ದಿನ ಭವಿಷ್ಯ: ಸಂಸಾರ ನಿರ್ವಹಣೆಗಾಗಿ ಹೆಚ್ಚು ಹಣ ವ್ಯಯಿಸುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ನವೆಂಬರ್ 2025, 21:45 IST
Last Updated 5 ನವೆಂಬರ್ 2025, 21:45 IST
ಮೇಷ
ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡು ವಿದ್ಯಾರ್ಥಿಗಳಿಗೆ ನಿರಾಸೆ ಮೂಡಲಿದೆ. ಹಲವು ದಿನಗಳಿಂದಿರುವ ದೇಹಾಯಾಸವು ಇಂದಿಗೆ ಶಮನವಾಗುವುದು. ಬ್ಯಾಂಕ್ ನೌಕರರು ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಸಫಲರಾಗುವಿರಿ.
ವೃಷಭ
ಹೊಸ ಹುದ್ದೆಯನ್ನು ವಹಿಸಿಕೊಳ್ಳಲು ಬೇಕಾದ ಧೈರ್ಯ ಮತ್ತು ಸಲಹೆಯನ್ನು ಸಹೋದರರಿಂದ ಪಡೆಯುವಿರಿ. ಮಹತ್ವದ ವಿಷಯಗಳನ್ನು ಗಂಭೀರವಾಗಿ ಚಿಂತಿಸುವುದು ಅಗತ್ಯ. ಮಾನಸಿಕ ಉದ್ವೇಗ ಕಂಡುಬಂದೀತು.
ಮಿಥುನ
ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಮಗನಿಗೆ ತಿಳಿಹೇಳಿ.ಸಂಸಾರ ನಿರ್ವಹಣೆಗಾಗಿ ಹೆಚ್ಚು ಹಣ ವ್ಯಯಿಸುವಿರಿ. ಗೃಹ ಕೈಗಾರಿಕೆ ಕೆಲಸಗಳಲ್ಲಿ ಮನೆಯವರ ಪರಿಶ್ರಮ ಸಾರ್ಥಕವೆನಿಸುವುದು.
ಕರ್ಕಾಟಕ
ಸಂಬಂಧಗಳು ಗಟ್ಟಿಗೊಂಡು ಸುರಕ್ಷತೆಯ ಭಾವ ಮೂಡಲಿದೆ. ಉತ್ತಮ ಸನ್ನಿವೇಶ ನಿರ್ಮಾಣವಾಗಲಿದೆ. ಭೂ ವ್ಯವಹಾರಗಳಿಂದ ಹೆಚ್ಚಿನ ಲಾಭ . ಅನಿರೀಕ್ಷಿತ ಪ್ರಯಾಣವು ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ.
ಸಿಂಹ
ಅಧಿಕಾರಿಗಳ ದಿಢೀರ್ ಭೇಟಿಯಿಂದ ಕೆಲಸ ಕಾರ್ಯಗಳು ಏರುಪೇರಾಗುವುದು. ಕಾರ್ಯರಂಗದಲ್ಲಿ ಅಪವಾದದ ಭೀತಿ ಕಾಡಲಿದೆ. ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾದರೂ ಮೂಲಧನಕ್ಕೆ ಮೋಸವಿಲ್ಲ.
ಕನ್ಯಾ
ರಾಸಾಯನಿಕ ವಸ್ತು ವ್ಯಾಪಾರದಿಂದ ಹೆಚ್ಚು ಲಾಭ. ವೈದ್ಯ ವಿದ್ಯಾರ್ಥಿ ಗಳಿಗೆ ಓದಿನತ್ತ ಗಮನ ಹೆಚ್ಚುವುದು. ತೆರೆಮರೆಯಲ್ಲಿ ನಿಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ತಿಳಿಯುವುದು.
ತುಲಾ
ನೃತ್ಯಾಭ್ಯಾಸ ಮುಂದುವರಿಸುವಂತೆ ಮನೆಯವರಿಂದ ಒತ್ತಾಯ ಹೆಚ್ಚುವುದು. ನೃತ್ಯಗಾರರಿಗೆ ಅಪರೂಪದ ಅವಕಾಶ ಸಿಗಲಿದೆ. ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರ ಸಿಗಲಿದೆ. ನಿಮಗೆ ಈ ದಿನ ಅದೃಷ್ಟದ ದಿನವೆನಿಸಲಿದೆ.
ವೃಶ್ಚಿಕ
ಒಂದು ಅನಿಶ್ಚಿತ ಕಾರ್ಯಕ್ರಮಕ್ಕಾಗಿ ಹಣ ಖರ್ಚು ಮಾಡುವಿರಿ. ನೀವು ಅಂದುಕೊಂಡ ಧಾರ್ಮಿಕ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯುವುದು. ತಾಯಿಯ ಆರೋಗ್ಯದ ಬಗ್ಗೆ ಕಳವಳಗೊಳ್ಳುವಿರಿ.
ಧನು
ಮನೆಯಲ್ಲಿ ಹಿರಿಯರಿಗೆ ನೆರವಾಗುವುದರ ಮೂಲಕ ಹಲವು ಸೂಕ್ಷ್ಮತೆ
ಗಳನ್ನು ಅರಿತುಕೊಳ್ಳುವಿರಿ. ದುಡ್ಡಿನ ವಿಚಾರದಲ್ಲಿ ನೀವು ಸ್ವಲ್ಪ ಬಿಗುವಾಗದ ಹೊರತು ನಿಮ್ಮ ಮಕ್ಕಳು ನೀವಂದುಕೊಂಡ ರೀತಿಯಲ್ಲಿ ಇರುವುದಿಲ್ಲ.
ಮಕರ
ಕೆಲವರೊಂದಿಗೆ ಇಂದು ವರ್ತಿಸುವಾಗ ನಿಮ್ಮ ಭಾವನೆಗಳು ಕೃತಕವಾದರೂ ಸಹ ಸಾವಧಾನವಾಗಿ ವರ್ತಿಸುವುದು ಅತ್ಯಗತ್ಯವಾಗಿರುತ್ತದೆ. ವಾಹನವನ್ನು ಮಾರಾಟ ಮಾಡಲು ಪ್ರಯತ್ನಿಸುವಿರಿ.
ಕುಂಭ
ನಿಶ್ಚಯವಾಗಿ ಇಲ್ಲದ ದಿನಚರಿಯ ಕಾರಣ ದೇಹಾಯಾಸವನ್ನು ಅನುಭವಿಸುವಿರಿ. ನಿಮ್ಮನ್ನು ಕಾಪಾಡುತ್ತಿದ್ದ ನ್ಯಾಯಾಧೀಶರನ್ನು ಅನಿವಾರ್ಯ ಕಾರಣದಿಂದ ಬೇಸರಗೊಳಿಸುವಿರಿ. ದಂತ ವೇದನೆ ಉಂಟಾಗಬಹುದು.
ಮೀನ
ವಿದೇಶದಲ್ಲಿ ಕೆಲಸ ಹುಡುಕುತ್ತಿದ್ದವರಿಗೆ ಉತ್ತಮ ಫಲ ದೊರೆಯಲಿದೆ. ಸುಲಭ ಕೆಲಸಗಳನ್ನು ನೀವು ಹೆಚ್ಚು ಯೋಚಿಸುವುದರಿಂದ ಅದು ಬಹಳ ಕ್ಲಿಷ್ಟಕರವಾಗಿ ಕಾಣಲಿದೆ.