ್ಳಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಆಗಸ್ಟ್ 2023, 23:31 IST
Last Updated 19 ಆಗಸ್ಟ್ 2023, 23:31 IST
   
ಮೇಷ
  • ನೀವು ಆರಿಸಿಕೊಂಡ ಮಾರ್ಗದಲ್ಲಿ ಸರಿ ತಪ್ಪುಗಳ ಬಗ್ಗೆ ಯೋಚಿಸಿ ಮುನ್ನಡೆಯಿರಿ. ಕೌಟುಂಬಿಕವಾಗಿ ಜವಾಬ್ದಾರಿಗಳನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡುವ ಬಗ್ಗೆ ಗಮನಹರಿಸಿ. ಹೊಸ ಸ್ಪೂರ್ತಿಯಿಂದ ಕಾರ್ಯ ನಿರ್ವಹಿಸಿ.
  • ವೃಷಭ
  • ಮಂಗಳ ಕಾರ್ಯಕ್ಕೆ ಭಾಗಿಯಾಗಲು ದೂರ ಪ್ರಯಾಣ ಮಾಡಬೇಕಾಗುತ್ತದೆ. ವೃತ್ತಿಗೆ ಸಂಬಂಧಿಸಿದಂತೆ ಶತ್ರುಬಾಧೆ ಎದುರಾಗಬಹುದು, ನಿಮ್ಮ ದೈಹಿಕ ಮತ್ತು ಧಾರ್ಮಿಕ ಪ್ರಯತ್ನದಿಂದ ಸುಧಾರಿಸಿಕೊಳ್ಳಬಹುದು.
  • ಮಿಥುನ
  • ವೈದ್ಯ ವೃತ್ತಿಯವರಿಗೆ ತೃಪ್ತಿಕರವಾದ ವರಮಾನ ಪ್ರಾಪ್ತಿಯಾಗುತ್ತದೆ. ಮಂಗಳ ಕಾರ್ಯಗಳು ಸುಗಮವಾಗಿ ನಡೆಯಲೆಂದು ಮನೆ ದೇವರಿಗೆ ಪೂಜೆ ಸಲ್ಲಿಸುವಿರಿ. ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು.‌
  • ಕರ್ಕಾಟಕ
  • ವೈದ್ಯರು ಅದರಲ್ಲೂ ನರ ರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ನಿರ್ಲಕ್ಷ್ಯ ಅಥವಾ ಬೇಜವಬ್ದಾರಿತನದಿಂದ ಪಾಪ ಸಂಗ್ರಹಣೆಯಾಗುವುದು. ಹೆಚ್ಚಿನ ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ.
  • ಸಿಂಹ
  • ಆಫೀಸಿನ ಕೆಲಸಗಳಲ್ಲಿ ಕೆಲವೊಂದು ವಿಷಯಗಳನ್ನು ಪರಾಮರ್ಶಿಸಲೇಬೇಕಾದ ಸಮಯ ಬರಲಿದೆ. ಅನಿವಾರ್ಯದ ಮಾತುಗಳನ್ನು ಯೋಚಿಸಿ ಮಾತನಾಡಿ. ತಂದೆ-ತಾಯಿಯವರ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.
  • ಕನ್ಯಾ
  • ಹಿರಿಯರ ಭೇಟಿಯಿಂದಾಗಿ ಕುಟುಂಬದ ಬಗೆಗಿನ ವಿಚಾರಗಳು ತಿಳಿಯಲಿದೆ. ದಾಖಲೆ ಪರಿಶೀಲನೆಯಿಂದ ಆದಾಯ ತೆರಿಗೆಯನ್ನು ಪಾವತಿಸುವಿರಿ.
  • ತುಲಾ
  • ಸ್ವಂತ ಉದ್ಯೋಗದವರು ಅಧಿಕ ಬಂಡವಾಳ ಹಾಕುವುದರಿಂದ ಕೈ ಸುಡುವಂತಾಗುವುದು. ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ.
  • ವೃಶ್ಚಿಕ
  • ಮಗನ ಸಹಾಯದಿಂದ ಸಂಬಂಧಿಕರೊಬ್ಬರ ಕೆಲಸ ಸುಗಮವಾಗಿ ಕೈಗೂಡುವುದರಿಂದ ಮನಸ್ಸಿಗೆ ಹೆಚ್ಚಿನ ಸಂತಸವಿರುವುದು. ಸಹೋದ್ಯೋಗಿ ಗಳೊಂದಿಗಿನ ಭಿನ್ನಾಭಿಪ್ರಾಯಗಳು ನಿವಾರಣೆಯಾವಂತೆ ವರ್ತಿಸಿ.
  • ಧನು
  • ನಿರುದ್ಯೋಗಸ್ಥರಿಗೆ ಹೊರ ರಾಜ್ಯವೊಂದರಲ್ಲಿ ಕೆಲಸ ನಿರ್ವಹಿಸುವ ಅವಕಾಶ ಎದುರಾದರೆ ಒಪ್ಪಿಕೊಳ್ಳುವುದು ಉತ್ತಮ. ಪ್ರಾಮಾಣಿಕವಾಗಿ ನಡೆಯುವ ನಿಮಗೆ ವ್ಯವಹಾರಗಳಲ್ಲಿ ಉತ್ತಮ ಆದಾಯ ಇರುವುದು.
  • ಮಕರ
  • ಆಡಳಿತಾತ್ಮಕ ವಿಚಾರದಲ್ಲಿ ಬದಲಾವಣೆಗಳ ಅಗತ್ಯವನ್ನು ಸಂಸ್ಥಾಪಕರಿಗೆ ಮನವರಿಕೆ ಮಾಡಿಕೊಡುವಿರಿ. ಒಂದು ಘಟನೆಯಿಂದಾಗಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂಬುದು ನಿಮಗೆ ತಿಳಿಯಲಿದೆ.
  • ಕುಂಭ
  • ಈ ದಿನ ಹಣಕಾಸಿನ ವ್ಯವಹಾರದಲ್ಲಿ ಪಾಲುದಾರಿಕೆ ಪಡೆಯುವಿರಿ. ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದದ್ದಾಗಿರುತ್ತದೆ. ಈ ಸಂಜೆ ನೀವು ಪ್ರೀತಿ ಪಾತ್ರರೊಡನೆ ಸಮಯ ಕಳೆಯುವಿರಿ.
  • ಮೀನ
  • ಕೊಟ್ಟ ಮಾತಿನಂತೆ ಕೆಲಸ ನೆರವೇರಿಸಿ ಕೊಡುವುದರಿಂದ ಹೆಸರು ಗಳಿಸಬಹುದು. ಚಿತ್ರರಂಗದವರಿಗೆ ಖ್ಯಾತಿ, ಗೌರವಾನ್ವಿತ ಅವಕಾಶ ದೊರೆಯುವುದು. ವಿವಾದಗಳಿಂದ ದೂರವಿರುವುದನ್ನು ಅಭ್ಯಸಿಸಿಕೊಳ್ಳಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.