ದಿನ ಭವಿಷ್ಯ: ಸೋಮವಾರ, 25 ಆಗಸ್ಟ್ 2025: ಕಾರ್ಮಿಕರಿಗೆ ಆಡಳಿತ ವರ್ಗದಿಂದ ಅನುಕೂಲ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಆಗಸ್ಟ್ 2025, 22:17 IST
Last Updated 24 ಆಗಸ್ಟ್ 2025, 22:17 IST
ದಿನ ಭವಿಷ್ಯ
ಮೇಷ
ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವೆ ಇದ್ದ ಮನಸ್ತಾಪವನ್ನು ಮುಕ್ತ ಹಾಗೂ ಸ್ಪಷ್ಟ ಮಾತುಕತೆಗಳಿಂದ ಬಗೆಹರಿಸಿಕೊಳ್ಳಬಹುದು. ಕಾರ್ಮಿಕರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ.
ವೃಷಭ
ಪಶುಸಂಗೋಪನೆಯಲ್ಲಿ ಮತ್ತು ಪಶು ಆಹಾರ ಮಾರಾಟಗಾರರಿಗೆ ಅಧಿಕ ಲಾಭ ಕಂಡುಬರಲಿದೆ. ಉದ್ಯೋಗರಂಗದಲ್ಲಿ ಅನಿರೀಕ್ಷಿತ ಘಟನೆಗಳು ವಿಶೇಷ ವ್ಯಕ್ತಿಯಾಗಿ ಗುರುತಿಸುವಂತಾಗಲಿದೆ.
ಮಿಥುನ
ಕೆಲ ನಿರ್ಧಾರಗಳನ್ನು ಬದಲಾಯಿಸಿಕೊಳ್ಳುವುದರಿಂದ ಕಾರ್ಯಗಳು ಸುಲಲಿತವಾಗಿ ನೆರವೇರಲಿವೆ. ಒತ್ತಡವನ್ನು ನಿವಾರಿಸಿಕೊಳ್ಳಲು ವಿಶ್ರಾಂತಿ ಪಡೆಯಿರಿ. ಕುಟುಂಬ ಸಂಬಂಧಗಳು ಗಟ್ಟಿಯಾಗಲಿವೆ.
ಕರ್ಕಾಟಕ
ರಫ್ತು ಉದ್ಯಮದವರಿಗೆ ಅಡೆತಡೆಗಳು ಉಂಟಾಗಬಹುದು. ಗೊಂದಲದ ಪರಿಸ್ಥಿತಿಯಿಂದ ಹೊರಬರಲು ಮಾರ್ಗದರ್ಶಕರ ಸಲಹೆ ತೆಗೆದುಕೊಳ್ಳಿ. ಮಹಾಗಣಪತಿಯನ್ನು ಆರಾಧಿಸಿ.
ಸಿಂಹ
ಹಣಕಾಸು ಪರಿಸ್ಥಿತಿ ದುರ್ಬಲವಾಗುವುದರಿಂದ ಒತ್ತಡ ತರುವಂಥ ಕೆಲಸಗಳಿಂದ ದೂರವಿರಿ. ನೂತನ ಕಟ್ಟಡಗಳ ನಿರ್ಮಾಣದ ಗುತ್ತಿಗೆ ಕೆಲಸವು ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಶ್ರೇಯಸ್ಸು, ಮೇಧಾಶಕ್ತಿ ಹೆಚ್ಚಲಿದೆ.
ಕನ್ಯಾ
ಅಧಿಕ ರಕ್ತದೊತ್ತಡದಿಂದ ಬಳಲುವಂತಾಗಬಹುದು. ಸೇವಿಸುವ ಆಹಾರದಲ್ಲಿ ನಿಯಮವಿರಲಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯ ದಿನ. ಸಾಹಿತ್ಯ, ಕಾದಂಬರಿ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುವುದು.
ತುಲಾ
ಸಿಹಿತಿಂಡಿ ತಯಾರು ಮಾಡಿ ಮಾರಾಟ ಮಾಡುವವರಿಗೆ ಬೇಡಿಕೆ ಹೆಚ್ಚಲಿದೆ. ರಾಜಕೀಯವಾಗಿ ಒದಗಿ ಬರಲಿರುವ ಅಧಿಕಾರದ ಅವಕಾಶಗಳನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ.
ವೃಶ್ಚಿಕ
ಬಹುದಿನಗಳ ನಿರಂತರ ಔಷಧಿ ಸೇವನೆಯಿಂದ ಕಾಯಿಲೆ ನಿವಾರಣೆಯಾಗಿ ಆರೋಗ್ಯ ಉತ್ತಮ ಸ್ಥಿತಿಗೆ ಬರುವುದು. ನೂತನ ಯೋಜನೆಗೆ ತಂದೆ-ತಾಯಿಯ ಮೂಲಕ ಆರ್ಥಿಕ ಸಹಾಯ ಸಿಗುವುದು.
ಧನು
ಮಕ್ಕಳ ವಿದ್ಯಾಭ್ಯಾಸ ಹಾಗೂ ದಿನಚರಿಯ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುವುದು. ಕೆಟ್ಟ ಸಹವಾಸ ಮಾಡಿ ದಾರಿ ತಪ್ಪದಂತೆ ನೋಡಿಕೊಳ್ಳಿ. ನವಗ್ರಹಗಳ ಆರಾಧನೆ ಶುಭ ತರಲಿದೆ.
ಮಕರ
ಸರ್ಕಾರಿ ನೌಕರರಿಗೆ ಸುಯೋಗವೆಂದು ಹೇಳಬಹುದು. ಸಹೋದ್ಯೋಗಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳಲಿದೆ. ಅವಶ್ಯಕವಾಗಿರುವ ವಸ್ತುಗಳ ಖರೀದಿಯಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಸಿಗುವುದು.
ಕುಂಭ
ವಿದೇಶಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಲಭಿಸುವುದು. ಆಸ್ಪತ್ರೆ ಸಿಬ್ಬಂದಿಗೆ ಸರ್ಕಾರದಿಂದ ಅನುಕೂಲ ಲಭಿಸುವ ಲಕ್ಷಣವಿದೆ. ಕಫ ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು.
ಮೀನ
ವ್ಯಾಪಾರ ವ್ಯವಹಾರಗಳಿಗೆ ಹೊಸ ತಿರುವು ಮೂಡಲಿದೆ. ಸಮಯ ಪರಿಪಾಲನೆಯ ಬಗ್ಗೆ ಗಮನವಿರಲಿ. ಸಮಯವನ್ನು ವ್ಯವಸ್ಥಿತ ರೀತಿಯಲ್ಲಿ ವಿಭಾಗಿಸಿ, ಸಮಯೋಚಿತವಾಗಿ ಕೆಲಸ ನಿರ್ವಹಿಸಿದರೆ ಬುದ್ಧಿವಂತರಾಗುವಿರಿ.